November 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಕೆ-ಸೆಟ್‌ ಪರೀಕ್ಷೆಯಲ್ಲಿ ಚೈತ್ರ ಆರ್‌. ದೇವಾಡಿಗ ಕೆಂಬರ್ಜೆ ತೇರ್ಗಡೆ

ಬೆಳ್ತಂಗಡಿ: ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಪರವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಹಾಯಕ ಪ್ರಾಧ್ಯಾಪಕರ ಹುದ್ದೆಯ ಅರ್ಹತೆಗಾಗಿ ನಡೆಸಿದ ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆಯಲ್ಲಿ (K-SET) ಬೆಳ್ತಂಗಡಿ ಕೆಂಬರ್ಜೆ, ಚೈತ್ರ ಆರ್. ದೇವಾಡಿಗ ಅವರು ತೇರ್ಗಡೆಯಾಗಿದ್ದಾರೆ.

ಪ್ರಸ್ತುತ ಖಾಸಗಿ ವಿದ್ಯಾ ಸಂಸ್ಥೆಯಾದ ಕುಂಭಶ್ರೀ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರು, ವೃತ್ತಿಜೀವನದ ಜೊತೆಗೆ ಶೈಕ್ಷಣಿಕವಾಗಿಯೂ ಈ ಮಹತ್ವದ ಸಾಧನೆ ಮಾಡಿದ್ದಾರೆ. ಚೈತ್ರ ಆರ್ ದೇವಾಡಿಗ ಅವರು ಬೆಳ್ತಂಗಡಿ ಕೆಂಬರ್ಜೆ ರಾಜು ಬಿ. ದೇವಾಡಿಗ ಮತ್ತು ಲೀಲಾವತಿ ಆರ್. ದೇವಾಡಿಗ ದಂಪತಿಯ ಪುತ್ರಿಯಾಗಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿ ಕಥೆ ಹಾಗೂ ಕವನ ಬರವಣಿಗೆಯಲ್ಲಿ ವಿಶೇಷ ಚಾತುರ್ಯ ಹೊಂದಿರುವ ಇವರು, ನೃತ್ಯ ಕ್ಷೇತ್ರದಲ್ಲಿಯೂ ತಮ್ಮದೇ ಆದ ಪ್ರತಿಭೆಯನ್ನು ಮೆರೆದಿದ್ದಾರೆ. ಯೂಟ್ಯೂಬ್‌ ಚಾನೆಲ್‌ಗಳ ಮೂಲಕ ಶೈಕ್ಷಣಿಕ ಹಾಗೂ ವಿವಿಧ ಮಾಹಿತಿಪೂರ್ಣ ವಿಡಿಯೋಗಳನ್ನು ರಚಿಸಿ ಜ್ಞಾನ ಹಂಚುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಅಲ್ಲದೆ, ಡಿಜಿಟಲ್ ತಂತ್ರಜ್ಞಾನದ ಬಳಕೆಯಲ್ಲಿ ಆಸಕ್ತಿ ಹೊಂದಿದ್ದು, ಕ್ರಿಯೇಟಿವ್ ಕಂಟೆಂಟ್ ಕ್ರಿಯೇಷನ್‌ ಹಾಗೂ ವಿವಿಧ ಡಿಜಿಟಲ್ ಮಾಧ್ಯಮ ಚಟುವಟಿಕೆಗಳ ಮೂಲಕ ತಮ್ಮ ಸೃಜನಶೀಲತೆಗೆ ಹೊಸ ಆಯಾಮ ನೀಡುತ್ತಿದ್ದಾರೆ.

Related posts

ಶ್ರೀರಾಮನಿಗೆ ಅವಹೇಳನ: ಪ್ರೊ. ಕೆ. ಎಸ್. ಭಗವಾನ್ ಬಂಧನಕ್ಕೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯಿಂದ ತಹಶೀಲ್ದಾರರಿಗೆ ಮನವಿ

Suddi Udaya

ಕುತ್ಲೂರು: ಜೇನು ಕೃಷಿ ತರಬೇತಿ ಮತ್ತು ತೋಟಗಾರಿಕಾ ಬೆಳೆಗಳು ಹಾಗೂ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ಕಾರ್ಯಾಗಾರ

Suddi Udaya

ನಾವೂರು ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಬೆಳ್ತಂಗಡಿ: ಶ್ರೀ ದುರ್ಗಾ ಬೆಂಗಳೂರು ಅಯ್ಯಂಗಾರ್ ಬೇಕರಿ ಶುಭಾರಂಭ

Suddi Udaya

ಉಜಿರೆ : ‘ಲಿಂಗಸೂಕ್ಷ್ಮತೆ ಅರಿವು ‘ ತರಬೇತಿ ಕಾರ್ಯಕ್ರಮದ ಸಮಾರೋಪ

Suddi Udaya

ಉಜಿರೆ ಹಳೆಪೇಟೆಯಲ್ಲಿ ಹೊಳೆಯಂತಾದ ರಸ್ತೆ: ವಾಹನ ಸವಾರರ ಪರದಾಟ

Suddi Udaya
error: Content is protected !!