November 17, 2026
ಅಭಿನಂದನೆಗ್ರಾಮಾಂತರ ಸುದ್ದಿಬೆಳ್ತಂಗಡಿ

ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ ವತಿಯಿಂದ ರಕ್ಷಿತ್ ಶಿವರಾಂಗೆ ಅಭಿನಂದನೆ

ಬೆಳ್ತಂಗಡಿ: ಕರ್ನಾಟಕ ಫಿಶರೀಸ್ ಡೆವಲಪ್‌ಮೆಂಟ್ ಬೋರ್ಡ್‌ನ ನಿರ್ದೇಶಕರಾಗಿ ಕಳೆಂಜದ ಸೆಬಾಸ್ಟಿಯನ್ ಪಿ.ಟಿ. ಅವರು ನೇಮಕಗೊಂಡ ಹಿನ್ನೆಲೆಯಲ್ಲಿ, ಈ ನೇಮಕಾತಿಗೆ ಸಹಕಾರ ನೀಡಿದ ರಕ್ಷಿತ್ ಶಿವರಾಂ ಅವರಿಗೆ ಬೆಳ್ತಂಗಡಿ ಕ್ರಿಶ್ಚಿಯನ್ ಸಮುದಾಯದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕ್ರಿಶ್ಚಿಯನ್ ಸಮುದಾಯದ ಮುಖಂಡರು ಹಾಗೂ ಸದಸ್ಯರು ಭಾಗವಹಿಸಿ, ರಕ್ಷಿತ್ ಶಿವರಾಂ ಅವರಿಗೆ ಹೂಗುಚ್ಛ ನೀಡಿ ಆತ್ಮೀಯವಾಗಿ ಅಭಿನಂದಿಸಿದರು.ಈ ಸಂದರ್ಭದಲ್ಲಿ ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ (ರಿ.) ಸಂಘಟನೆಯ ಸದಸ್ಯರು ಉಪಸ್ಥಿತರಿದ್ದು, ಸೆಬಾಸ್ಟಿಯನ್ ಪಿ.ಟಿ. ಅವರಿಗೆ ರಾಜ್ಯ ಮಟ್ಟದ ನಿಗಮ ಮಂಡಳಿಯಲ್ಲಿ ನಿರ್ದೇಶಕ ಸ್ಥಾನ ದೊರಕಲು ಸಹಕಾರ ನೀಡಿದ ರಕ್ಷಿತ್ ಶಿವರಾಂ ಅವರಿಗೆ ಸಂಘಟನೆಯ ಪರವಾಗಿ ಕೃತಜ್ಞತೆ ಸಲ್ಲಿಸಿದರು.

ಕಳೆಂಜದ ಸೆಬಾಸ್ಟಿಯನ್ ಪಿ.ಟಿ. ಅವರಿಗೆ ದೊರೆತಿರುವ ಈ ಜವಾಬ್ದಾರಿಯು ಕಳೆಂಜ ಹಾಗೂ ಬೆಳ್ತಂಗಡಿ ತಾಲೂಕಿನ ಕ್ರಿಶ್ಚಿಯನ್ ಸಮುದಾಯಕ್ಕೆ ಸಂತಸ ಮತ್ತು ಹೆಮ್ಮೆಯ ಸಂಗತಿಯಾಗಿದೆ ಎಂದು ಮುಖಂಡರು ತಿಳಿಸಿದರು.ಸಭೆಯಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರು, ಕರ್ನಾಟಕ ಫಿಶರೀಸ್ ಡೆವಲಪ್‌ಮೆಂಟ್ ಬೋರ್ಡ್‌ನ ನೂತನ ನಿರ್ದೇಶಕ ಸೆಬಾಸ್ಟಿಯನ್ ಪಿ.ಟಿ., ತಾಲೂಕಿನ ಕ್ರಿಶ್ಚಿಯನ್ ಸಮುದಾಯದ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ (ರಿ.) ವತಿಯಿಂದ ರಕ್ಷಿತ್ ಶಿವರಾಂ ಅವರಿಗೆ ಹೃತ್ಪೂರ್ವಕ ಅಭಿನಂದನೆ ಹಾಗೂ ಕೃತಜ್ಞತೆ ಸಲ್ಲಿಸಲಾಯಿತು.

Related posts

ಬೆಳ್ತಂಗಡಿ :ಸ್ವಸ್ತಿಕ್ ಆಟೋ ಗ್ಯಾರೇಜ್ ಗೆ ಬೆಂಕಿ, ಹೊತ್ತಿ ಉರಿದ ಆಟೋ ಮತ್ತು ಸಾಮಾಗ್ರಿ, ಲಕ್ಷಾಂತರ ನಷ್ಟ

Suddi Udaya

ಶಿಬರಾಜೆ ಪಾದೆ ಕುಶಾನಿ ರವರ ಹುಟ್ಟುಹಬ್ಬದ ಪ್ರಯುಕ್ತ ಅಂಗನವಾಡಿಗೆ ಚಾಪೆ ಕೊಡುಗೆ

Suddi Udaya

ಗರ್ಡಾಡಿ: ಪೇರಡ್ಕ-ಡೆಂಜೋಳಿ ಶ್ರೀ ಸದಾಶಿವ ದೇವಸ್ಥಾನ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಸಮಾಲೋಚನಾ ಸಭೆ

Suddi Udaya

ನಾವರ: ಮನೆಗೆ ಬೃಹತ್ ಗಾತ್ರದ ಮರ ಬಿದ್ದು ಹಾನಿ

Suddi Udaya

ವಾಣಿ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಪ.ಪೂ. ಕಾಲೇಜುಗಳ ಯೋಗಾಸನ ಸ್ಪರ್ಧೆ

Suddi Udaya

ದಯಾ ವಿಶೇಷ ಶಾಲೆಯಲ್ಲಿ ವಿಶ್ವ ಹೆಣ್ಣು ಮಕ್ಕಳ ದಿನಾಚರಣೆ

Suddi Udaya
error: Content is protected !!