November 29, 2026
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ದೇವಗಿರಿ ಸ್ಪೆಷಲ್ ಚಹಾ ಪುಡಿ ಪ್ಯಾಕ್‌ನಲ್ಲಿ ಕಬ್ಬಿಣದ ರಿಂಗ್ ಪತ್ತೆ- ಕಣಿಯೂರು ಗ್ರಾಹಕನ ಆತಂಕ, ಕಾನೂನು ಕ್ರಮದ ಸುಳಿವು

​ಬೆಳ್ತಂಗಡಿ: ತಾಲೂಕಿನ ಕಣಿಯೂರು ಗ್ರಾಮದ ನಿವಾಸಿಯೊಬ್ಬರು ಖರೀದಿಸಿದ ಚಹಾ ಪುಡಿ ಪ್ಯಾಕ್‌ನಲ್ಲಿ ಕಬ್ಬಿಣದ ರಿಂಗ್ ದೊರೆತಿರುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಸ್ಥಳೀಯರಲ್ಲಿ ಅಚ್ಚರಿ ಮತ್ತು ಆತಂಕ ಮೂಡಿಸಿದೆ.

ಕಣಿಯೂರು ಗ್ರಾಮದ ವ್ಯಕ್ತಿಯೊಬ್ಬರು ಗುರುವಾಯನಕೆರೆಯ ಅಂಗಡಿಯೊಂದರಲ್ಲಿ ನ.19ರಂದು ‘ದೇವಗಿರಿ ಸ್ಪೆಷಲ್’ ಚಹಾ ಪುಡಿ ಪ್ಯಾಕ್ ಖರೀದಿಸಿದ್ದರು. ಮನೆಗೆ ತಂದು ಪ್ಯಾಕ್ ಬಿಚ್ಚಿ ಚಹಾ ತಯಾರಿಸುವ ವೇಳೆ ಪುಡಿಯ ನಡುವೆ ಕಬ್ಬಿಣದ ರಿಂಗ್ ಇರುವುದು ಗಮನಕ್ಕೆ ಬಂದಿದೆ. ಈ ಬೆಳವಣಿಗೆಯಿಂದ ಗ್ರಾಹಕರು ದಿಗ್ಬ್ರಮೆಗೊಂಡಿದ್ದಾರೆ.

ಘಟನೆಯ ಸುದ್ದಿ ಹರಡುತ್ತಿದ್ದಂತೆ ತಾಲೂಕಿನಾದ್ಯಂತ ನಾನಾ ರೀತಿಯ ಚರ್ಚೆಗಳು ಶುರುವಾಗಿವೆ. ಹೋಟೆಲ್ ಮತ್ತು ಕ್ಯಾಂಟೀನ್‌ಗಳಲ್ಲಿ ಚಹಾ ಕುಡಿಯುವ ಮುನ್ನ ‘ರಿಂಗ್ ಇದೆಯೇ?’ ಎಂದು ಕೇಳುವ ಮಟ್ಟಿಗೆ ಮಾತುಗಳು ಕೇಳಿಬರುತ್ತಿವೆ. “ದೇಹಕ್ಕೆ ಕಬ್ಬಿಣದ ಅಂಶ ಬೇಕಾದರೂ, ಹೀಗೆ ಚಹಾ ಪುಡಿಯಲ್ಲೇ ರಿಂಗ್ ರೂಪದಲ್ಲಿ ಸಿಗಬೇಕೇ?” ಎಂದು ಸಾರ್ವಜನಿಕರು ಲೇವಡಿ ಮಿಶ್ರಿತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

​ಆಹಾರ ಉತ್ಪನ್ನಗಳ ಪ್ಯಾಕಿಂಗ್ ಗುಣಮಟ್ಟದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳು ಎದ್ದಿದ್ದು, ಸಂಬಂಧಪಟ್ಟ ಕಂಪನಿಯು ಈ ಬಗ್ಗೆ ಸ್ಪಷ್ಟನೆ ನೀಡಬೇಕು ಮತ್ತು ಪ್ಯಾಕಿಂಗ್ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಬೇಕು ಎಂಬ ಆಗ್ರಹ ಕೇಳಿಬಂದಿದೆ. ಘಟನೆಯ ಕುರಿತು ಸಮಗ್ರ ತನಿಖೆ ನಡೆಯಬೇಕೆಂದು ಒತ್ತಾಯಿಸಲಾಗಿದ್ದು, ಬಾಧಿತ ಗ್ರಾಹಕರು ಕಾನೂನು ಹೋರಾಟಕ್ಕೆ ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ.

Related posts

ಬಂದಾರು : ಪೆರ್ಲ – ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಮಹಿಳಾ ಸಮಿತಿಯ ವತಿಯಿಂದ ಮಹಿಳಾ ಸಿರಿ ಕಾರ್ಯಕ್ರಮ

Suddi Udaya

ಗ್ರಾಮಾಭಿವೃದ್ಧಿ ಯೋಜನೆಗೆ ರಾಷ್ಟ್ರೀಯ ಇಲಾಬೆನ್ ಸ್ಮಾರಕ ಪ್ರಶಸ್ತಿ

Suddi Udaya

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವದ ಚಪ್ಪರ ಮೂಹೂರ್ತ

Suddi Udaya

ಗುರುವಾಯನಕೆರೆ: ಕೆಟ್ಟು ನಿಂತ ಕೆ.ಎಸ್.ಆರ್.ಟಿ.ಸಿ ಬಸ್ಸು, ಟ್ರಾಫಿಕ್ ಜಾಮ್

Suddi Udaya

ಬೆನಕ ಹೆಲ್ತ್ ಸೆಂಟರ್ ಗೆ IUI  & IVF  ( ಬಂಜೆತನ ನಿವಾರಣೆ ) ವಿಭಾಗಕ್ಕೆ ಕರ್ನಾಟಕ ಸರಕಾರದ ಮಾನ್ಯತೆ

Suddi Udaya

ಮೇ 25: ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನಿಂದ “ಯಶೋ-ವಿಜಯ”, ಬದುಕು-ನೆನಪು-ಸ್ಮರಣೆ

Suddi Udaya
error: Content is protected !!