November 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಬೆಳ್ತಂಗಡಿ: ರಾಜಕೇಸರಿ ಸಂಸ್ಥಾಪಕ ದೀಪಕ್‌ ಜಿ. “ಕರುನಾಡ ರತ್ನ” ಪ್ರಶಸ್ತಿಗೆ ಆಯ್ಕೆ- ನ.29ರಂದು ಬೆಂಗಳೂರಿನಲ್ಲಿ ಪ್ರಧಾನ

ಬೆಳ್ತಂಗಡಿ: ರಾಜ ಕೇಸರಿ ಸೇವಾ ಟ್ರಸ್ಟ್ ಇದರ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ ಇವರು 2026 ರ ಕರ್ನಾಟಕ ಮೀಡಿಯಾ ಕ್ಲಬ್ ರಾಜ್ಯದ ಶ್ರೇಷ್ಠ ಸಾಧಕ ಪ್ರಶಸ್ತಿ “ಕರುನಾಡ ರತ್ನ” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ನ.29 ರಂದು ಬೆಂಗಳೂರು ಟೌನ್ ಹಾಲ್ ನಲ್ಲಿ ನಡೆಯಲಿಲಿರಿವ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ದೀಪಕ್ ಜಿ. ಸದಾ ಎಲೆ ಮರೆಯಲ್ಲಿ ಕೆಲಸ ಮಾಡುವ ಸಾಧಕ ಯಾವುದೇ ಪ್ರಚಾರ ಬಯಸದೆ ಸದಾ ಜನಪರ ಯೋಜನೆಗಳನ್ನು ಮಾಡುತ್ತ ಕೆಲವೊಂದು ಸಂದರ್ಭಗಳಲ್ಲಿ ದಾನಿಗಳ ಮುಖಾಂತರ ಒಬ್ಬನೇ ನಿಂತು ಕಾರ್ಯಕ್ರಮ ನಿರೂಪಿಸುವಂತಹ ಸಾಧಕತನ್ನ ಜೊತೆ ಕೂಲಿ ಕಾರ್ಮಿಕರನ್ನು ಸೇರಿಸಿಕೊಂಡು ರಾಜ ಕೇಸರಿ ಸಂಸ್ಥೆಯ ಹೆಸರಿನ ಮೂಲಕ 34 ಮನೆಗಳ ಒದಗಿಸಿ ನೀಡಿ ಆಸರೆಯ ಮನೆಗಳ ಮೂಲಕ ಬಡ ಕುಟುಂಬಗಳಿಗೆ ಬೆಳಕಾಗದಂತಹ ಸಾಧಕ ಸ್ವತ 37 ಬಾರಿ ರಕ್ತ ದಾನ ಮಾಡಿದ ಸಾಧಕ ರಾಜ ಕೇಸರಿ ಹೆಸರಿನೊಂದಿಗೆ ಬೆಳಗುತ್ತಿರುವ ಸಾಧಕ ಉಚಿತ ಸಾಮೂಹಿಕ ವಿವಾಹ. ಸರಕಾರಿ ಆಸ್ಪತ್ರೆಗಳ ಆವಣ ಸ್ವಚ್ಛತೆ. ಬಡ ರೋಗಿಗಳಿಗೆ ಆಶ್ರಯ.

ಅಂಗವಿಕಲರಿಗೆ ವೀಲ್ ಚರ್ ಹಸ್ತಾಂತರ, ಆಸಕ್ತ ಕುಟುಂಬಗಳ ಆಧಾರಕ್ಕಾಗಿ ಟೈಲ‌ರ್ ಮಿಷನ್ ಹಸ್ತಾಂತರ ವಿದ್ಯಾರ್ಥಿಗಳ ಭವಿಷ್ಯದ ರೂವಾರಿ ಅದೆಷ್ಟೋ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಂಸ್ಥೆಯ ಮೂಲಕ ಗ್ರಾಮ ಗ್ರಾಮಗಳಲ್ಲಿ ಆರೋಗ್ಯ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುವಂತಹ ಸಾಧಕ ತನ್ನ ದುಡಿಮೆಯಲ್ಲಿ ಶೇ.10 ರಷ್ಟು ಸಮಾಜ ಸೇವೆಗೆ ಮೀಸಲಿಡುವಂತಹ ಸಾಧಕ ವ್ಯಾಪಾರಕ್ಕೊಂದು ಸಣ್ಣ ಅಂಗಡಿಯನ್ನು ನಿರೂಪಿಸಿಕೊಂಡು ವೃತ್ತಿಯಲ್ಲಿ ಚಾಲಕನಾಗಿ ದುಡಿಯುತ್ತಿದ್ದಾರೆ. ರಾಜ್ಯ ಮಟ್ಟದ ಜಿಲ್ಲಾಮಟ್ಟದ ಪ್ರಶಸ್ತಿಗಳು ಒದಗಿ ಬಂದರೂ ಕೂಡ ಯಾವುದನ್ನು ಪ್ರಚಾರವಾಗಿ ಬಯಸದೆ ಸೇವೆಯನ್ನೇ ಮುಂದುವರಿಸಿಕೊಂಡು ಬಂದಂತಹ ಸಾಧಕ ಇದೀಗ ಕರ್ನಾಟಕ ವಿಡಿಯೋ ಕ್ಲಬ್ ರಾಜ್ಯದ ಶ್ರೇಷ್ಠ ಸಾಧಕ ಪ್ರಶಸ್ತಿ ಕರ್ನಾಟಕ ರತ್ನ 2026 ಇದರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇದೇ ಬರುವ ನವಂಬರ್ 29ರಂದು ಸ‌ರ್ ಪುಟ್ಟಣ್ಣ ಚೆಟ್ಟಿ ಪುರಭವನ ಟೌನ್ ಹಾಲ್ ಬೆಂಗಳೂರು ಇಲ್ಲಿ ನಡೆಯುವ ಕರ್ನಾಟಕ ಮೀಡಿಯಾ ಕ್ಲಬ್ ಅಭಿನಂದನಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

Related posts

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಂಸದ ಬಿ.ವೈ . ರಾಘವೇಂದ್ರ ಭೇಟಿ

Suddi Udaya

ಅಂತರ್ ಕಾಲೇಜು ಚರ್ಚಾ ಸ್ಪರ್ಧೆ: ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನ ವಿದ್ಯಾರ್ಥಿ ಫಾತಿಮಾತ್ ರಾಫಿಯಾ ರಿಗೆ ದ್ವಿತೀಯ ಸ್ಥಾನ

Suddi Udaya

ಫೆ. 26ರಿಂದ ಮಾ.4: ಬೆಳಾಲು ಮಾಯ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರೆ

Suddi Udaya

ನೀಟ್ ಯುಜಿ (NEET-UG) ಮರು ಪರೀಕ್ಷೆಯ ದಿನಾಂಕ ನಿಗದಿ

Suddi Udaya

ಉಜಿರೆ  : ಎಸ್.ಡಿ.ಎಂ ಪ.ಪೂ. ವಸತಿ ಕಾಲೇಜಿನಲ್ಲಿ ‘ಕಾರ್ಗಿಲ್ ವಿಜಯ ದಿವಸ ಆಚರಣೆ’

Suddi Udaya

ಜೆಸಿ ಸಪ್ತಾಹ ಅಂಗವಾಗಿ ತರಬೇತಿ ದಿನದ ಆಚರಣೆ

Suddi Udaya
error: Content is protected !!