November 17, 2026
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ತಾಲೂಕು ಗ್ಯಾರಂಟಿ ಯೋಜನಾ ಸಮಿತಿ ಸದಸ್ಯ ಮುನಿರಾಜ್ ಜೈನ್ ಅವರಿಗೆ ಶಾಂತಿ ಸೌಹಾರ್ದ ಸಂಘದಿಂದ ಸನ್ಮಾನ

ಕುತ್ಲೂರು: ಕರ್ನಾಟಕ ಸರ್ಕಾರದಿಂದ ಬೆಳ್ತಂಗಡಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾಗಿ ನೇಮಕಗೊಂಡಿರುವ ನಾರಾವಿಯ ಉದ್ಯಮಿ ಹಾಗೂ ನಮ್ಮ ಶ್ರೀ ಶಾಂತಿ ಸೌಹಾರ್ದ ಸ್ವ ಸಹಾಯ ಸಂಘ, ಕುತ್ಲೂರು ಇದರ ಸದಸ್ಯರಾದ ಮುನಿರಾಜ್ ಜೈನ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಕುತ್ಲೂರಿನಲ್ಲಿ ಚೇತನಶ್ರೀ ಕೆ. ಕರುಣಾಕರ ಜೈನ್ ಅವರ ಮನೆಯಲ್ಲಿ ನಡೆದ ವಿಶೇಷ ಸಭಾ ಕಾರ್ಯಕ್ರಮದಲ್ಲಿ ಈ ಸನ್ಮಾನ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಶ್ರೀ ಶಾಂತಿ ಸೌಹಾರ್ದ ಸ್ವ ಸಹಾಯ ಸಂಘದ ಗೌರವ ಅಧ್ಯಕ್ಷರಾದ ಕೆ. ಪ್ರಭಾಕರ್ ಬುಣ್ಣು, ನಿರ್ದೇಶಕರಾದ ಜಯರಾಜ್ ಕಡಂಬ, ಸಂಘದ ಅಧ್ಯಕ್ಷರಾದ ಕೆ. ಕರುಣಾಕರ ಜೈನ್ ಉಪಾಧ್ಯಕ್ಷರಾದ ಅಖಿಲ್ ಜೈನ್ ಕಾರ್ಯದರ್ಶಿ ಶ್ರೇಯಾಂಸ್ ಕುಮಾರ್ ಅವರು ಉಪಸ್ಥಿತರಿದ್ದು, ಮುನಿರಾಜ್ ಜೈನ್ ಅವರನ್ನು ಶಾಲು, ಹಾರ ಹಾಕಿ ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ ಸಂಘದ ಸದಸ್ಯರಾದ ಶ್ರೀಪಾಲ ಕಾಡ, ಧನಕೀರ್ತಿ ಜೈನ್, ಕೇಶೀರಾಜ್ ಜೈನ್, ಅಶೋಕ ಕುಮಾರ್ ಜೈನ್, ಪ್ರಮೋದ್ ಕುಮಾರ್ ಜೈನ್, ಅಕ್ಷಿತ್ ಜೈನ್, ಅಮೃತ್ ಜೈನ್, ಶೋಭಾ, ಸೌಮ್ಯ ಕರುಣಾಕರ ಜೈನ್, ಶ್ರವಣ್ ಜೈನ್, ರಂಜನ್ ಇಂದ್ರ, ಕಾರ್ತಿಕ ಜೈನ್, ಸುರೇಶ್ ಜೈನ್, ಮಮತಾ ಜೈನ್, ಪಾರ್ಶ್ವನಾಥ ಜೈನ್, ನಿಮಿತ್ ಜೈನ್ ಸೇರಿದಂತೆ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮುನಿರಾಜ್ ಜೈನ್ ಅವರು, ತಮಗೆ ಸರ್ಕಾರ ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿ, ಸರ್ಕಾರದ ಗ್ಯಾರಂಟಿ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ತಲುಪುವಂತೆ ಕೆಲಸ ಮಾಡುವುದಾಗಿ ಭರವಸೆ ನೀಡಿದರು. ಈ ನೇಮಕಕ್ಕೆ ಸಹಕರಿಸಿದ ಎಲ್ಲರಿಗೂ ಅವರು ಕೃತಜ್ಞತೆ ಸಲ್ಲಿಸಿದರು.

ಸಂಘದ ವತಿಯಿಂದ ಅವರ ಮುಂದಿನ ಸಮಾಜ ಸೇವೆಗೆ ಶುಭ ಹಾರೈಸಲಾಯಿತು.

Related posts

ಮಡಂತ್ಯಾರು ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಪಡoಗಡಿ-ಹಚ್ಚಾಡಿ -ಬಳಂಜ ಸಂಪರ್ಕ ಕಿರುಸೇತುವೆಯಲ್ಲಿ ತ್ಯಾಜ್ಯ ಶೇಖರಣೆ

Suddi Udaya

ಬಜಿರೆ: ಸ.ಉ.ಹಿ.ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅರ್ಜುನ್ ಜನ್ಯ ದಂಪತಿ ಭೇಟಿ

Suddi Udaya

ಇಂದಬೆಟ್ಟು ಸಂಪೂರ್ಣ ಹದಗೆಟ್ಟ ರಸ್ತೆಗಳು: ದುರಸ್ತಿಗೊಳಿಸುವಂತೆ ಒತ್ತಾಯ; ಚುನಾವಣೆ ಬಹಿಷ್ಕಾರಕ್ಕೆ ಗ್ರಾಮಸ್ಥರ ನಿರ್ಧಾರ

Suddi Udaya

ಅಯೋಧ್ಯೆಯಲ್ಲಿನ ಶ್ರೀ ರಾಮನ ಮಂದಿರವು ಸುಂದರವಾಗಿ ಮೂಡಿಬಂದಿದೆ: ಡಾ| ಡಿ ವೀರೇಂದ್ರ ಹೆಗ್ಗಡೆ

Suddi Udaya
error: Content is protected !!