November 28, 2026
ಗ್ರಾಮಾಂತರ ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

-ರಾಜ್ಯಮಟ್ಟದ ರಬ್ಬರ್ ಬೆಳೆಗಾರರ ಸಮ್ಮೇಳನದ ಬಳಿಕ-ಡಾ.ವಿಶ್ವೇಶ್ವರ ವರ್ಮುಡಿಯವರು ನೀಡಿದ ‘ರಬ್ಬರಿನ ಬೆಲೆಯಲ್ಲೇಕೆ ಏರಿಳಿತ?’ ಸಮಗ್ರ ವರದಿಗೆ ಅಂತರಾಷ್ಟ್ರೀಯ ಮನ್ನಣೆ-ಕೇರಳ ಸರಕಾರದಿಂದ ರಬ್ಬರ್‌ಗೆ ಬೆಂಬಲ ಬೆಲೆ-ಪತ್ರಿಕಾಗೋಷ್ಠಿಯಲ್ಲಿ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ.ಭಿಡೆ

ಬೆಳ್ತಂಗಡಿ: ಕರ್ನಾಟಕ ರಾಜ್ಯ ರಬ್ಬರು ಬೆಳೆಗಾರರ ಹಿತರಕ್ಷಣಾ ವೇದಿಕೆಯು ರಬ್ಬರು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಆಗಿಂದಾಗ್ಗೆ ಸಂಬAಧಪಟ್ಟವರನ್ನು ಸಂಪರ್ಕಿಸಿ ಸಮಸ್ಯೆಗಳ ಪರಿಹಾರ ಹಾಗು ರಬ್ಬರು ಕೃಷಿಕರ ಅಭ್ಯುದಯಕ್ಕಾಗಿ ದುಡಿಯುತ್ತಿದೆ. ಈ ನಿಟ್ಟಿನಲ್ಲಿ ರಬ್ಬರು ಧಾರಣೆ ತೀರಾ ಕುಸಿದು ಕರ್ನಾಟಕದಲ್ಲಿ ರಬ್ಬರು ಕೃಷಿ ನಶಿಸಿ ಹೋಗುವ ಹಂತಕ್ಕೆ ತಲುಪಿದ ಸಂದರ್ಭ 2025ರ ನವೆಂಬರ್ 29ರಂದು ರಾಜ್ಯಮಟ್ಟದ ರಬ್ಬರು ಬೆಳೆಗಾರರ ಸಮ್ಮೇಳನ'ವನ್ನು ವಿವಿಧ ಸಂಘಟನೆಗಳ ಸಹಕಾರದಿಂದ ಉಜಿರೆಯಲ್ಲಿ ಸಂಘಟಿಸಿ ಸರಕಾರಗಳಿಗೆ ಬೇಡಿಕೆಯ ಹಕ್ಕೊತ್ತಾಯವನ್ನು ಮಾಡಿದೆ ಎಂದು ಉಜಿರೆ ರಬ್ಬರ್ ಸೊಸೈಟಿಯ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ರಬ್ಬರು ಬೆಳೆಗಾರರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶ್ರೀಧರ ಜಿ.ಭಿಡೆ ಹೇಳಿದರು.

ಅವರು ನ.28ರಂದು ಉಜಿರೆ ರಬ್ಬರ್ ಸೊಸ್ಯಟಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ರಬ್ಬರು ಮಾರುಕಟ್ಟೆ ಕುರಿತಂತೆ ಸಮಗ್ರ ಅಧ್ಯಯನ ವರದಿಯನ್ನು ನಾಡಿನ ಹೆಸರಾಂತ ಹಿರಿಯ ಅರ್ಥಶಾಸ್ತçಜ್ಞ ಅಂತರಾಷ್ಟ್ರೀಯ ಖ್ಯಾತಿಯ ಡಾ.ವಿಶ್ವೇಶ್ವರ ವರ್ಮುಡಿಯವರು ತಯಾರಿಸಿ ಸರಕಾರಗಳಿಗೆ ಸಲ್ಲಿಸಲಾಗಿದ್ದು, ಈ ವರದಿಗೆ ಇದೀಗ ಅಂತರಾಷ್ಟ್ರೀಯ ಮನ್ನಣೆ ಸಿಕ್ಕಿದೆ. ಅಲ್ಲದೆ ಕೇರಳ ಸರಕಾರ ಸದ್ರಿ ವರದಿಯನ್ನು ಪರಿಗಣಿಸಿ ಬೆಂಬಲ ಬೆಲೆ ಮಾಡಿದೆ ಹಾಗೂ ಬೆಳೆಗಾರರು 2026ರ ನವೆಂಬರ್ ತಿಂಗಳಲ್ಲಿ ರೂ.300 ಸರ್ವಕಾಲಿಕ ದಾಖಲೆ ಧಾರಣೆಯನ್ನು ಪಡೆಯಲು ಕಾರಣವಾಗಿದೆ ಎಂದು ತಿಳಿಸಿದರು. ಆದರೆ ಧಾರಣೆಯೂ ತೀರಾ ಏರಿಳಿತ ಕಾಣುತ್ತಿದ್ದು, ನಿರಂತರತೆ ಕಾಯ್ದುಕೊಳ್ಳಬೇಕಾಗಿದೆ. ರೈತರ ಬೆಂಬಲಕ್ಕೆ ಹಾಗೂ ನ್ಯಾಯಯುತವಾದ ದರ ಗ್ರಾಹಕರಿಗೆ ದೊರೆಯುವಲ್ಲಿ ಬೆಳೆಗಾರರ ಹಿತರಕ್ಷಣಾ ವೇದಿಕೆ ಶ್ರಮಿಸುತ್ತಿದೆ. ವರದಿಯ ಬಗ್ಗೆ ವಿಧಾನ ಪರಿಷತ್‌ನಲ್ಲಿ ಚರ್ಚೆ ನಡೆದಿದೆ. ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ಈ ವರದಿಯನ್ನು ಪರಿಗಣಿಸಿ ಬೆಂಬಲ ಬೆಲೆ ಘೋಷಿಸಬೇಕು ಎಂದು ಒತ್ತಾಯಿಸಿದರು. ಬೆಳೆಗಾರರು ಮುಂದಕ್ಕೆ ಅನುಸರಿಸಬೇಕಾದ ಕ್ರಮಗಳ ಕುರಿತು ನ.28ರಂದು ವಿಶೇಷ ಸಭೆ ಕರೆದು ಚರ್ಚಿಸಲಾಗಿದೆ ಎಂದು ತಿಳಿಸಿದರು. ಕೇಂದ್ರ ಕೃಷಿ ಸಚಿವರು ಈ ವರದಿಯ ಬಗ್ಗೆ ಚರ್ಚಿಸಲು ಸಂಸದರ ಮೂಲಕ ಕರೆಯುತ್ತೇನೆ ಎಂದು ಭರವಸೆ ನೀಡಿದ್ದಾರೆ. ಇದರ ಬಗ್ಗೆ ನಾವು ಶೀಘ್ರ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹಿತರಕ್ಷಣಾ ವೇದಿಕೆಯ ಸಂಯೋಜಕ ಅನಂತ ಭಟ್ ಮಚ್ಚಿಮಲೆ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರಬ್ಬರು ಬೆಳೆಗಾರರ ಹಿತರಕ್ಷಣಾ ವೇದಿಕೆಯ ಸಂಯೋಜಕ ಅನಂತ ಭಟ್ ಮಚ್ಚಿಮಲೆ, ಉಪಾಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಪುತ್ತೂರು, ಕಾರ್ಯದರ್ಶಿಗಳಾದ ರಾಜು ಶೆಟ್ಟಿ ಉಜಿರೆ, ವಿಜಯ ಕೃಷ್ಣ ಸುಳ್ಯ, ಸದಸ್ಯ ಸಜಿ ಜೋಸ್ ಕುರುವತ್ತಜ ಜಡ್ಕಲ್ ಉಪಸ್ಥಿತರಿದ್ದರು. ರಬ್ಬರ್ ಸೊಸೈಟಿ ವಿಶೇಷಾಧಿಕಾರಿ ರಾಜುಶೆಟ್ಟಿ ಸ್ವಾಗತಿಸಿ, ವಂದಿಸಿದರು.

ಡಾ.ವಿಶ್ವೇಶ್ವರ ವರ್ಮುಡಿಯವರು ನೀಡಿದ ರಬ್ಬರಿನ ಬೆಲೆಯಲ್ಲೇಕೆ ಏರಿಳಿತ?’ ವರದಿಯಲ್ಲೇನಿದೆ..?:
ಕಳೆದ ವರ್ಷದಿಂದೀಚೆಗೆ ರಬ್ಬರಿನ ಬೆಲೆ ಏರಿಳಿತಕ್ಕೆ ಒಳಗಾಗುತ್ತಿದೆ. ಇತ್ತೀಚೆಗೆ ರೂ. ೩೦೦ ರ ಗಡಿದಾಟಿ ಇದೀಗ ಇಳಿಕೆಯ ಹಾದಿ ಹಿಡಿದಿದೆ. ಇದರಿಂದಾಗಿ ಬೆಳೆಗಾರರು ಸಂಕಷ್ಟಕ್ಕೆ ಈಡಾಗಿದ್ದಾರೆ. ಸ್ವಾಭಾವಿಕ ರಬ್ಬರಿನ ಬೆಲೆ ನಿರ್ಧರಿಸುವ ಅಂಶಗಳು: ೧. ಬೇಡಿಕೆ . ೨. ಪೂರೈಕೆ.

೧. ಬೇಡಿಕೆ: ಇದು ಆಂತರಿಕ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮುಖ್ಯವಾಗಿ ವಾಹನಗಳ ಉದ್ದಿಮೆಯಿಂದ ಬರುವಂತದ್ದಾಗಿದೆ. ಇದರಲ್ಲಿ ಹೊಸವಾಹನಗಳ ಉತ್ಪಾದನೆ ಮತ್ತು ಹಳೆಯ ಚಕ್ರಗಳ ಸವೆಯುವಿಕೆಯ ಪ್ರವೃತ್ತಿ ಸ್ವಾಭಾವಿಕ ರಬ್ಬರಿಗೆ ಇರುವ ಬೇಡಿಕೆಯನ್ನು ನಿರ್ಧರಿಸುತ್ತದೆ.
ಇದರೊಂದಿಗೆ ಉದ್ದಿಮೆದಾರರ ದಾಸ್ತಾನು ಸಾಮರ್ಥ್ಯ, ಬ್ಯಾಂಕಿನ ಬಡ್ಡಿದರ, ಸರಕಾರದ ವಾಹನ ಉದ್ದಿಮೆಯ ನೀತಿ ಇತ್ಯಾದಿಗಳು ಪ್ರಮುಖ ಪಾತ್ರ ವಹಿಸುತ್ತವೆ.
ಇನ್ನೊಂದು ಬದಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಚಾಲ್ತಿಯಲ್ಲಿರುವ ತೈಲದರ, ರಾಜಕೀಯ ಸಂಘರ್ಷಗಳು, ಯುದ್ಧಗಳು, ಹಣದಮೌಲ್ಯ, ಇವೂ ಕೂಡ ನಿರ್ಣಾಯಕ ಪಾತ್ರವಹಿಸುತ್ತವೆ. ಇಷ್ಟು ಮಾತ್ರವಲ್ಲದೆ ಹವಾಮಾನ ಕೂಡಾ ಬೆಲೆಯ ನಿರ್ಧರಿಸುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಜಗತ್ತಿನಲ್ಲಿ ರಬ್ಬರಿನ ಬಳಕೆಯಲ್ಲಿ ಚೀನಾ ಮೊದಲನೇ ಸ್ಥಾನದಲ್ಲಿ ಇದ್ದು, ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಅಮೆರಿಕಾ, ಮಲೇಷ್ಯಾ, ಜಪಾನ್, ವಿಯೆಟ್ನಾಂ, ಭಾರತ, ದಕ್ಷಿಣಕೊರಿಯಾ ಮುಂತಾದ ದೇಶಗಳಿವೆ. ಈ ಎಲ್ಲಾ ರಾಷ್ಟçಗಳು ತಮ್ಮ ಆಂತರಿಕ ಬೇಡಿಕೆಯನ್ನು ಈಡೇರಿಸಲು ಆಮದಿಗೆ ಮುಂದಾಗುತ್ತವೆ.

ಸ್ವಾಭಾವಿಕ ರಬ್ಬರಿನ ಆಮದಿನ ಪ್ರಮಾಣದ ದೃಷ್ಟಿಯಿಂದ ನೋಡುವುದಾದರೆ ವಿಶ್ವದ ಒಟ್ಟು ಆಮದಿನ ಶೇಕಡಾ 29.7 ಚೀನಾಕ್ಕೆ, 10.6 ಅಮೆರಿಕ, 8.2 ಮಲೇಷ್ಯಾ, 7.5 ಜಪಾನ್, ತಲಾ 4.8 ವಿಯೆಟ್ನಾಂ ಮತ್ತು ಭಾರತಕ್ಕೆ ಆಗುತ್ತದೆ. ವಿಶ್ವದ ಅಂದಾಜಿಸಲ್ಪಟ್ಟ ಒಟ್ಟು ಬೇಡಿಕೆ — 15, 36,000 ಮಿಲಿಯನ್ ಟನ್.

೨.ಪೂರೈಕೆ:
ಸ್ವಾಭಾವಿಕ ರಬ್ಬರಿನ ಪೂರೈಕೆಯನ್ನು ನಿರ್ಧರಿಸುವ ಅಂಶಗಳು: ೧. ವಿವಿಧ ಉತ್ಪಾದನಾ ರಾಷ್ಟçಗಳಲ್ಲಿನ ಉತ್ಪಾದನೆ. ೨. ಹಳೇಯ ದಾಸ್ತಾನು ೩. ಹವಾಮಾನ
೪. ಎಲ್‌ನೋ ಪ್ರಭಾವ ೫. ಮಾರುಕಟ್ಟೆ ದರ ೬. ಕಾರ್ಮಿಕರ ಲಭ್ಯತೆ ಇತ್ಯಾದಿಗಳು. ವಿಶ್ವದ ಅಂದಾಜಿಸಲ್ಪಟ್ಟ ಒಟ್ಟು ಪೂರೈಕೆಯ ಪ್ರಮಾಣ ೧೫,೦೪,೦೦೦ ಮಿಲಿಯನ್ ಟನ್.
ಒಟ್ಟು ಬೇಡಿಕೆ ಮತ್ತು ಪೂರೈಕೆ: ಬೇಡಿಕೆ ಪ್ರಮಾಣ ೧೫.೩೬ ಮಿಲಿಯನ್ ಟನ್, ಪೂರೈಕೆ ಆಗಬಹುದಾದ ಪ್ರಮಾಣ ೧೫.೦೪ ಮಿಲಿಯನ್ ಟನ್.
ಅಂದಾಜಿಸಲ್ಪಟ್ಟ ಕೊರತೆ ಪ್ರಮಾಣ ೩,೧೭,೦೦೦ ಮಿಲಿಯನ್ ಟನ್.

ಬೆಲೆಯೇರಿಕೆಗೆ ಪ್ರಮುಖ ಕಾರಣಗಳು: ಅಂತರಾಷ್ಟ್ರೀಯ- ೧. ಕಳೆದ ವರ್ಷ( ದಶಂಬರ್ ೨೦೨೫) ಥೈಲ್ಯಾಂಡ್ನಲ್ಲಿ ಕಂಡುಬAದ ಹವಾಮಾನ ವೈಪರೀತ್ಯದಿಂದಾಗಿ ಉತ್ಪಾದನೆಯಲ್ಲಿ ಆದ ಕುಸಿತ. ( ಅಂದಾಜು ೯೦,೦೦೦ ಟನ್) ೨. ಪರಿಣಾಮವಾಗಿ ಥೈಲ್ಯಾಂಡ್ ರಬ್ಬರ್ ನಿಗಮ ರಬ್ಬರು ಮಾರಾಟದ ಮೇಲೆ ತೆಗೆದುಕೊಂಡ ಹತೋಟಿ ಕ್ರಮ. ಅಂತರಿಕ: ೧. ಭಾರತದ ಕೇಂದ್ರ ಸರಕಾರ ಜಿಎಸ್ಟಿ ಕಡಿಮೆ ಮಾಡಿದ ಪರಿಣಾಮವಾಗಿ ವಾಹನ ಉದ್ದಿಮೆಯಲ್ಲಿನ ಬೆಳವಣಿಗೆ. ೨. ಕೇರಳ ಸರ್ಕಾರ ಬೆಂಬಲ ಬೆಲೆ ಕೊಡಲು ಮುಂದಾಗಿದ್ದು. (ರೂ. ೨೫೦) ೩. ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ಪಾದನೆ ಕಡಿಮೆ ಆಗಬಹುದೆಂಬ ಭಯದಿಂದ ಆಂತರಿಕವಾಗಿ ವ್ಯವಹಾರಸ್ಥರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಕ್ಕೆ ಮುಂದಾಗಿ ಬೆಲೆ ಏರಿಕೆಗೆ ಅವಕಾಶ ಸೃಷ್ಟಿಯಾದ್ದು. ೪. ಭಾರತದ ನಿರೀಕ್ಷಿತ ಬಳಕೆಯ ಪ್ರಮಾಣ( ೨೦೨೫- ೨೦೨೬ ೧೪.೨೭ ಲಕ್ಷಟನ್ ಇದು ೨೦೨೪- ೨೦೨೫ರ ಸಾಲಿನಲ್ಲಿ ೧೪.೧೦ ಲಕ್ಷಟನ್ ಇತ್ತು.) ೫. ಸ್ವಾಭಾವಿಕ ರಬ್ಬರಿನ ಆಮದಿನ ಪ್ರಮಾಣದಲ್ಲಿ ಶೇಕಡಾ ೧೬.೭ ರಷ್ಟು ಕುಸಿತ.

ಕುಸಿತಕ್ಕೆ ಕಾರಣಗಳು:
೧. ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಇಳಿಕೆ. ೨. ಥೈಲ್ಯಾಂಡ್ ನಲ್ಲಿ ರಬ್ಬರಿನ ಉತ್ಪಾದನೆ ಹೆಚ್ಚಾಗುವ ಸಾಧ್ಯತೆ. ೩. ಚೀನಾದ ವಾಹನ ಉದ್ದಿಮೆಗಳಲ್ಲಿನ ಹಿಂಜರಿಕೆಯ ಸಂಕೇತ. ೪. ಐರೋಪ್ಯ ಒಕ್ಕೂಟದ ರಾಷ್ಟçಗಳಲ್ಲಿ ಹಾಗೂ ಅಮೆರಿಕದ ಟೈರ್ ಉದ್ದಿಮೆಗಳಲ್ಲಿ ನಿಧಾನಗತಿಯ ಬೆಳವಣಿಗೆ ೫. ತೈಲ ದರ ಇಳಿಕೆಯ ಹಾದಿ
೨. ಅಂತರಾಷ್ಟ್ರೀಯ ಮಟ್ಟದಲ್ಲಿ ಹಣದ ಮೌಲ್ಯದಲ್ಲಿನ ಏರುಪೇರು. ೭. ಹೆಚ್ಚುತ್ತಿರುವ ಕಾಂಪೌAಡ್ ರಬ್ಬರಿನ ತೆರಿಗೆ ರಹಿತ ಆಮದು. ೮. ಅಂತರಿಕವಾಗಿ ದಾಸ್ತಾನು ಪ್ರಮಾಣ ಹೆಚ್ಚಾಗಿ ಖರೀದಿಗೆ ನಿರಾಸಕ್ತಿ. ಇದರೊಂದಿಗೆ ಕಡಿಮೆ ಬೆಲೆಗೆ ಬೆಳೆಗಾರರು ಮಾರಾಟ ಮಾಡಬಹುದೆಂಬ ಊಹೆ. ೯. ಹಣಕಾಸಿನ ಕೊರತೆಯಿಂದ ಕೇರಳ ಸರ್ಕಾರ ಮಾರುಕಟ್ಟೆ ಮದ್ಯ ಪ್ರವೇಶ ಮಾಡಲಾರದ ಸ್ಥಿತಿ ನಿರ್ಮಾಣವಾದ್ದು.

ಮುಂದೆ ಏನಾಗಬಹುದು.?:
೧. ವಿಶ್ವಬ್ಯಾಂಕಿನ ವರದಿ( ಅಕ್ಟೋಬರ್ ೨೬, ೨೦೨೬ )ಪ್ರಕಾರ ೨೦೨೭ ರ ಸಮಯದಲ್ಲಿ ಸ್ವಾಭಾವಿಕ ರಬ್ಬರಿನ ಬೆಲೆಯಲ್ಲಿ ಶೇಕಡಾ ೪.೫ ರಷ್ಟು ಏರಿಕೆ ಸಾದ್ಯ. ಇದಕ್ಕೆ ವರದಿಯಲ್ಲಿ ಹೆಸರಿಸಿದ ಪೂರಕ ಕಾರಣಗಳು. ೨. ಹವಾಮಾನದ ವೈಪರೀತ್ಯ. ಎಲ್‌ನೋದ ಪ್ರಭಾವದಿಂದಾಗಿ ಥೈಲ್ಯಾಂಡ್, ಇಂಡೋನೇಷಿಯಾ ಮತ್ತು ಮಲೇಷ್ಯಾಗಳಲ್ಲಿ ಸ್ವಾಭಾವಿಕ ರಬ್ಬರಿನ ಉತ್ಪಾದನೆಯಲ್ಲಿ ಕುಸಿತ. ೩. ತೈಲ ಬೆಲೆ ಏರಿಕೆಯಿಂದಾಗಿ ಸಿಂಥೆಟಿಕ್ ರಬ್ಬರಿನ ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳ. ೪.ಅಂತರಾಷ್ಟ್ರೀಯ ರಬ್ಬರ್ ಅಧ್ಯಯನ ಸಮೂಹದ ಪ್ರಕಾರ(ನವೆಂಬರ್,೧೩, ೨೦೨೬) ೨೦೨೭ರ ಸಮಯದಲ್ಲಿ ರಬ್ಬರಿನ ಬೆಲೆ ಸ್ಥಿರ ಇಲ್ಲವೇ ಸಣ್ಣಪ್ರಮಾಣದಲ್ಲಿ ಏರಿಕೆ ಆಗಬಹುದು. ಇದಕ್ಕೆ ಕಾರಣ ಟಯರ್ ಬದಲಾವಣೆಯ ವೇಗ ಹೆಚ್ಚಾಗಬಹುದು ಮತ್ತು

ಎಲ್‌ನೋ ಪ್ರಭಾವ.
೨. ನವೆಂಬರ್ ೨೧, ೨೦೨೬ರ ಕೌಲಾಲಂಪುರ ರಬ್ಬರು ಮಾರುಕಟ್ಟೆ ವರದಿ ಪ್ರಕಾರ ೨೦೨೭ ರ ಸಮಯದಲ್ಲಿ ಸ್ವಾಭಾವಿಕ ರಬ್ಬರಿನ ಬೆಲೆ ಏರಿಕೆಗೆ ಅವಕಾಶಗಳಿವೆ. ಇದಕ್ಕೆ ಕಾರಣಗಳೆಂದರೆ, ೧. ಮಲೇಷಿಯಾದಲ್ಲಿ ಮುಂದಿನ ವರ್ಷದ ಆರಂಭದಲ್ಲಿ ಹೆಚ್ಚಿನಮಳೆ ಆಗಿ ಉತ್ಪಾದನೆ ಕುಸಿಯಬಹುದೆಂಬ ಊಹೆ.
೩. ಇದೇ ರೀತಿ ಥೈಲ್ಯಾಂಡ್‌ನಲ್ಲಿ ಕೂಡಾ ಅತೀ ಹೆಚ್ಚಿನ ಮಳೆ, ಭೂಕುಸಿತ, ನೀರಿನ ಅಬ್ಬರ ಇತ್ಯಾದಿ ಪ್ರಕೃತಿ ವಿಕೋಪಗಳಾಗಬಹುದೆಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಇದು ಉತ್ಪಾದನೆಯ ಕುಸಿತಕ್ಕೆ ದಾರಿ ಮಾಡಿಕೊಡಬಹುದು.
ಒಟ್ಟಾರೆಯಾಗಿ ಬೌಗೋಳಿಕ ಯುದ್ಧಗಳು, ಅಮೆರಿಕದ ಹಣದುಬ್ಬರ, ಪ್ರಾಕೃತಿಕ ಅಸಮತೋಲನ, ತೈಲದರ ಇತ್ಯಾದಿಗಳೊಂದಿಗೆ ಮಾರುಕಟ್ಟೆಯಲ್ಲಿನ ಊಹೆಗಳು ಭವಿಷ್ಯದಲ್ಲಿ ಸ್ವಾಭಾವಿಕ ರಬ್ಬರಿನ ಬೆಲೆ ನಿರ್ಧರಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಇವುಗಳೊಂದಿಗೆ ಆಂತರಿಕವಾಗಿ ಕೇರಳ ಸರಕಾರದ ಮುಂದಿನಹೆಜ್ಜೆ ಕೂಡಾ ಪ್ರಮುಖ ಪಾತ್ರ ನಿರ್ಮಾಣ ಮಾಡಬಹುದು.

ಭವಿಷ್ಯದಲ್ಲಿ ರಬ್ಬರು ಬೆಳೆಗಾರರ ಸಹಕಾರ ಸಂಘಗಳು ಮಾಡಬೇಕಾದ್ದೇನು?: ೧. ರಬ್ಬರ್ ಟ್ಯಾಪಿಂಗ್ ಪಡೆಯ ನಿರ್ಮಾಣ. ೨. ಸಂಘಗಳು ರಬ್ಬರ್ ಟ್ಯಾಪಿಂಗ್ ವ್ಯವಸ್ಥೆಗೆ ಮುಂದಾಗುವುದು. ೩. ಮಾರುಕಟ್ಟೆಯಲ್ಲಿ ಜಾಣ ನಡೆ. ೪. ಪೂರೈಕೆ ಮೇಲೆ ಹತೋಟಿ ೫.ಬೆಳೆಗಾರರು ಹಂತಹಂತವಾಗಿ ರಬ್ಬರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದು. ಮಾರುಕಟ್ಟೆಯಲ್ಲಿ ರಾಶಿ ಬೀಳದಂತೆ ನೋಡುವುದು. ೬. ರಬ್ಬರಿನೊಂದಿಗೆ ಉಪಬೆಳೆಗಳ ಬಗ್ಗೆ ಗಮನಹರಿಸುವುದು. ೭. ಸರಕಾರಗಳ ಮುಂದೆ ಆಗಿಂದಾಗ್ಗೆ ಸಮಸ್ಯೆಗಳ ನಿವೇದನೆ ಮತ್ತು ಪರಿಹಾರಗಳಿಗೆ ಕೋರಿಕೆ.

Related posts

ಪ್ರವೀಣ್ ಮದ್ದಡ್ಕ ಫೇಸ್‌ಬುಕ್ ಖಾತೆಯಿಂದ ದಲಿತ ಜನಾಂಗವನ್ನು ಅವಮಾನಿಸಿ ಜಾತಿ ನಿಂದನೆ ಪೋಸ್ಟ್: ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದಲಿತ ಸಂಘರ್ಷ ಸಮಿತಿಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

Suddi Udaya

ಧರ್ಮ ಸ್ಥಳ ಎಸ್‌ಡಿಎಂ ಆಂ.ಮಾ. ಶಾಲಾ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ವಿದಾಯ ಕೂಟ

Suddi Udaya

ಸುಲ್ಕೇರಿ ಅ.ಹಿ. ಪ್ರಾ. ಶಾಲೆ, ಶ್ರೀರಾಮ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮ

Suddi Udaya

ಆ.30: ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘದ ನಿಡ್ಲೆ ಶಾಖೆಯ ಉದ್ಘಾಟನೆ

Suddi Udaya

ಬಂದಾರು : ನಾಗಶ್ರೀ ಗೆಳೆಯರ ಬಳಗ ಕೆಲೆಂಜಿಮಾರು, ವಾರ್ಷಿಕೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆ: ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಬೆಳ್ತಂಗಡಿ ವಿಶ್ವಕರ್ಮಾಭ್ಯುದಯ ಸಭಾ ಇದರ ಶ್ರೀ ವಿಶ್ವಕರ್ಮ ಯಜ್ಞ ಮತ್ತು ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ

Suddi Udaya
error: Content is protected !!