November 28, 2026
ಚಿತ್ರ ವರದಿತಾಲೂಕು ಸುದ್ದಿ

527 ಹುತಾತ್ಮ ಯೋಧರ ಸ್ಮರಣಾರ್ಥ-527 ಮರಗಳ ವನಕ್ಕೆ ಗೌರವ ನಮನ-ಕೊಟ್ಟಿಗೆಹಾರದಿಂದ ಮುಂಡಾಜೆಯ ಕಾರ್ಗಿಲ್ ಸ್ಮಾರಕ ವನದವರೆಗೆ ಸುರೇಶ್ ಕುಮಾರ್ ಅವರ 30 ಕಿ.ಮೀ. ಪಾದಯಾತ್ರೆ

ಬೆಳ್ತಂಗಡಿ: ಕಾರ್ಗಿಲ್ ಯುದ್ಧದಲ್ಲಿ ದೇಶದ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದ 527 ವೀರ ಯೋಧರ ಸ್ಮರಣಾರ್ಥ 527 ವಿವಿಧ ಜಾತಿಯ ಮರಗಳನ್ನು ಬೆಳೆಸಿ ನಿರ್ಮಿಸಿರುವ ‘ಕಾರ್ಗಿಲ್ ಸ್ಮಾರಕ ವನ’ಕ್ಕೆ ಗೌರವ ನಮನ ಸಲ್ಲಿಸುವ ಉದ್ದೇಶದಿಂದ ಸುರೇಶ್ ಕುಮಾರ್ ಅವರು ಕೊಟ್ಟಿಗೆಹಾರದಿಂದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದವರೆಗೆ ವಿಶೇಷ ಪಾದಯಾತ್ರೆ ಕೈಗೊಂಡಿದ್ದಾರೆ.

ಕೊಟ್ಟಿಗೆಹಾರದಿಂದ ಪಾದಯಾತ್ರೆ ಆರಂಭಿಸಿದ ಸುರೇಶ್ ಕುಮಾರ್ ಅವರನ್ನು ಸ್ಥಳೀಯರಾದ ಸಂಜಯ್ ಗೌಡ (ಕೊಟ್ಟಿಗೆಹಾರ), ಅಭಿಲಾಷ್ (ಅತ್ತಿಗೆರೆ), ಸಾಗರ್ ತರುವೆ, ವಿಕ್ರಂ (ಬಿದ್ರುತಳ), ವಿನಯ್ ಸೇರಿದಂತೆ ಹಲವು ಮಂದಿ ಆತ್ಮೀಯವಾಗಿ ಬೀಳ್ಕೊಟ್ಟು ಶುಭ ಹಾರೈಸಿದರು.

ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಗಡಿ ಭಾಗದಲ್ಲಿರುವ ಮುಂಡಾಜೆ ಗ್ರಾಮದಲ್ಲಿ ಸಚಿನ್ ಎಂಬ ಪರಿಸರ ಪ್ರೇಮಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ 527 ಯೋಧರ ಸ್ಮರಣಾರ್ಥ 527 ವಿವಿಧ ಜಾತಿಯ ಮರಗಳನ್ನು ಬೆಳೆಸಿ ವಿಶಿಷ್ಟವಾದ ಕಾರ್ಗಿಲ್ ಸ್ಮಾರಕ ವನ ನಿರ್ಮಿಸಿದ್ದಾರೆ. ಪರಿಸರ ಸಂರಕ್ಷಣೆಯೊಂದಿಗೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರ ಸ್ಮರಣೆಯನ್ನು ಶಾಶ್ವತಗೊಳಿಸಿರುವ ಸಚಿನ್ ಅವರ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಸೈಕ್ಲಿಂಗ್ ಮೂಲಕ ತೆರಳಿದ್ದ ಸಂದರ್ಭದಲ್ಲಿ ಸುರೇಶ್ ಕುಮಾರ್ ಅವರಿಗೆ ಈ ಸ್ಮಾರಕ ವನದ ಪರಿಚಯವಾಗಿತ್ತು. 527 ಹುತಾತ್ಮ ಯೋಧರ ನೆನಪಿಗಾಗಿ ಅಷ್ಟೇ ಸಂಖ್ಯೆಯ ಮರಗಳನ್ನು ಬೆಳೆಸಿರುವ ಸಚಿನ್ ಅವರ ವಿಭಿನ್ನ ಪ್ರಯತ್ನದಿಂದ ಪ್ರೇರಿತರಾದ ಅವರು, ಖುದ್ದಾಗಿ ಸ್ಮಾರಕ ವನಕ್ಕೆ ಭೇಟಿ ನೀಡಿ ಸಚಿನ್ ಅವರನ್ನು ಅಭಿನಂದಿಸುವ ಹಾಗೂ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸುವ ಸಂಕಲ್ಪ ಮಾಡಿದ್ದಾರೆ.

ಕೊಟ್ಟಿಗೆಹಾರದಿಂದ ಚಾರ್ಮಾಡಿ ಘಾಟ್ ಮಾರ್ಗವಾಗಿ ಮುಂಡಾಜೆ ಗ್ರಾಮದವರೆಗೆ ಸುಮಾರು 30 ಕಿಲೋಮೀಟರ್ ಪಾದಯಾತ್ರೆ ನಡೆಸಲಿರುವ ಸುರೇಶ್ ಕುಮಾರ್, ಪರಿಸರ ಸಂರಕ್ಷಣೆ ಮತ್ತು ದೇಶಭಕ್ತಿಯ ಸಂದೇಶವನ್ನು ಸಾರಲಿದ್ದಾರೆ.
“ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ 527 ವೀರ ಯೋಧರ ಸ್ಮರಣಾರ್ಥ 527 ಮರಗಳನ್ನು ಬೆಳೆಸಿ ಸ್ಮಾರಕ ವನ ನಿರ್ಮಿಸಿರುವ ಸಚಿನ್ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಯೋಧರ ತ್ಯಾಗವನ್ನು ಸ್ಮರಿಸುವುದರ ಜೊತೆಗೆ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿರುವುದು ಎಲ್ಲರಿಗೂ ಮಾದರಿಯಾಗಿದೆ. ಇಂತಹ ಅಪರೂಪದ ಕಾರ್ಯವನ್ನು ಕಣ್ಣಾರೆ ಕಂಡು ಸಚಿನ್ ಅವರನ್ನು ಅಭಿನಂದಿಸಬೇಕು ಹಾಗೂ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಬೇಕು ಎಂಬ ಉದ್ದೇಶದಿಂದ ಈ ಪಾದಯಾತ್ರೆ ಕೈಗೊಂಡಿದ್ದೇನೆ. ದೇಶಕ್ಕಾಗಿ ಪ್ರಾಣ ನೀಡಿದ ಯೋಧರ ಸ್ಮರಣೆ ಸದಾ ಜೀವಂತವಾಗಿರಬೇಕು ಎಂಬುದೇ ನನ್ನ ಆಶಯ” ಎಂದು ಸುರೇಶ್ ಕುಮಾರ್ ತಿಳಿಸಿದರು.

ದೇಶಭಕ್ತಿ ಮತ್ತು ಪರಿಸರ ಪ್ರೀತಿಯನ್ನು ಬೆಸೆಯುವ ಈ ವಿಶೇಷ ಪಾದಯಾತ್ರೆಗೆ ಕೊಟ್ಟಿಗೆಹಾರದಲ್ಲಿ ಸ್ಥಳೀಯರು ಶುಭ ಹಾರೈಸಿದರು.

Related posts

ಸಾಂಸ್ಕೃತಿಕ ಸ್ಪರ್ಧೆ: ಎ ಎ ಅಕಾಡೆಮಿ ಸಹಯೋಗದ ಪ್ರಸನ್ನ ಪಿಯು ಕಾಲೇಜಿಗೆ ಸಮಗ್ರ ಪ್ರಶಸ್ತಿ

Suddi Udaya

ಉಜಿರೆ ಎಸ್.ಡಿ.ಎಮ್ ಸಮೂಹ ಶಿಕ್ಷಣ ಸಂಸ್ಥೆಗಳಿಂದ ಶಿಕ್ಷಕರಿಗೆ ‘ಅನುಭವ ಕಲಿಕೆ’ ಕಾರ್ಯಾಗಾರ

Suddi Udaya

ನೇತ್ರಾವತಿ ನದಿಯಲ್ಲಿ ಬಿದ್ದು ಮಂಜೊಟ್ಟಿಯ ಯುವಕ ಮೃತ್ಯು

Suddi Udaya

ತಾ| ಮಟ್ಟದ ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನಾದರಿಸಿದ ಸ್ಪರ್ಧೆ: ಧರ್ಮಸ್ಥಳ ಶ್ರೀ ಮಂ.ಸ್ವಾ.ಅ.ಹಿ.ಪ್ರಾ. ಶಾಲೆಗೆ ಹಲವು ಪ್ರಶಸ್ತಿ

Suddi Udaya

ಬೈಪಾಡಿ ಸರಕಾರಿ ಪ್ರೌಢ ಶಾಲೆಯಲ್ಲಿ ವಿಶೇಷ ತರಗತಿ ಉದ್ಘಾಟನೆ

Suddi Udaya

ಪಡುಬಿದ್ರೆಯಲ್ಲಿ ಭೀಕರ ರಸ್ತೆ ಅಪಘಾತ: ಅರಸಿನಮಕ್ಕಿ ಪುರುಷೋತ್ತಮ್ ಅಭ್ಯಂಕರ್ ರವರ ಪತ್ನಿ ಶ್ರೀಮತಿ ಸುಮಂಗಳ ಮೃತ್ಯು

Suddi Udaya
error: Content is protected !!