April 2, 2025
ಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ನೀರಚಿಲುಮೆ ನರ್ಸರಿಯ ಮಣ್ಣಿನ ಅಡಿಯಲ್ಲಿ ಬಿಳಿ ಬಣ್ಣದ ಉದ್ದನೆಯ 28 ಮೊಟ್ಟೆಗಳು ಪತ್ತೆ

ಉಜಿರೆ: ಉಜಿರೆ ಸಮೀಪದ ನೀರ ಚಿಲುಮೆ ಎಂಬಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೀರಚಿಲುಮೆಯ ನರ್ಸರಿಯಲ್ಲಿ ಮಣ್ಣಿನ ಅಡಿಯಲ್ಲಿ ಡಿ.22ರಂದು 28 ಮೊಟ್ಟೆಗಳು ಪತ್ತೆಯಾಗಿವೆ. .

ಗಿಡಗಳನ್ನು ಬೆಳೆಸಲು ರಾಶಿ ಹಾಕಿರುವ ಮಣ್ಣಿನ ಅಡಿಯಲ್ಲಿ ಮೊಟ್ಟೆಗಳನ್ನು ಹೊಂದಿದೆ. ಬೆಳಿಗ್ಗೆ ನರ್ಸರಿ ತೊಟ್ಟೆಗಳಿಗೆ ಮಣ್ಣನ್ನು ತುಂಬುತ್ತಿರುವ ವೇಳೆಯಲ್ಲಿ ಕೆಲಸಗಾರರು ಮೊಟ್ಟೆಯನ್ನು ಗುರುತಿಸಿದ್ದು ಇದನ್ನು ಗಮನಿಸಿದ ನರ್ಸರಿಯ ಯೋಜನಾಧಿಕಾರಿ ದಯಾನಂದ್ ಇವರು ಜನಜಾಗೃತಿ ಪ್ರಾದೇಶಿಕ ಕಚೇರಿಯ ವಿಪತ್ತು ನಿರ್ವಹಣಾ ವರದಿಯನ್ನು ನೀಡಿದ್ದರು. ವಿಪತ್ತು ನಿರ್ವಹಣಾ ಯೋಜನಾಧಿಕಾರಿ ಜೈವಂತ ಪಟಗಾರ ಇವರ ಸ್ಥಳಕ್ಕೆ ಭೇಟಿ ನೀಡಿ ಧರ್ಮಸ್ಥಳದ ಶೌರ್ಯ ಸಮಿತಿಯ ಮಾಸ್ಟರ್ ಹಾಗೂ ಉರಗ ಪ್ರೇಮಿ ಸ್ನೇಕ್ ಪ್ರಕಾಶ್ ಇವರಿಗೆ ಮಾಹಿತಿ ನೀಡಿದ್ದರು. ಬೆಳ್ತಂಗಡಿಯ ಊರ ಪ್ರೇಮಿ ಅಶೋಕ ಇವರಲ್ಲಿಯೂ ಈ ಬಗ್ಗೆ ಚರ್ಚಿಸಿ ಸುರಕ್ಷಿತವಾಗಿ ಸಂರಕ್ಷಿಸುವ ಬಗ್ಗೆ ಮಾಹಿತಿ ಪಡೆದಿದ್ದರು.

ಸರಿಯಾದ ಮಾಹಿತಿ ಪಡೆಯುವ ಉದ್ದೇಶದಿಂದ ಸ್ಥಳಕ್ಕೆ ಧಾವಿಸಿದ ಸ್ನೇಕ್ ಪ್ರಕಾಶ್ ಅವರು ಪುತ್ತೂರಿನ ರವೀಂದ್ರ ನಾಥ್ ಐತಾಳ ಇವರಿಗೆ ಪತ್ತೆಯಾದ ಮೊಟ್ಟೆಯ ಬಗ್ಗೆ ಮಾಹಿತಿ ನೀಡಲಾಯಿತು ಅವರು ಮೊಟ್ಟೆಗಳನ್ನು ಸುರಕ್ಷಿತವಾಗಿ ತಂಪಾದ ಮಣ್ಣಿನ ಅಡಿಯಲ್ಲಿ ಇಡಬೇಕು. ಸುಮಾರು 60-70 ದಿನದಲ್ಲಿ ಮೊಟ್ಟೆಗಳು ಮರಿಯಾಗುತ್ತವೆ. ಬಿಸಿಲು ಸ್ಥಳದಲ್ಲಿ ಇದ್ದಲ್ಲಿ ಮೊಟ್ಟೆಗಳು ಹಾಳಾಗಬಹುದು ಎಂದಿದ್ದರು. ಮತ್ತು ಸುರಕ್ಷಿತವಾಗಿ ಮೊಟ್ಟೆಯನ್ನು ತಂದು ಕೊಟ್ಟಲ್ಲಿ ಮರಿ ಮಾಡಿ ತಾವೇ ಬಿಡುವುದಾಗಿ ತಿಳಿಸಲಾಗಿದೆ. ಇದಕ್ಕೆ ಪೂರಕವಾದ ಸ್ನೇಕ್ ಪ್ರಕಾಶ್ ಇವರು ಮೊಟ್ಟೆಗಳನ್ನು ಪುತ್ತೂರಿಗೆ ಒಯ್ದು ಐತಾಳ ಇವರಿಗೆ ಕೊಟ್ಟು ಬಂದಿರುತ್ತಾರೆ. ಕೋಳಿ ಮೊಟ್ಟೆಯ ಗಾತ್ರಕ್ಕಿಂತ ಚಿಕ್ಕದಾದ ಉದ್ದನೆಯ ಮೊಟ್ಟೆ ಇದಾಗಿದ್ದರೆ , ಉಡದ ಮೊಟ್ಟೆ ಇರಬಹುದು ಎಂದು ಅಂದಾಜಿಸಲಾಗುತ್ತಿದೆ.

Related posts

ಉಜಿರೆ ಯುವ ವಾಹಿನಿ ಸಂಚಲನಾ ಸಮಿತಿ ಮತ್ತು ಶ್ರೀ ಗುರುನಾರಾಯಣ ಸೇವಾ ಸಂಘದ ಆಶ್ರಯದಲ್ಲಿ ಗುರುಪೂಜೆ

Suddi Udaya

ಉಜಿರೆ : ಶ್ರೀ  ಧ.ಮಂ. ಎಂಜಿನೀಯರಿಂಗ್ ಕಾಲೇಜಿನಲ್ಲಿ ಪ.ಪೂ. ವಿದ್ಯಾರ್ಥಿಗಳ ರಾಜ್ಯ ಮಟ್ಟದ ವಿಜ್ಞಾನ ಮೇಳ “ಎಕ್ಸ್ ಪೀರಿಯ-2023

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಯವರ 106ನೇ ಜಯಂತಿ ಆಚರಣೆ

Suddi Udaya

ಮಾಲಾಡಿ ನಿವಾಸಿ ಅನಿಲ್ ಪ್ರವೀಣ ಪಿರೇರಾ ನಾಪತ್ತೆ: ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಬೆಳ್ತಂಗಡಿ: ಸಂತೆಕಟ್ಟೆಯಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ

Suddi Udaya

ಬೆಳ್ತಂಗಡಿ ಕ್ಯಾಂಪ್ಕೋ ಶಾಖೆಯಿಂದ ನಿವೃತ್ತಿ ಹೊಂದಿದ ಶ್ರೀಧರ ಕೆ. ರವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya
error: Content is protected !!