November 29, 2026
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳಾಲು: ಗೌಡರೆ ಗೌಜಿ ಗಮ್ಮತ್ ತುಳು ಸಾಂಸ್ಕೃತಿಕ ಪರ್ಬ – 2026 – ಅಭಿನಂದನಾ ಸಭೆ

ಬೆಳಾಲು: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವತಿಯಿಂದ “ಗೌಡರೆ ಗೌಜಿ ಗಮ್ಮತ್ ತುಳು ಸಾಂಸ್ಕೃತಿಕ ಪರ್ಬ “- 2026 – ರಲ್ಲಿ ಭಾಗವಹಿಸಿದ ಬೆಳಾಲಿನ ಸಂಘದ ಸದಸ್ಯರನ್ನು, ಸಹಕರಿಸಿದ ಊರಿನ ಗಣ್ಯ ಮಾನ್ಯರನ್ನು, ದಾನಿಗಳನ್ನು, ಗ್ರಾಮ ಸಮಿತಿಯ ಅಧ್ಯಕ್ಷರಾದ ಧರ್ಮೇದ್ರ ಗೌಡ ಮತ್ತು ತಾಲೂಕು ಯುವ ವೇದಿಕೆಯ ಅಧ್ಯಕ್ಷರು ಚಂದ್ರಕಾಂತ ನಿಡ್ಡಾಜೆ, ಪ್ರಧಾನ ಕಾರ್ಯದರ್ಶಿ ಸುರೇಶ್ ಕೌಡಂಗೆ ಯವರನ್ನು ಸನ್ಮಾನಿಸಲಾಯಿತು.

ಬೆಳಾಲು ಗ್ರಾಮ ಸಮಿತಿಯ ಸಾಂಸ್ಕೃತಿಕ ಕಾರ್ಯಕ್ರಮದ ರೂಪುರೇಷೆ ಮತ್ತು ನಿರ್ದೇಶನ ನೀಡಿ ಸಹಕರಿಸಿದ ಮಂಜೊತ್ತು ಕವಿತಾ ಉಮೇಶ್ ಗೌಡ ದಂಪತಿಯನ್ನು ಸನ್ಮಾನಿಸಲಾಯಿತು.

ತಾಲೂಕು ಯುವ ವೇದಿಕೆಯ ವತಿಯಿಂದ ನಡೆಸಿದ ಕ್ರೀಡೋತ್ಸವದಲ್ಲಿ ಪ್ರಮುಖ ತೀರ್ಪುಗಾರರಾಗಿ ಪಾಲ್ಗೊಂಡು ಕ್ರೀಡೋತ್ಸವದ ಯಶಸ್ಸಿಗೆ ಸಹಕರಿಸಿದ ಬೆಳಾಲು ಗ್ರಾಮ ಸಮಿತಿಯ ಅಧ್ಯಕ್ಷರು ಮತ್ತು ಶ್ರೀ ಧ. ಮ. ರೆಸಿಡೆನ್ಸಿಯಲ್ ಇದರ ದೈಹಿಕ ಶಿಕ್ಷಣ ಶಿಕ್ಷಕ ಧರ್ಮೆಂದ್ರ ಗೌಡ ಬೆಳಾಲು ಇವರನ್ನು ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ಬೆಳಾಲು ಗ್ರಾಮ ಸಮಿತಿಯ ವತಿಯಿಂದ “ಗೌಡರೆ ಗೌಜಿ ಗಮ್ಮತ್ ತುಳು ಸಾಂಸ್ಕೃತಿಕ ಪರ್ಬ “- 2026 – ರಲ್ಲಿ ಭಾಗವಹಿಸಿದ ಬೆಳಾಲಿನ ಗ್ರಾಮದ ಸದಸ್ಯರರಿಗೆ ಅಭಿನಂದನೆಯನ್ನು ಸಲ್ಲಿಸಲಾಯಿತು.

ವೇದಿಕೆಯಲ್ಲಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಹೆಚ್. ಪದ್ಮ ಗೌಡ, ನಿರ್ದೇಶಕರಾದ ಉಷಾದೇವಿ ಕಿನ್ಯಾಜೆ, ತಾಲೂಕು ಯುವ ವೇದಿಕೆಯ ಕಾನೂನು ಸಲಹೆಗಾರ ನವೀನ್ ಬಿ ಕೆ, ಮಹಿಳಾ ವೇದಿಕೆಯ ಅಧ್ಯಕ್ಷರಾದ ಲತಾ ಕೇಶವ ಗೌಡ, ಮಹಿಳಾ ವೇದಿಕೆಯ ಗೌರವಾಧ್ಯಕ್ಷರಾದ ಶ್ರೀಮತಿ ಕನ್ನಿಕಾ ಪದ್ಮಗೌಡ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸ್ವಾಗತವನ್ನು ಯುವ ವೇದಿಕೆಯ ಅಧ್ಯಕ್ಷರಾದ ಸಂಜೀವ ಗೌಡ ಕಾಡಂಡ ರವರು ನೆರವೇರಿಸಿದರು.

ಪ್ರಾರ್ಥನೆ ಮಹಿಳಾ ವೇದಿಕೆಯ ಗೌರವಾಧ್ಯಕ್ಷರಾದ ಶ್ರೀಮತಿ ಕನ್ನಿಕಾ ಪದ್ಮ ಗೌಡ ನೆರವೇರಿಸಿದರು. ವಂದನಾರ್ಪಣೆಯನ್ನು ಶೇಖರಗೌಡ ಕೊಲ್ಲಿಮಾರು ನೆರವೇರಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಯುವ ವೇದಿಕೆಯ ಗೌರವಾಧ್ಯಕ್ಷ ಉಮೇಶ್ ಗೌಡ ಮಂಜೊತ್ತು ನೆರವೇರಿಸಿದರು.

Related posts

ಬೆಳ್ತಂಗಡಿ: ದೀಪಾವಳಿ ಪ್ರಯುಕ್ತ ಆಧಿನಾಥ್ ಬಜಾಜ್‌ನಲ್ಲಿ ಗ್ರಾಹಕರಿಗೆ ವಿಶೇಷ ಆಫರ್

Suddi Udaya

ಧರ್ಮಸ್ಥಳ: ಶ್ರೀ ಮಂ. ಸ್ವಾ. ಅ. ಹಿ. ಪ್ರಾ. ಶಾಲೆಯಲ್ಲಿ ಹದಿಹರೆಯದ ವಿದ್ಯಾರ್ಥಿನಿಯರಿಗೆ ಮಾಹಿತಿ

Suddi Udaya

ಗೇರುಕಟ್ಟೆ ಸರಕಾರಿ ಪ್ರೌಢಶಾಲೆಯಲ್ಲಿ ಆಟೋಮೊಬೈಲ್ ಪ್ರಯೋಗಾಲಯದ ಉದ್ಘಾಟನೆ

Suddi Udaya

ಪಣಕಜೆಯಲ್ಲಿ ಟೋಲ್ ಗೇಟ್ ನಿರ್ಮಾಣ ವಿರುದ್ಧ ತಾಲೂಕಿನ ಜನತೆ ಒಗ್ಗಟ್ಟಾಗಿ ಹೋರಾಡಬೇಕು: ನವಾಝ್ ಕಟ್ಟೆ

Suddi Udaya

ಮುಂಡಾಜೆ ಪಿಯು ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಂದ ರಸ್ತೆ ದುರಸ್ತಿ

Suddi Udaya

ಬೆಳ್ತಂಗಡಿ: ಸಂತೆಕಟ್ಟೆ ಬಳಿ ಕಾರುಗಳ ನಡುವೆ ಡಿಕ್ಕಿ: ಓರ್ವನ ಸ್ಥಿತಿ ಗಂಭೀರ

Suddi Udaya
error: Content is protected !!