November 17, 2026
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಸಮಾಜದ ಹಿರಿಯ ಮುತ್ಸದ್ದಿ ಕೆ. ವಸಂತ ಸಾಲ್ಯಾನ್ ಅವರಿಗೆ ಶ್ರೀ ಕ್ಷೇತ್ರ ಗೆಜ್ಜೆಗಿರಿ ಆಡಳಿತ ಸಮಿತಿಯಿಂದ ಅಭಿನಂದನೆ

ಕಾಪಿನಡ್ಕ: ಇತ್ತೀಚೆಗೆ ಬಳಂಜ ಗ್ರಾಮೋತ್ಸವದ ಸಂದರ್ಭದಲ್ಲಿ ಬಳoಜ ನಾಲ್ಕೂರು ತೆಂಕಕಾರಂದೂರು ಗ್ರಾಮಸ್ಥರಿಂದ ಪೌರಸನ್ಮಾನ ಸ್ವೀಕರಿಸಿದ ಬಿಲ್ಲವ ಸಮಾಜದ ಹಿರಿಯ ಮುಖಂಡರು, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದ ಮುಂಚೂಣಿ ನಾಯಕರು, ಸಮಾಜಸೇವಕರಾದ ಕೆ. ವಸಂತ ಸಾಲ್ಯಾನ್ ಕಾಪಿನಡ್ಕ ಅವರನ್ನು ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಆಡಳಿತ ಸಮಿತಿಯ ವತಿಯಿಂದ ಅವರ ಸ್ವಗೃಹ ಶಿವಗಿರಿ, ಕಾಪಿನಡ್ಕದಲ್ಲಿ ಭಕ್ತಿಪೂರ್ವಕವಾಗಿ ಗೌರವಿಸಿ ಅಭಿನಂದಿಸಲಾಯಿತು.

ಬಿಲ್ಲವ ಸಮಾಜದ ಸಂಘಟನೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ವಸಂತ ಸಾಲ್ಯಾನ್ ಅವರು ಕೇವಲ ಸಮಾಜದ ಮುಖಂಡರಾಗಿ ಮಾತ್ರವಲ್ಲದೆ, ಧಾರ್ಮಿಕ, ಸಾಮಾಜಿಕ ಹಾಗೂ ಜನಪರ ಸೇವಾ ಕ್ಷೇತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಹಿರಿಯ ಮುತ್ಸದ್ದಿಯಾಗಿದ್ದಾರೆ

ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶ್ರಯ ನಡೆಯುತ್ತಿರುವ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷರಾಗುವ ಮೂಲಕ ದುಶ್ಚಟಮುಕ್ತ ಸಮಾಜ ನಿರ್ಮಾಣದ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಮಹತ್ತರ ಕೊಡುಗೆ ನೀಡಿದ್ದಾರೆ. ತಾಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗೆ ಸಾಮಾಜಿಕ ಜಾಗೃತಿ, ಸಮಾಜ ಸಂಘಟನೆ ಹಾಗೂ ಜನಪರ ಚಟುವಟಿಕೆಗಳಲ್ಲಿ ಅವರ ಸೇವೆ ಮತ್ತು ಮಾರ್ಗದರ್ಶನ ಗಮನಾರ್ಹವಾಗಿದೆ.

ಸಮಾಜದ ಹಿರಿಯರ ಅನುಭವ, ಮಾರ್ಗದರ್ಶನ ಮತ್ತು ಸೇವಾ ಮನೋಭಾವ ಮುಂದಿನ ಪೀಳಿಗೆಗೆ ಸದಾ ಪ್ರೇರಣೆಯಾಗಬೇಕು ಎಂಬ ಆಶಯದೊಂದಿಗೆ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಆಡಳಿತ ಸಮಿತಿಯು ಅವರ ಸೇವೆಯನ್ನು ಗುರುತಿಸಿ ಗೌರವಪೂರ್ವಕವಾಗಿ ಸನ್ಮಾನಿಸಿತು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಗೌರವಾಧ್ಯಕ್ಷರಾದ ಬಿ. ಪೀತಾಂಬರ ಹೇರಾಜೆ, ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೂಲಸ್ಥಾನ ಅಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷರಾದ ಕೆ. ಸಂಜೀವ ಪೂಜಾರಿ ಬಿರ್ವ , ಕ್ಷೇತ್ರ ಆಡಳಿತ ಸಮಿತಿಯ ಅಧ್ಯಕ್ಷರಾದ ರವಿ ಪೂಜಾರಿ ಚಿಲಿಂಬಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾದ ನಾಗೇಶ್ ಪೂಜಾರಿ ಬೈಕಂಪಾಡಿ, ನಾರಾಯಣ ಮಚ್ಚಿನ, ಜಯವಿಕ್ರಂ ಕಲ್ಲಾಪು ಉಪಸ್ಥಿತರಿದ್ದರು.

ಸಮಾಜದ ಹಿರಿಯ ಚೇತನಗಳ ಸೇವೆಯನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಶ್ರೀ ವಸಂತ ಸಾಲ್ಯಾನ್ ಅವರ ಧಾರ್ಮಿಕ ಕಾಳಜಿ, ಸಾಮಾಜಿಕ ಬದ್ಧತೆ ಹಾಗೂ ಸಮಾಜಮುಖಿ ಚಿಂತನೆಗಳು ಮುಂದಿನ ದಿನಗಳಲ್ಲಿಯೂ ಸಮಾಜಕ್ಕೆ ದಾರಿದೀಪವಾಗಲಿ. ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ನಿರಂತರ ಸಮಾಜಸೇವೆಗೆ ದೈವಾನುಗ್ರಹ ಲಭಿಸಲಿ ಎಂದು ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಆಡಳಿತ ಸಮಿತಿಯು ಹಾರೈಸಿತು.

Related posts

ಆ 17: ತಾಲೂಕಿನಲ್ಲಿ ಮೊಟ್ಟ ಮೊದಲ ಬಾರಿಗೆ ರಮ್ಯ 1 ಗ್ರಾಂ ಗೋಲ್ಡ್ & ಫ್ಯಾನ್ಸಿ ಉಜಿರೆಯಲ್ಲಿ ಲಾಕ್ಮಿ ಕಂಪೆನಿಯ ಕಾಸ್ಮೆಟಿಕ್ಸ್ ಹೊಸ ಕೌಂಟರ್ ಶುಭಾರಂಭ

Suddi Udaya

ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ: ನೂತನ ಸಂಸದ ಕ್ಯಾ| ಬೃಜೇಶ್ ಚೌಟರಿಗೆ ಅಭಿನಂದನೆ – ವಿದ್ಯಾರ್ಥಿ ವೇತನ ವಿತರಣೆ – ಆಟಿ ಕೂಟ ಕಾಯ೯ಕ್ರಮ

Suddi Udaya

ಪ್ರದೀಶ್ ಮರೋಡಿ ಇವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರತಿಷ್ಠಿತ ಮೈಸೂರು ದಿಗಂತ ಪ್ರಶಸ್ತಿ ಪ್ರಧಾನ

Suddi Udaya

ಬೆಳ್ತಂಗಡಿ: ನಾಲ್ಕು ಮಂದಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಎಸ್.ಐ.ಟಿ ವಿಚಾರಣೆಗೆ ಹಾಜರು

Suddi Udaya

ಬಂದಾರು: ಬುದ್ಧ ಗುರುಪೂರ್ಣಿಮೆಯ ಪ್ರಯುಕ್ತ ಹಣ್ಣಿನ ಗಿಡ ನೆಟ್ಟು ಸಂಭ್ರಮ

Suddi Udaya

ವೆನ್ಲಾಕ್‌ ರಕ್ಷಾ ಸಮಿತಿ ಸಭೆಯಲ್ಲಿ ಕರೀಂ ಗೇರುಕಟ್ಟೆ, ಜಯರಾಮ ಭಾಗಿ

Suddi Udaya
error: Content is protected !!