November 28, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಳೆಂಜ ಗ್ರಾಮ ಸಮಿತಿಯಿಂದ ಸೆಬಾಸ್ಟಿಯನ್ ಪಿ.ಟಿ. ಅವರಿಗೆ ಸನ್ಮಾನ

ಅಮ್ಮಿನಡ್ಕ: ಕರ್ನಾಟಕ ಸರ್ಕಾರದ ಫಿಶರೀಸ್ ಡೆವಲಪ್‌ಮೆಂಟ್ ಬೋರ್ಡ್‌ನ ನಿರ್ದೇಶಕರಾಗಿ ನೇಮಕಗೊಂಡಿರುವ ಕಳೆಂಜ ಗ್ರಾಮದ ಸೆಬಾಸ್ಟಿಯನ್ ಪಿ.ಟಿ. ಅವರನ್ನು ಕಳೆಂಜ ಗ್ರಾಮ ಸಮಿತಿಯ ವತಿಯಿಂದ ಅಮ್ಮಿನಡ್ಕದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪಟ್ಟೆರಿಲ್ ಕುಟುಂಬಸ್ಥರು ಕೂಡ ಅವರನ್ನು ಗೌರವಿಸಿದರು. ಮುಖ್ಯ ಅತಿಥಿಗಳು ಅಭಿನಂದನಾ ಮಾತುಗಳನ್ನಾಡಿ, ಅವರ ಛಲ, ನಿರಂತರ ಪ್ರಯತ್ನ ಹಾಗೂ ಸಾಮಾಜಿಕ ಸೇವಾ ಮನೋಭಾವವನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸೆಬಾಸ್ಟಿಯನ್ ಪಿ.ಟಿ. ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಂಜೂರಾದ ವಿವಿಧ ಅನುದಾನಗಳು ಹಾಗೂ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತು ವಿವರಿಸಿದರು. ಮುಂದಿನ ದಿನಗಳಲ್ಲಿಯೂ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅಭಿವೃದ್ಧಿ ಕಾರ್ಯಗಳಿಗೆ ತಮ್ಮಿಂದ ಸಾಧ್ಯವಾದ ಸಹಕಾರ ನೀಡುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಬಳ್ಕಾಜೆ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಘವ ಹಾಗೂ ಸ್ಥಳೀಯ ಗ್ರಾಮಸ್ಥರು ಮನವಿ ಪತ್ರವನ್ನು ಸೆಬಾಸ್ಟಿಯನ್ ಪಿ.ಟಿ. ಅವರಿಗೆ ಸಲ್ಲಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ವಿನಂತಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಕಜೆ, ಕಾರ್ಯದರ್ಶಿ ಶೇಖರ ಗೌಡ ಪುತ್ಯೆ, ಅಕ್ರಮ ಸಕ್ರಮ ಸಮಿತಿ ಸದಸ್ಯ ಶ್ರೀಧರ್ ಎಸ್., ಬೂತ್ ಸಮಿತಿ ಅಧ್ಯಕ್ಷ ಅಶೋಕ್ ಭಟ್ ಕಾಯಡ, ಸುಂದರ ಗೌಡ ಕುದ್ದ, ಜಯವರ್ಮ ಜೈನ್, ಕೃಷ್ಣಪ್ಪ ಗೌಡ, ಭಾರತ್ ಜೋಡೋ ಅಧ್ಯಕ್ಷ ಶರತ್ ಮೂಡಾರು, ಶ್ರೀಧರ್ ರಾವ್, ಸದಾಶಿವೇಶ್ವರ ದೇವಸ್ಥಾನ ಕಳೆಂಜದ ಅಧ್ಯಕ್ಷರು, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ನಿತ್ಯಾನಂದ ರೈ ಮತ್ತು ಪ್ರೇಮ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಶರತ್ ಮೂಡಾರು ಸ್ವಾಗತಿಸಿದರು. ಜೈಸನ್ ಪಟ್ಟೆರಿಲ್ ವಂದಿಸಿದರು. ಸನ್ಮಾನ ಸ್ವೀಕರಿಸಿದ ಸೆಬಾಸ್ಟಿಯನ್ ಪಿ.ಟಿ. ಅವರು ಗ್ರಾಮ ಸಮಿತಿ, ಹಾಗೂ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದರು.

Related posts

ನಾವೂರಿನ ಡಾ. ಪ್ರದೀಪ್ ರವರ ಆರೋಗ್ಯ ಕ್ಲಿನಿಕ್ ಗೆ ಕಿಡಿಗೇಡಿಗಳಿಂದ ಬೆಂಕಿ: ಖಂಡನೆ

Suddi Udaya

ಸೌತಡ್ಕ: ‘ಜ್ಯೋತಿ’ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನೆ ಕಾರ್ಯಕ್ರಮ

Suddi Udaya

ಹಿರಿಯ ಸಹಕಾರಿ ಧುರೀಣ ಮಾಜಿ ಜಿ.ಪಂ. ಉಪಾಧ್ಯಕ್ಷ ನಿರಂಜನ ಬಾವಂತಬೆಟ್ಟು ನಿಧನ

Suddi Udaya

ಪೆರಿಂಜೆ : ಮಿಲಾದ್ ಆಚರಣೆಯ ಪ್ರಯುಕ್ತ ಮದ್ರಸ ವಿದ್ಯಾರ್ಥಿಗಳಿಂದ ‘ನೂರುನ್ ಆಲಾ ನೂರ್ ‘ಕಾರ್ಯಕ್ರಮ

Suddi Udaya

ಬಳಂಜ-ಪೆರೋಡಿತ್ತಾಯಕಟ್ಟೆ, ಆನೆಪಿಲ, ಅಟ್ಲಾಜೆ, ಬಳಂಜ ದೇವಸ್ಥಾನ ರಸ್ತೆ ಡಾಂಬರೀಕರಣ ಹಾಗೂ ಶಾಲಾ ರಂಗಮಂದಿರ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ರೂ.2 ಕೋಟಿ ಅನುದಾನ ಮಂಜೂರು

Suddi Udaya

ಚಂದ್ರನ ಮೇಲೆ ಸ್ಪರ್ಶ, ಎಕ್ಸೆಲ್ ನಲ್ಲಿ ಹರ್ಷ

Suddi Udaya
error: Content is protected !!