November 17, 2026
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ರೋಟರಿ ಕ್ಲಬ್ ಬೆಳ್ರಂಗಡಿ : ಊರ್ಲ ಅಂಗನವಾಡಿಯ ನವೀಕೃತ ಕಟ್ಟಡದ ಉದ್ಘಾಟನೆ

ಬೆಳ್ತಂಗಡಿ: ರೋಟರಿ ಕ್ಲಬ್. ಬೆಳ್ತಂಗಡಿ, ಆನ್ಸ್ ಕ್ಲಬ್ ಬೆಳ್ತಂಗಡಿ, ಅನ್ವೇಷಣಾ ತಂಡ ಬೆಳ್ತಂಗಡಿ ಇವರುಗಳ ಜಂಟಿ ಸಹಯೋಗದಲ್ಲಿ ಮಾಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಊರ್ಲದಲ್ಲಿರುವ ಅಂಗನವಾಡಿ ಕಟ್ಟಡಕ್ಕೆ ಹೊಸ ಬಣ್ಣ ಹಾಗೂ ಗೋಡೆಗಳಲ್ಲಿ ಹೊಸ ಚಿತ್ರಕಲೆಗಳನ್ನು ಬಿಡಿಸಿ ಸಂಪೂರ್ಣವಾಗಿ ಹೊಸತನದೊಂದಿಗೆ ಉದ್ಘಾಟನೆಗೊಂಡಿತು.

ಈ ನವೀಕೃತ ಕಟ್ಟಡವನ್ನು ರೊ. ಸೊನಿಯಾ ವರ್ಮ ಅವರು ಉದ್ಘಾಟಿಸಿದರು . ಈ ಸಂಧರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾದ ಶ್ರೀಧರ ಕೆ.ವಿ, ರೋಟರಿ ಕ್ಲಬ್ ನ ಪೂರ್ವಾಧ್ಯಕ್ಷರಾದ ಡಿ.ಎಂ.ಗೌಡ, ಆನ್ಸ್ ಕ್ಲಬ್ ಅಧ್ಯಕ್ಷೆಯಾದ ರಾಜಶ್ರೀ ರಾವ್, ಕಾರ್ಯದರ್ಶಿ ಅಪರ್ಣಾ ವಾಟ್ವೆ, ರೋಟರಿ ಕ್ಲಬ್ ಮಡಂತ್ಯಾರ್ ನ ಅಧ್ಯಕ್ಷರಾದ ರೊ. ಪ್ರಶಾಂತ್ ಶೆಟ್ಟಿ, ಮಾಲಾಡಿ ಗ್ರಾಮ ಪಂಚಾಯತ್ ನ ಅಭಿವೃಧ್ದಿ ಅಧಿಕಾರಿ ರಾಜಶೇಖರ ರೈ,
ಶ್ರೀದೇವಿ ಭಜನಾ ಮಂಡಳಿ ಪುರಿಯಾ ಇದರ ಅಧ್ಯಕ್ಷರಾದ ಸುಂದರ ಪೂಜಾರಿ, ಟೀಮ್ ಅನ್ವೇಷಣಾ ಇದರ ಮುಖೇಶ್, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಶುಭಾ ವೇದಿಕೆಯಲ್ಲಿ ಉಪಸ್ಥಿತರಿದ್ದರು

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸೋನಿಯಾ ವರ್ಮ ಅವರು ಅಂಗನವಾಡಿಗಳು ಕೇವಲ ನಾಲ್ಕು ಗೋಡೆಗಳ ನಡುವಿನ ಕಟ್ಟಡ ಅಲ್ಲ ಅದು ಮಕ್ಕಳ ಮೊದಲ ಪಾಠ ಶಾಲೆ. ಮಕ್ಕಳ ವಿದ್ಯಾರ್ಥಿ ಜೀವನದ ಸಮಗ್ರ ಬೆಳವಣಿಗೆಯಲ್ಲಿ ಅಂಗನವಾಡಿಗಳ ಪಾತ್ರ ಬಹಳ ಮುಖ್ಯವಾದದ್ದು ಎಂದರು.

ರೋಟರಿ ಕ್ಲಬ್ ಅಧ್ಯಕ್ಷರಾದ ರೊ. ಶ್ರೀಧರ ಕೆ ವಿ ಪ್ರಸ್ತಾವನೆ ಹಾಗೂ ಬಂದಂತಹ ಅತಿಥಿಗಳನ್ನು ಸ್ವಾಗತಿಸಿದರು. ಅತಿಥಿಗಳಾದ ರೊ. ಡಿ.ಎಂ ಗೌಡ , ಮಾಲಾಡಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ರಾಜಶೇಖರ ರೈ , ಶ್ರೀದೇವಿ ಭಜನಾ ಮಂದಿರ ಪುರಿಯದ ಅಧ್ಯಕ್ಷ ಸುಂದರ ಪೂಜಾರಿ, ಆನ್ಸ್ ಕ್ಲಬ್ ಅಧ್ಯಕ್ಷೆ ರಾಜಶ್ರೀ ರಾವ್ ಹಾಗೂ ರೋಟರಿ ಕ್ಲಬ್ ಅಧ್ಯಕ್ಷರಾದ ರೊ ಪ್ರಶಾಂತ ಶೆಟ್ಟಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ರೊ. ಬಿ ಕೆ ಧನಂಜಯ ರಾವ್, ರೊ. ಪ್ರವೀಣ್ ಗೋರೆ, ಆನ್ ಗಾಯತ್ರೀ ಶ್ರೀಧರ್, ಮಾಲಾಡಿ ಗ್ರಾಮ ಪಂಚಾಯತ್ ನ ನಿಕಟ ಪೂರ್ವ ಸದಸ್ಯರಾದ ಬೆನೆಡಿಕ್ಟ್ ಮಿರಾಂಡ, ಕೃಷ್ಣಪ್ಪ ಪೂಜಾರಿ , ಸುಮತೀ ದಾಸ್, ಮಡಂತ್ಯಾರ್ ಸಿ.ಎ.ಬ್ಯಾಂಕ್ ನ ನಿರ್ದೇಶಕರಾದ ಶ್ರೀ‌ಮಹಾಬಲ ರೈ, ಆಲ್ವಿನ್ ವೇಗಸ್ ಹಾಗೂ ಅಂಗನವಾಡಿಯ ಶಿಕ್ಷಕಿಯರು ಸಿಬ್ಬಂದಿಗಳು ಹಾಗೂ ಪೋಷಕರುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವು ಮೀನಾಕ್ಷಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾದರೆ ಲಿನೆಟ್ ಡಿ ಸೋಜ ಅವರು ಕಾರ್ಯಕ್ರಮವನ್ನು ನಿರೂಪಿಸಿ ವಂದನಾರ್ಪಣೆಗೈದರು.

Related posts

ಸೆ.3 ಕಾಯರ್ತಡ್ಕದಲ್ಲಿ ಶ್ರೀ ಕೃಷ್ಣ ಹೆಲ್ತ್ ಸೆಂಟರ್ ಶುಭಾರಂಭ, ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ಅಮ್ಮಾಜಿ ಕೋಟ್ಯಾನ್, ಎನ್. ಪ್ರಭಾಕರ್ ನಡೆಸುತ್ತಿರುವ ಧರಣಿ ಸತ್ಯಾಗ್ರಹದ ಆರೋಪಗಳು ಸತ್ಯಕ್ಕೆ ದೂರವಾದವು : ಸುಲ್ಕೇರಿಮೊಗ್ರು ಪ್ರಾ.ಕೃ.ಪ. ಸ.ಸಂಘದ ಅಧ್ಯಕ್ಷ ಸುಧೀರ್ ಆರ್. ಸುವರ್ಣರಿಂದ ಸ್ಪಷ್ಟನೆ

Suddi Udaya

ಮೇಲಂತಬೆಟ್ಟು ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ನಾರಾವಿ ಬಸದಿಯಲ್ಲಿ ಅನಂತನೋಂಪಿ ಆರಾಧನಾ ಪೂಜಾ ವಿಧಾನ ಮತ್ತು ಉದ್ಯಾಪನಾ ಪೂಜಾ ವಿಧಾನ

Suddi Udaya

ಪುದುವೆಟ್ಟು ಶ್ರೀ ಧ.ಮಂ. ಅ.ಹಿ.ಪ್ರಾ. ಶಾಲೆಯ ಶಾಲಾ ಮಂತ್ರಿಮಂಡಲದ ಪ್ರಮಾಣವಚನ ಸ್ವೀಕಾರ

Suddi Udaya

ಬೆಳ್ತಂಗಡಿ: ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಕೆಂಪೇಗೌಡ ಜಯಂತಿ ಆಚರಣೆ

Suddi Udaya
error: Content is protected !!