ಗ್ರಾಮಾಂತರ ಸುದ್ದಿ

ಲಾಯಿಲ: ಪುತ್ರ ಬೈಲು ಗ್ರಂಥಾಲಯ ಕಟ್ಟಡಕ್ಕೆ ಶಿಲಾನ್ಯಾಸ

ಬೆಳ್ತಂಗಡಿ: ಕೆಆರ್ ಡಿಎಲ್ ಗ್ರಾಮ ಪಂಚಾಯತ್ ಲಾಯಿಲ ಸಹಕಾರದಲ್ಲಿ ಪರಿಶಿಷ್ಟ ಜಾತಿ ಪಂಗಡಗಳ ಯೋಜನೆಯಡಿಯಲ್ಲಿ ಪೆ.4ರಂದು ಲಾಯಿಲ ಗ್ರಾಮದ ಪುತ್ರಬೈಲು ಎಂಬಲ್ಲಿ 10 ಲಕ್ಷ ಅನುದಾನದ ಗ್ರಂಥಾಲಯಕ್ಕೆ ಶಿಲಾನ್ಯಾಸ ನೆರವೇರಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾ ಸಲ್ದಾನ,ಶಿಲಾನ್ಯಾಸ ನೆರವೇರಿಸಿ ಗ್ರಾಮ ಪಂಚಾಯತ್ ಗ್ರಾಮದ ಸಮಗ್ರ ಅಭಿವೃದ್ಧಿಯ ಬಗ್ಗೆ ಯೋಜನೆಗಳನ್ನು ಸಿದ್ಧಪಡಿಸಿಕೊಂಡು ಹಂತ ಹಂತವಾಗಿ ಅಭಿವೃದ್ಧಿಯತ್ತ ಚಿಂತನೆ ನಡೆಸಲಾಗುವುದು ಎಂದರು.

ಉಪಾಧ್ಯಕ್ಷ ಗಣೇಶ್ ಆರ್ ಮಾತನಾಡಿ ಈಗಾಗಲೇ ಗ್ರಾಮಗಳಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳು ಪೂರ್ಣಗೊಂಡಿದ್ದು ಪಂಚಾಯತ್ ಸದಸ್ಯರುಗಳ ಹಾಗೂ ಗ್ರಾಮಸ್ಥರ ಸಹಕಾರದಲ್ಲಿ ಇನ್ನಷ್ಟು ಅಭಿವೃದ್ಧಿ ಪರ ಯೋಜನೆಗಳು ಅನುಷ್ಠಾನವಾಗಲಿದೆ ಎಂದರು.
ಮಸ್ತಕದ ಹಸಿವನ್ನು ನೀಗಿಸಿ ಜ್ಞಾನ ಭಂಡಾರ ಹೆಚ್ಚಿಸಲು ಇಂತಹ ಗ್ರಂಥಾಲಯಗಳು ಸಹಕಾರಿಯಾಗಲಿದೆ ಅದ್ದರಿಂದ ಗ್ರಾಮಗಳಲ್ಲಿ ಸುಸಜ್ಜಿತ ಗ್ರಂಥಾಲಯಗಳನ್ನು ನಿರ್ಮಿಸಬೇಕು ಈ ಮೂಲಕ ಸಾರ್ವಜನಿಕರು ಓದುವ ಗೀಳನ್ನು ಹೆಚ್ಚಿಸಿಕೊಳ್ಳಬೇಕು. ಲಾಯಿಲ ಗ್ರಾಮದ ಈ ಗ್ರಂಥಾಲಯ ಎಲ್ಲ ಓದುಗರುನ್ನು ಆಕರ್ಷಿಸಿ ತಾಲೂಕಿನಲ್ಲೇ ಮಾದರಿ ಗ್ರಂಥಾಲಯವಾಗಿ ಮೂಡಿಬರಲಿ ಎಂದು ಸದಸ್ಯ ಪ್ರಸಾದ್ ಶೆಟ್ಟಿ ಅಭಿಪ್ರಾಯ ಪಟ್ಟರು.ಸದಸ್ಯ ದಿನೇಶ್ ಶೆಟ್ಟಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ

ಗ್ರಾಮ ಪಂಚಾಯತ್ ಸದಸ್ಯರುಗಳಾದ ಮಹೇಶ್ ಕುಲಾಲ್, ಸವಿತ ಶೆಟ್ಟಿ, ಹರಿಕೃಷ್ಣ, ಸೇರಿದಂತೆ , ರಾಜೇಶ್ ಶೆಟ್ಟಿ, ಗಣೇಶ್ ಸಪಲ್ಯ, ಗುತ್ತಿಗೆದಾರ ರಮೇಶ್ ಲಾಯಿಲ ,ಸುಂದರ್ ಪುತ್ರಬೈಲ್, ಸುರೇಶ್ ಬೈರ ಪುತ್ರಬೈಲು, ಯಶೋಧ ರಾಘವೇಂದ್ರ ನಗರ, ಪಂಚಾಯತ್ ಸಿಬ್ಬಂದಿಗಳಾದ ಮೋಹನ್, ಹರ್ಷಿತಾ, ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ಜಾನಪದ ಕಲಾವಿದ ಉದಯ್ ಕುಮಾರ್ ಲಾಯಿಲ, ಕಾರ್ಯಕ್ರಮ ನಿರ್ವಹಿಸಿ ಧನ್ಯವಾದವಿತ್ತರು.

Related posts

ಜಮೀಯತುಲ್ ಫಲಾಹ್ ಉಡುಪಿ- ದ.ಕ ಕೇಂದ್ರ ಸಮಿತಿ ಕಾರ್ಯದರ್ಶಿಯಾಗಿ ಅಬ್ಬೋನು ಮದ್ದಡ್ಕ ಆಯ್ಕೆ

Suddi Udaya

ಧರ್ಮಸ್ಥಳ ‘ಶೌರ್ಯ’ ವಿಪತ್ತು ನಿರ್ವಹಣಾ ಕಾರ್ಯಕ್ರಮದ 5ನೇ ವಾರ್ಷಿಕೋತ್ಸವದ ಪ್ರಯುಕ್ತ 91 ತಾಲೂಕು ಸಮಿತಿಗಳ ಸ್ವಯಂ ಸೇವಕರಿಗೆ ತುರ್ತು ಸ್ಪಂದನೆ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ

Suddi Udaya

ನ್ಯಾಯತರ್ಪು: ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ

Suddi Udaya

ರಾಜ್ಯ ಮಟ್ಟದ ಕಾಲೇಜು ಪತ್ರಿಕೋದ್ಯಮ ಉಪನ್ಯಾಸಕರ ಸಂಘದ ಕಾರ್ಯದರ್ಶಿಯಾಗಿ ಡಾ. ಭಾಸ್ಕರ ಹೆಗಡೆ ಆಯ್ಕೆ

Suddi Udaya

ಬಳ್ಳಮಂಜ ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಎಸ್.ಡಿ.ಪಿ.ಐ ಕುವೆಟ್ಟು ಬ್ಲಾಕ್ ಸಮಿತಿ ವತಿಯಿಂದ ರಸ್ತೆ ದುರಸ್ಥಿಗೆ ಆಗ್ರಹಿಸಿ ಪ್ರತಿಭಟನೆ

Suddi Udaya
error: Content is protected !!