November 29, 2026
Uncategorized

ಯಕ್ಷಗಾನ ಕಲಾವಿದ ವೇಣೂರಿನ ವಾಮನ ದೇವಾಡಿಗರ ಸಾವಿಗೆ ಕಾರಣರಾದ ಕಾರು ಚಾಲಕ ತೌಸಿಫ್ ಅಹಮದ್‌ಗೆ ಜೈಲು ಶಿಕ್ಷೆ ಹಾಗೂ ದಂಡ

ಬೆಳ್ತಂಗಡಿ: ನಿರ್ಲಕ್ಷ್ಯ ಹಾಗೂ ಅತಿವೇಗದ ಚಾಲನೆಯಿಂದ ಸಂಭವಿಸಿದ ರಸ್ತೆ ಅಪಘಾತದಲ್ಲಿ ವೇಣೂರಿನ ವಾಮನ ದೇವಾಡಿಗ ಅವರ ಸಾವಿಗೆ ಹಾಗೂ ಕಲಂದರ್ ಅವರಿಗೆ ಗಂಭೀರ ಗಾಯಗಳಾಗಲು ಕಾರಣನಾದ ಕಾರು ಚಾಲಕ ತೌಸಿಫ್ ಅಹಮದ್‌ಗೆ ಮೂಡುಬಿದಿರೆ ನ್ಯಾಯಾಲಯವು ಆರು ತಿಂಗಳ ಸಾದಾ ಜೈಲು ಶಿಕ್ಷೆ ಹಾಗೂ ಒಟ್ಟು 7,500 ದಂಡ ವಿಧಿಸಿ ನ.24ರಂದು ತೀರ್ಪು ನೀಡಿದೆ.
2022ರ ಜನವರಿ 20ರಂದು ಬೆಳಿಗ್ಗೆ 6-30ಕ್ಕೆ ಕಲ್ಲಬೆಟ್ಟು ಎಂ.ಕೆ. ಶೆಟ್ಟಿ ಶಾಲೆಯ ಕ್ರಾಸ್ ರಸ್ತೆಯಲ್ಲಿ ಅಪಘಾತ ಸಂಭವಿಸಿತ್ತು. ಉಡುಪಿಯಿಂದ ವೇಣೂರಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ಯಕ್ಷಗಾನ ಕಲಾವಿದರಾದ ವಾಮನ ದೇವಾಡಿಗ ವೇಣೂರು ಅವರ ಬೈಕ್‌ಗೆ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿತ್ತು. ಗಾಯಗೊಂಡ ವಾಮನ ದೇವಾಡಿಗ ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದರು.

ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ನಿರೀಕ್ಷಕ ನಿರಂಜನ್ ಕುಮಾರ್ ಕೆ.ಇ. ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರ ಸಹಾಯಕ ಸರ್ಕಾರಿ ಅಭಿಯೋಜಕಿ ಶೋಭಾ ಎಸ್. ವಾದ ಮಂಡಿಸಿದ್ದರು. ಭಾರತೀಯ ದಂಡ ಸಂಹಿತೆಯ ಕಲಂ ೨೭೯, ೩೩೮ ಮತ್ತು ೩೦೪(ಎ) ಹಾಗೂ ಮೋಟಾರು ವಾಹನ ಕಾಯ್ದೆಯ ಕಲಂ ೧೯೦(೨)ರಡಿ ಶಿಕ್ಷೆ ವಿಧಿಸಲಾಗಿದೆ. ಎಲ್ಲ ಜೈಲು ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸುವಂತೆ ನ್ಯಾಯಾಲಯ ಆದೇಶಿಸಿದೆ.

Related posts

ಭಾರೀ ಮಳೆಗೆ ಕೊಚ್ಚಿಕೊಂಡು ಹೋದ ದನ: ಹೋಮ್ ಗಾರ್ಡ್ ಸಿಬ್ಬಂದಿ ದಿನೇಶ್ ರವರಿಂದ ರಕ್ಷಣೆ

Suddi Udaya

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

Suddi Udaya

ತಣ್ಣೀರುಪಂತ ಗ್ರಾ.ಪಂ. ನಲ್ಲಿ ಮಹಿಳೆಯರಿಗೆ ನರೇಗಾ ಯೋಜನೆಯ ಮಾಹಿತಿ ಕಾರ್ಯಗಾರ

Suddi Udaya

ರೀಲ್ಸ್‌ ತಾರೆ ಇದೀಗ ಸೀರಿಯಲ್ ಬೆಡಗಿ: ನಾರಾವಿಯ ಕೃಷ್ಣಪ್ರಿಯಾ ಭಟ್ ನಂದಗೋಕುಲದಲ್ಲಿ ರಕ್ಷಾ

Suddi Udaya

ಬೆಳ್ತಂಗಡಿ ಬಿಜೆಪಿ ಕಚೇರಿಯಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮ ದಿನಾಚರಣೆ

Suddi Udaya

ಕಲ್ಲೇರಿ ವಿನಾಯಕ ನಗರದಲ್ಲಿ ಐಸಿರಿ ಮಹಿಳಾ ಮಂಡಳಿಯ ಉದ್ಘಾಟನೆ

Suddi Udaya
error: Content is protected !!