November 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶುಭಾರಂಭಸಂಘ-ಸಂಸ್ಥೆಗಳು

ಸೌಭಾಗ್ಯ ವಿಕಲಚೇತನರ ಬ್ಯಾಂಕ್ ಸ್ಥಳಾಂತರಿತ ಬೆಳ್ತಂಗಡಿ ಕಚೇರಿ ಉದ್ಘಾಟನೆ

ಬೆಳ್ತಂಗಡಿ: ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ರಾಜ್ಯಮಟ್ಟದಲ್ಲಿ‌ ನೊಂದಾಯಿತಗೊಂಡು ಕಾರ್ಯನಿರ್ವಹಿಸುತ್ತಿರುವ
ಸೌಭಾಗ್ಯ ವಿಕಲಚೇತನರ ಪತ್ತಿನ ಸಹಕಾರ ಸಂಘ ನಿ. ಬೆಳ್ತಂಗಡಿ ಇದರ ಕಚೇರಿಯ ಮೂರನೇ ವರ್ಷಕ್ಕೆ ಪಾದಾರ್ಪಣೆ ಮತ್ತು ತಾ.ಪಂ ಕಟ್ಟಡಕ್ಕೆ ಸ್ಥಾಳಾಂತರಿತಗೊಂಡಿರುವ ನೂತನ ಕಚೇರಿ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ದೀಪ ಬೆಳಗಿಸಿ ಉದ್ಘಾಟಿಸಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿ ಅಧ್ಯಕ್ಷ ಎ.ಯು ಯೋಹಾನ್ನನ್ ವಹಿಸಿದ್ದರು.

ಮಾಜಿ ಎಂಎಲ್‌ಸಿ ಪ್ರತಾಪಸಿಂಹ ನಾಯಕ್ ನೂತನ ಕಚೇರಿಯನ್ನು ರಿಬ್ಬನ್ ಬಿಡಿಸುವ ಮೂಲಕ ಉದ್ಘಾಟಿಸಿದರು.

ಅಪರ ಸರಕಾರಿ ವಕೀಲರು ಹಾಗೂ ಬ್ಯಾಂಕಿನ ಕಾನೂನು ಸಲಹೆಗಾರ ಮನೋಹರ್ ಕುಮಾರ್ ಇಳಂತಿಲ,
ತಾ.ಪಂ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ಜಿ.ಪಂ ಮಾಜಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ, ಹಾಗೂ ಬ್ಯಾಂಕಿನ ಸಲಹೆ ಸಮಿತಿ ಸದಸ್ಯೆ ಸಿ.ಕೆ ಚಂದ್ರಕಲಾ, ತಾಲೂಕು ವಿಕಲಚೇತನರ ಮೇಲ್ವಿಚಾರಕ (ಎಂ‌ಆರ್‌ಡಬ್ಲ್ಯು) ಜೋನ್ ಬ್ಯಾಪ್ಟಿಸ್ಟ್ ಡಿಸೋಜಾ ಉಪಸ್ಥಿತರಿದ್ದರು.

ನಿರ್ಗಮಿತ ತಾ.ಪಂ ಇಒ ಭವಾನಿ‌ಶಂಕರ್ ಅವರನ್ನು ಗೌರವಿಸಲಾಯಿತು.

ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕ ಲಕ್ಷ್ಮಣ, ಸಿಇಒ ವಿದ್ಯಾ, ಬೆಳ್ತಂಗಡಿ ಸಲಹಾ ಸಮಿತಿಯ ಮುಖ್ಯಸ್ಥರಾದ ನಾಮದೇವ ರಾವ್ ಮುಂಡಾಜೆ, ನಾರಾಯಣ ಫಡಕೆ, ಸುರೇಶ್ ಮಾಸ್ಟರ್ ಲಾಯಿಲ, ವಿಪುಲ್ ಪಿ ಪೂಜಾರಿ, ಚಿರಂಜೀವಿ ಮತ್ತು ಎಂ.ಜೆ ಜೋಸೆಫ್, ಸಿಬ್ಬಂದಿ ಸುನೀಲ್‌ ಉಪಸ್ಥಿತರಿದ್ದರು.

ಬ್ಯಾಂಕಿನ ನಿರ್ದೇಶಕ ಹಾಗೂ ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ‌ ಸಂಯೋಜಿಸಿದರು. ಬ್ಯಾಂಕ್ ಸಿಬ್ಬಂದಿಗಳಾದ ಸರೋಜಿನಿ ರಮೇಶ್ ಎಂ.ಕೆ, ಜಿಶಾ ಹಾಗೂ ಇತರ ವಿಆರ್‌ಡಬ್ಲ್ಯು ಗಳು ಸಹಕರಿಸಿದರು.

ವಿಕಲಚೇತನರ ಆರ್ಥಿಕ ಚೈತನ್ಯಕ್ಕಾಗಿ ಈಗಾಗಲೇ 15 ಲಕ್ಷ ರೂ. ಗಳ ಸಾಲ ಒದಗಿಸಿರುವ ಸೌಭಾಗ್ಯ ಬ್ಯಾಂಕ್ ಇತರರಿಗೂ ಆರ್ಥಿಕ ವ್ಯವಹಾರಕ್ಕೆ ನೆರವಾಗುತ್ತಿದೆ. ಖಾತೆ ತೆರೆದು ವ್ಯವಹಾರ, ಆರ್.ಡಿ, ಡೆಪೋಸಿಟ್, ಪಿಗ್ಮಿ ಹೀಗೆ ದೈನಂದಿನ ಎಲ್ಲಾ ರೀತಿಯ ಬ್ಯಾಂಕಿಂಗ್ ವ್ಯವಹಾರ ಒದಗಿಸಿಕೊಂಡು ಬರುತ್ತಿದೆ. ವಿಕಲಚೇತನರಿಗೆ 2% ಬಡ್ಡಿ ರಿಯಾಯಿತಿ ಹಾಗೂ ಡೆಪೋಸಿಟ್ ಗೆ .5 % ಹೆಚ್ಚುವರಿ ಬಡ್ಡಿ ನೀಡುತ್ತಿದೆ.


ಅನೇಕ ವರ್ಷಗಳಿಂದ ಬಾಕಿ ಇರುವ ವಿಕಲಚೇತನರ ತಾಲೂಕು ಸಮಾವೇಶ ಹಮ್ಮಿಕೊಳ್ಳುವುದು ಹಾಗೂ ವಿಕಲಚೇತನರ ಸಂಘಟನೆಯ ಅನುಕೂಲಕ್ಕೆ ಯಾವುದಾದರೂ ಖಾಲಿಯಾಗುವ ಸರಕಾರಿ ಕಟ್ಟಡದಲ್ಲಿ ಸಭಾಂಗಣ ಒದಗಿಸಿಕೊಡುವ ಬಗ್ಗೆ ಶಾಕರಿಗೆ ಈ ವೇಳೆ ಮನವಿ ನೀಡಲಾಯಿತು.

Related posts

ನಡ: ಕನ್ಯಾಡಿ ಶಾಂತಿನಗರದಲ್ಲಿ ಚಿರತೆ ಹಾವಳಿ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢ ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಬೆಳ್ತಂಗಡಿ :ಬೈಕ್- ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ನಾವರ ಗ್ರಾಮದ ಯುವಕ ಸಾವು

Suddi Udaya

ಉಜಿರೆ ಶಾಂತಿವನದಲ್ಲಿ “ಅತಿಸ್ಥೂಲ ನಿರ್ವಹಣೆಗೆ ಯೋಗ ಮತ್ತು ನೈಸರ್ಗಿಕ ಚಿಕಿತ್ಸೆ ಕಾರ್ಯಾಗಾರ ಸಂಪನ್ನ

Suddi Udaya

ಬೆದ್ರಬೆಟ್ಟು ಅರಿಫಾಯ್ಯಾ ಜುಮಾ ಮಸೀದಿಯಲ್ಲಿ ಸಂಭ್ರಮದ ಈದುಲ್‌ ಅಝಾ ಆಚರಣೆ

Suddi Udaya

ಬೆಳ್ತಂಗಡಿಯಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಜಾತ್ರಾ ಮಹೋತ್ಸವಕ್ಕೆ ಹಸಿರು ಹೊರೆ ಕಾಣಿಕೆ ಸಮರ್ಪಣೆಯ ಬಗ್ಗೆ ಸಮಾಲೋಚನಾ ಸಭೆ

Suddi Udaya
error: Content is protected !!