September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪ್ರವೀಣ್ ಮದ್ದಡ್ಕ ಫೇಸ್‌ಬುಕ್ ಖಾತೆಯಿಂದ ದಲಿತ ಜನಾಂಗವನ್ನು ಅವಮಾನಿಸಿ ಜಾತಿ ನಿಂದನೆ ಪೋಸ್ಟ್: ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದಲಿತ ಸಂಘರ್ಷ ಸಮಿತಿಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

ಬೆಳ್ತಂಗಡಿ: ಪ್ರವೀಣ್ ಮದ್ದಡ್ಕ ಎಂಬಾತನು ತನ್ನ ಫೇಸ್‌ಬುಕ್ ಖಾತೆಯಿಂದ ದಲಿತ ಜನಾಂಗವನ್ನು ಅವಮಾನಿಸಿ ಜಾತಿ ಜನಾಂಗ ಮತ್ತು ಪಂಗಡಗಳ ನಡುವೆ ದ್ವೇಷ ಬಿತ್ತುವ ಹಾಗೂ ಸಮಾಜದ ಸೌಹಾರ್ದತೆಗೆ ಭಂಗವನ್ನುಂಟು ಮಾಡುವಂತಹ ಪೋಸ್ಟ್ ಹಾಕಿರುವುದರಿಂದ ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ತಾಲೂಕು ಶಾಖೆಯ ಮೂಲಕ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮನವಿ ನೀಡಿದರು.

ಮಾ.21 ರಂದು ರಾತ್ರಿ ಫೇಸ್‌ಬುಕ್ ಪೇಜ್‌ಗೆ ಪ್ರವೀಣ್ ಮದ್ದಡ್ಕ ಎಂಬವರ ಫೇಸ್‌ಬುಕ್ ಖಾತೆಯಿಂದ ದಲಿತ ಜನಾಂಗವನ್ನು ಅವಮಾನಿಸಿ ‘ ನಿಯತ್ತಿಲ್ಲದ ಜನ ಅಂದ್ರೆ ಈ ನೀಲಿ ಶಾಲಿನ ಜನಗಳು, ಅವುಗಳಿಗೆ ಬಿಟ್ಟಿ ಎಣ್ಣೆ ದುಡ್ಡು ಕೊಟ್ರೆ ಸ್ವಂತ ತಾಯಿಯನ್ನೇ ತಲೆಹಿಡಿತವೇ! ಇವರ ಜನರ ನೆರಳು ಮುಟ್ಟದ ಸಮಯದಲ್ಲಿ ದೇವಸ್ಥಾನ ಒಳಗೆ ಪ್ರವೇಶ ಕೊಟ್ಟು ಮೊಟ್ಟ ಮೊದಲ ದೇವಸ್ಥಾನ ಧರ್ಮಸ್ಥಳ ಆಗಿನ ಕಾಲದಲ್ಲಿ ಖಾವಂದರು ಇದಕ್ಕಾಗಿ ಬಹಳ ಟೀಕೆಗೆ ಒಳಪಟ್ಟಿದ್ದಾರೆ. ಇವತ್ತು ಈ ನಮಕ್ ಹರಮ್ಗಳು ಅವರದ್ದೇ ವಿರೋಧಿಗಳ ಜೊತೆಗೆ ಕೈ ಜೋಡಿಸಿದ್ದಾರೆ, ಎಂಬಿತ್ಯಾದಿ ಕೀಳುಮಟ್ಟದ ಪದ ಬಳಸಿ ಫೇಸ್‌ಬುಕ್ ನಲ್ಲಿ ಹರಿಯ ಬಿಟ್ಟಿರುವುದರಿಂದ ಜಾತಿ ಜನಾಂಗ-ಪಂಗಡಗಳ ನಡುವೆ ದ್ವೇಷ ಬಿತ್ತುವ ಹಾಗೂ ಸಮಾಜದ ಸೌಹಾರ್ದತೆಗೆ ಭಂಗವನ್ನುಂಟು ಮಾಡುವಂತಹ ಪೋಸ್ಟ್ ಹಾಕಿರುವವುದರ ವಿರುದ್ಧ ಕೇಸು ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಮೈಸೂರು ವಿಭಾಗೀಯ ಸಂಚಾಲಕ ಬಿ. ಕೆ ವಸಂತ್, ತಾಲೂಕು ಪ್ರಧಾನ ಸಂಚಾಲಕ ರಮೇಶ್ ಆರ್, ತಾಲೂಕು ಸಂಘಟನಾ ಸಂಚಾಲಕ ಎಸ್ ಪ್ರಭಾಕರ, ರಾಜ್ಯ ಸಂಘಟನಾ ಸಂಚಾಲಕರು ಉಪಸ್ಥಿತರಿದ್ದರು.

Related posts

ಆ.29ರಂದು ಮಹೇಶ್ ಶೆಟ್ಟಿ ತಿಮರೋಡಿ ದಂಪತಿ ಖುದ್ದು ಹಾಜರಾಗುವಂತೆ ಹೈ ಕೋರ್ಟ್ ಆದೇಶ

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ. ಶಾಲೆಯಲ್ಲಿ ಕನಕದಾಸ ಜಯಂತಿ ಆಚರಣೆ

Suddi Udaya

ಇಂದಬೆಟ್ಟು ಗ್ರಾ.ಪಂ. ನಲ್ಲಿ ಮಕ್ಕಳ ಗ್ರಾಮ ಸಭೆ, ಮಹಿಳಾ ಗ್ರಾಮ ಸಭೆ ಹಾಗೂ ದೂರ ದೃಷ್ಟಿ ಯೋಜನೆಯ ಗ್ರಾಮ ಸಭೆ

Suddi Udaya

ಮುಂಡಾಜೆ ಸೀಟು ಬಳಿ ರಸ್ತೆಗೆ ಬಿದ್ದ ಮರ : ವಾಹನ ಸವಾರರ ಪರದಾಟ

Suddi Udaya

ಓಡಿಲ್ನಾಳ ನಿವಾಸಿ ಲಕ್ಷ್ಮಿ ನಿಧನ

Suddi Udaya

ಸುಲ್ಕೇರಿಮೊಗ್ರು ಪ್ರಾ.ಕೃ.ಪ.ಸ. ಸಂಘಕ್ಕೆ ದ‌.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಪ್ರೋತ್ಸಾಹಕ ಪ್ರಶಸ್ತಿ

Suddi Udaya
error: Content is protected !!