November 28, 2026
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಹಿರಿಯರ ಸೇವಾ ಪ್ರತಿಷ್ಠಾನದಿಂದ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ

ಬೆಳ್ತಂಗಡಿ: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರ್ ಬಂಟ್ವಾಳ ಮತ್ತು ಪ್ರತಿಷ್ಠಾನದ ಬೆಳ್ತಂಗಡಿ ಘಟಕದ ಸಹಯೋಗದಲ್ಲಿ ನಶಾಮುಕ್ತ ಸಮಾಜ ನಿರ್ಮಾಣ ಮತ್ತು ಕೌಟುಂಬಿಕ ಸಮಸ್ಯೆಗಳ ಪರಿಹಾರ ಬಗ್ಗೆ ತರಬೇತಿ ಶಿಬಿರವು ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಇದರ ಅಟಲ್ ಜಿ ಸಭಾಭವನದಲ್ಲಿ ಜರಗಿತು.

ತರಬೇತಿ ಶಿಬಿರವನ್ನು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರೀತಮ್. ಡಿ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ಕೆಯೂರು ನಾರಾಯಣ ಭಟ್ ವಹಿಸಿದ್ದರು.

ಕಾರ್ಯಕ್ರಮದ ಪ್ರಾಯೋಜಕರಾದ ಬಿ ಭುಜಬಲಿ ಧರ್ಮಸ್ಥಳ, ಬೆಳ್ತಂಗಡಿ ಘಟಕದ ಅಧ್ಯಕ್ಷ ಸೀತಾರಾಮ ಶೆಟ್ಟಿ ಉಜಿರೆ, ಸಂಚಾಲಕ ವಸಂತ ಸುವರ್ಣ, ಪ್ರತಿಷ್ಠಾನದ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ, ಸಹಕಾರಿ ಸಂಘದ ಸಹಾಯಕ ವ್ಯವಸ್ಥಾಪಕ ಸುಂದರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಶಾ ಮುಕ್ತ ಸಮಾಜ ನಿರ್ಮಾಣದ ಬಗ್ಗೆ ತರಬೇತಿದಾರರಾಗಿ ಎಸ್ ಕೆ ಡಿ ಆರ್ ಡಿ ಪಿ ನಿವೃತ್ತ ಯೋಜನಾಧಿಕಾರಿ ಶ್ರೀಹರಿ ಧರ್ಮಸ್ಥಳ, ಕೌಟುಂಬಿಕ ಸಮಸ್ಯೆಗಳ ಪರಿಹಾರದ ಬಗ್ಗೆ ಭಾರತೀಯ ಜೀವವಿಮಾ ನಿಗಮ ಅಭಿವೃದ್ಧಿ ಅಧಿಕಾರಿ ಎಂ ವಿಶ್ವೇಶ್ವರ ಶೆಟ್ಟಿ ಮಾಹಿತಿ ನೀಡಿದರು. ಕರ್ನಾಟಕ ಪ್ರಾಂತ್ಯದ ಸೇವಾ ಭಾರತಿ ಪ್ರಮುಖರಾದ ಚೆನ್ನಯ್ಯಸ್ವಾಮಿ ಸಾಮಾಜಿಕವಾದ ಕಾಳಜಿಯಿಂದ ಪ್ರತಿಷ್ಠಾನವು ನಡೆಸುತ್ತಿರುವ ಕಾರ್ಯಕ್ರಮಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ದ.ಕ ಜಿಲ್ಲೆಯ ಬೇರೆ ಬೇರೆ ತಾಲೂಕುಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಾಜಮಣಿ ರಾಮಕುಂಜ ಯೋಗ ಮತ್ತು ಪ್ರಾಣಾಯಮದ ಬಗ್ಗೆ ಮಾತನಾಡಿದರು.

ಭುಜಬಲಿ ಧರ್ಮಸ್ಥಳ, ಎಂ ವಿಶ್ವೇಶ್ವರ ಶೆಟ್ಟಿ, ಕಯ್ಯೂರು ನಾರಾಯಣ ಭಟ್ ಇವರನ್ನು ಗೌರವಿಸಲಾಯಿತು.

ಕಾರ್ಯಕ್ರಮ ಸಂಯೋಜಕರಾದ ಎಂ ಜಯರಾಮ ಭಂಡಾರಿ ಧರ್ಮಸ್ಥಳ ಸ್ವಾಗತಿಸಿದರು. ಪುತ್ತೂರು ಘಟಕದ ಶಂಕರಿ ಶರ್ಮ ಆಶಯಗೀತೆ ಹಾಡಿದರು. ಬೆಳ್ತಂಗಡಿ ಘಟಕದ ಕಾರ್ಯದರ್ಶಿ ಗಣೇಶ್ ಭಟ್ ವಂದಿಸಿದರು. ಬಂಟ್ವಾಳ ಘಟಕದ ಜಯಾನಂದ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು.

Related posts

ಯಂತ್ರೋಪಕರಣ ಅವಲಂಬಿತ ಕೃಷಿಕನಿಗೆ ತೊಂದರೆ ನೀಡಬೇಡಿ: ಮೋಹನ್ ಗೌಡ ಕಲ್ಮoಜ

Suddi Udaya

ಫೆ.19: ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜಾತ್ರೋತ್ಸವದ ಮಹಾರಥೋತ್ಸವದ ಪ್ರಯುಕ್ತ ‘ಬೆಳ್ತಂಗಡಿ ಮ್ಯೂಸಿಕಲ್ ನೈಟ್ಸ್’ ಹಾಗೂ ಬೀಟ್ ರಾಕರ್ಸ್ ಡ್ಯಾನ್ಸ್ ಇವರಿಂದ ಡಾನ್ಸ್ ಫ್ಲೇಮ್

Suddi Udaya

ಎಸ್.ಡಿ.ಎಂ ಈಜುಕೊಳ : ಎನ್.ಡಿ.ಆರ್. ಎಫ್ ವತಿಯಿಂದ ವಿಶೇಷ ವಿಪತ್ತು ನಿರ್ವಹಣಾ ತರಬೇತಿ

Suddi Udaya

ಧರ್ಮಸ್ಥಳ ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ಮಚ್ಚಿನ : ಕಲ್ಲಗುಡ್ಡೆಯಲ್ಲಿ ಬಡ ಮಹಿಳೆಗೆ ಮನೆ ಹಸ್ತಾಂತರ ಕಾರ್ಯಕ್ರಮ

Suddi Udaya

ಬಿಜೆಪಿ ಕುವೆಟ್ಟು ಶಕ್ತಿಕೇಂದ್ರದ ಅಧ್ಯಕ್ಷರಾಗಿ ಚಂದ್ರ ದಾಸ್, ಕುಕ್ಕಳ ಶಕ್ತಿಕೇಂದ್ರದ ಅಧ್ಯಕ್ಷರಾಗಿ ಶೈಲೇಶ್ ಪೂಜಾರಿ ಆಯ್ಕೆ

Suddi Udaya
error: Content is protected !!