November 17, 2026
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿಸಾಧಕರು

ರಾಜ್ಯಮಟ್ಟದ ಟೇಕ್ವಾಂಡೋ ಚಾಂಪಿಯನ್‌ಶಿಪ್‌ನಲ್ಲಿ ಫಾತಿಮಾ ಅಶ್ಬಾಗೆ ಚಿನ್ನದ ಪದಕದ ಗೌರವ

ಬೆಳ್ತಂಗಡಿ: 2026ನೇ ಸಾಲಿನ 2ನೇ ಓಪನ್ ರಾಜ್ಯಮಟ್ಟದ ಟೇಕ್ವಾಂಡೋ ಚಾಂಪಿಯನ್‌ಶಿಪ್‌ನಲ್ಲಿ ಕಳೆಂಜಿಬೈಲ್ ನಿವಾಸಿ ಫಾತಿಮಾ ಅಶ್ಬಾ ಉತ್ಕೃಷ್ಟ ಪ್ರದರ್ಶನ ನೀಡಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

ಮಾಝ್ ಟೇಕ್ವಾಂಡೋ ಅಕಾಡೆಮಿ ವತಿಯಿಂದ ಆಯೋಜಿಸಲಾದ ಈ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಫಾತಿಮಾ ಅಶ್ಬಾ ಅವರು ತಮ್ಮ ಅದ್ಭುತ ಪ್ರತಿಭೆ, ಪರಿಶ್ರಮ, ಶಿಸ್ತು, ಆತ್ಮವಿಶ್ವಾಸ ಹಾಗೂ ಕಠಿಣ ತರಬೇತಿಯ ಮೂಲಕ ಚಿನ್ನದ ಪದಕ ವಿಜೇತರಾಗಿ ಹೊರಹೊಮ್ಮಿದ್ದಾರೆ.

ಫಾತಿಮಾ ಅಶ್ಬಾ ಅವರು ಪುತ್ತಿಲ ಗ್ರಾಮದ ಕಳಂಜಿಬೈಲ್ ಬೊಟ್ಟುತಲೆ ನಿವಾಸಿಗಳಾದ ಅಶ್ರಫ್ ಬಿ.ಕೆ ಮತ್ತು ಅಚ್ಚಾ ದಂಪತಿಯ ಸುಪುತ್ರಿಯಾಗಿದ್ದಾರೆ. ಗ್ರಾಮೀಣ ಪರಿಸರದಿಂದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿರುವುದು ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಗ್ರಾಮದ ಜನತೆಗೆ ಹೆಮ್ಮೆಯ ವಿಷಯವಾಗಿದೆ.

ಒಂದು ಸಾಧನೆಯ ಹಿಂದೆ ನಿರಂತರ ಪರಿಶ್ರಮ, ಗುರುಗಳ ಮಾರ್ಗದರ್ಶನ, ಪೋಷಕರ ಪ್ರೋತ್ಸಾಹ ಮತ್ತು ಸಾಧಿಸುವ ಛಲ ಇರುತ್ತದೆ. ಫಾತಿಮಾ ಅಶ್ಬಾ ಅವರ ಈ ಸಾಧನೆಯು ಇತರ ಮಕ್ಕಳಿಗೂ ಕ್ರೀಡಾ ಕ್ಷೇತ್ರದಲ್ಲಿ ಮುಂದೆ ಬರಲು ಉತ್ತಮ ಪ್ರೇರಣೆಯಾಗಿದೆ.
ಈ ಸಾಧನೆಗೆ ವಿದ್ಯಾರ್ಥಿನಿಯ ಪ್ರಯತ್ನ, ತರಬೇತುದಾರರ ಸೂಕ್ತ ತರಬೇತಿ, ಹೆತ್ತವರ ಪ್ರೋತ್ಸಾಹ ಕಾರಣವಾಗಿದೆ.

Related posts

ರಾಜ್ಯಮಟ್ಟದ ಜನಪದ ಗೀತಗಾಯನದಲ್ಲಿ ವಾಣಿ ಕಾಲೇಜಿನ ರೇಂಜರ್ಸ್ ತಂಡ ಪ್ರಥಮ

Suddi Udaya

ಹತ್ಯಡ್ಕ ಪ್ರಾ.ಕೃ.ಪ. ಸಹಕಾರ ಸಂಘದ ನೂತನ “ಮುದ್ದಿಗೆ ಶಾಖೆ” ಉದ್ಘಾಟನೆ

Suddi Udaya

ಕಳೆಂಜ: ನರೇಗಾ ಯೋಜನೆಯ ಕೂಲಿಕಾರರಿಗೆ ಆರೋಗ್ಯ ತಪಾಸಣೆ

Suddi Udaya

ನೇತ್ರಾವತಿ ಸಂಜೀವಿನಿ ಮಹಿಳಾ ಒಕ್ಕೂಟ ಮುಂಡಾಜೆ ಇದರ ಮಾಸಿಕ ಸಭೆ

Suddi Udaya

ತಣ್ಣೀರುಪಂತ, ಬಾರ್ಯ, ತೆಕ್ಕಾರು ಜನಪ್ರತಿನಿಧಿಗಳು ಮತ್ತು ಪಕ್ಷದ ಪದಾಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ: ಶಾಸಕ ಹರೀಶ್ ಪೂಂಜರಿಂದ ಕಾರ್ಯಕರ್ತರಿಗೆ ಅಭಿನಂದನೆ

Suddi Udaya

ಕುತ್ಲೂರು ಅಂಗನವಾಡಿ ಕೇಂದ್ರಕ್ಕೆ ಟಿ.ವಿ. ಮತ್ತು ಇಂಟರ್ನೆಟ್ ಕೊಡುಗೆ

Suddi Udaya
error: Content is protected !!