November 17, 2026
ಪ್ರಮುಖ ಸುದ್ದಿಬೆಳ್ತಂಗಡಿ

ರೋಟರಿ ಕ್ಲಬ್ ಬೆಳ್ರಂಗಡಿ: ಉಚಿತ ನೇತ್ರ ತಪಾಸಣಾ ಹಾಗೂ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರ

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಸಮುದಾಯ ದಳ ಮುಂಡಾಜೆ, ಹಾಲು ಉತ್ಪಾದಕರ ಸಹಕಾರಿ ಸಂಘ ಕಡಿರುದ್ಯಾವರ, ಗ್ರಾಮ ಪಂಚಾಯತ್ ಕಡಿರುದ್ಯಾವರ, ಆಟೋ ಚಾಲಕ ಮಾಲಕರ ಸಂಘ ಕಡಿರುದ್ಯಾವರ, ವಿದ್ಯಾ ಸರಸ್ವತಿ ಮಹಿಳಾ ಮಂಡಳಿ ಕಡಿರುದ್ಯಾವರ, ಬೆನಕಾ ಆಸ್ಪತ್ರೆ ಉಜಿರೆ ಹಾಗೂ ಸರಕಾರಿ ಆಸ್ಪತ್ರೆ ಬೆಳ್ತಂಗಡಿ ಜಂಟಿ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಸಾಮಾನ್ಯ ಆರೋಗ್ಯ ತಪಾ‌ಸಣಾ ಶಿಬಿರ ಹೇಡ್ಯದಲ್ಲಿ ಜರುಗಿತು. ಈ ಶಿಬಿರದಲ್ಲಿ 84 ಮಂದಿ ಕಣ್ಣು ಪರೀಕ್ಷೆ ಮತ್ತು 85ಮಂದಿ ಸಾಮಾನ್ಯ ಆರೋಗ್ಯ ತಪಾ‌ಸಣೆ ಮಾಡಿಸಿಕೊಂಡರು.

ಶಿಬಿರದ ಉದ್ಘಾಟನೆ ರೊ.ಯಂ.ವಿ.ಭಟ್ ನೆರವೇರಿಸಿ ಶುಭ ಹಾರೈಸಿದರು. ಸಭಾಧ್ಯಕ್ಷತೆಯನ್ನು ರಂಗನಾಥ ಹೆಬ್ಬಾರ್ ಅಧ್ಯಕ್ಷ ರೋಟರಿ ಸಮುದಾಯ ದಳ ಮುಂಡಾಜೆ ವಹಿಸಿದ್ದರು. ಯಸ್.ಜಿ.ಭಟ್ PRO ಬೆನಕಾ ಆಸ್ಪತ್ರೆ ಉಜಿರೆ, ಡಾ.ರಮೇಶ್ ವೈದ್ಯಾಧಿಕಾರಿ ಬೆಳ್ತಂಗಡಿ, ಲೋಕೇಶ್ವರಿ ವಿನಯಚಂದ್ರ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರತ್ನಾವತಿ, ಸತೀಶ್ ಹೇಡ್ಯ ಉಪಸ್ಥಿತರಿದ್ದು ಶುಭಹಾರೈಸಿದರು. ರೊ.ವೆಂಕಟೇಶ್ವರ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರೊ. ಅನಂತ ಭಟ್ ಮಚ್ಚಿಮಲೆ, ರೊ. ವಿದ್ಯಾ ಕುಮಾರ್ ಕಾಂಚೋಡು, ರೊ. ಕಿರಣ್ ಹೆಬ್ಬಾರ್ ಸಹಕರಿಸಿದರು. ವಿಘ್ನೇಶ್ ಪ್ರಭು ವಂದಿಸಿದರು.

Related posts

ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಕ್ಷೇತ್ರ ಸಮಿತಿ ಬೆಳ್ತಂಗಡಿ ಹಾಗೂ 9 ವಲಯಗಳ ಆಶ್ರಯದಲ್ಲಿ ಆಟಿದ ಕಮ್ಮೆನ ಮತ್ತು ಆಟೋಟ ಸ್ಪರ್ಧೆ

Suddi Udaya

ಮಡಂತ್ಯಾರು: ಬುಲೆಟ್ ಟ್ಯಾಂಕರ್ ಮತ್ತು ಓಮ್ನಿ ಕಾರ್ ಮುಖಾಮುಖಿ ಡಿಕ್ಕಿ

Suddi Udaya

ಕುದ್ಯಾಡಿ: ಶ್ರೀಮತಿ ವಿಮಲ ಹಾಗೂ ಗೋಪಾಲ ಪೂಜಾರಿ ದಂಪತಿಗಳ ವೈವಾಹಿಕ ಜೀವನದ ಸುವರ್ಣ ಸಂಭ್ರಮ ಆಚರಣೆ

Suddi Udaya

ಸೌತಡ್ಕ ಕ್ಷೇತ್ರಕ್ಕೆ ಸಂಬಂಧಿಸಿದ ಕಡಿರ ನಾಗಬನದಲ್ಲಿ ನೂತನ ನಾಗನಕಟ್ಟೆಯ ಶಿಲಾನ್ಯಾಸ ಕಾರ್ಯಕ್ರಮ

Suddi Udaya

ಭಾರಿ ಗಾಳಿ ಮಳೆ: ಉಜಿರೆ ಪೆರ್ಲ ನಿವಾಸಿ ಹೇಮಾವತಿರವರ ಮನೆಗೆ ತೆಂಗಿನ ಮರ ಬಿದ್ದು ಹಾನಿ: ಗ್ರಾ.ಪಂ. ನಿಂದ ನೆರವು

Suddi Udaya

ಮಚ್ಚಿನ ಸರಕಾರಿ ಪ್ರೌಢ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ವಿಶೇಷ ತರಗತಿಯ ಸಮಾರೋಪ ಕಾರ್ಯಕ್ರಮ

Suddi Udaya
error: Content is protected !!