23.5 C
ಪುತ್ತೂರು, ಬೆಳ್ತಂಗಡಿ
April 4, 2025
ಜಿಲ್ಲಾ ಸುದ್ದಿತಾಲೂಕು ಸುದ್ದಿರಾಜ್ಯ ಸುದ್ದಿ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ
“ಮಹಿಳಾ ಉದ್ದಿಮೆದಾರರ ಕಾರ್ಯಾಗಾರ” ಉದ್ಘಾಟನೆ

ಧಮ೯ಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್(ರಿ.), ಧರ್ಮಸ್ಥಳ ಇದರ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ
“ಮಹಿಳಾ ಉದ್ದಿಮೆದಾರರ ಕಾರ್ಯಾಗಾರ ಮಾ.8 ರಂದು ಧಮ೯ಸ್ಥಳದ ಮಹೋತ್ಸವ ಸಭಾಭವನದಲ್ಲಿ ಜರುಗಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಕಾಯ೯ಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
‌ ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಉಪಸ್ಥಿತರಿದ್ದರು.
ಅಮೃತ ಜೀವನ ಪ್ರಯಾಸ್ ಸಿಂಚನ ಪುಸ್ತಕವನ್ನು ಶಿವಸುಬ್ರಹ್ಮಣ್ಯ ರಾಮನ್ ಅಧ್ಯಕ್ಷರು, ಸಿಡ್ಡಿ, ಮುಂಬೈ ಇವರು ಬಿಡುಗಡೆಗೊಳಿಸಿದರು. ಸಿಡ್ಡಿ, ಮುಂಬೈ ಸಂಸ್ಥೆಯ ಮುಖ್ಯ ಮಹಾ ಪ್ರಬಂಧಕರಾದ ರವಿತ್ಯಾಗಿ, ಉಪ ಮಹಾಪ್ರಬಂಧಕರಾದ ನಿತಿನ್ ಶುಕ್ಲಾ, ಯೋಜನೆ ಯ ಹಣಕಾಸು ನಿದೇ೯ಶಕ ಶಾಂತಾರಾಂ ಪೈ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಮುಂಬೈ ಸಂಸ್ಥೆಯಿಂದ ಒಂದು ಸಾವಿರ ಕೋಟಿ ಸಾಲ ಮಂಜೂರು ಪಾತ್ರವನ್ನು ಹಸ್ತಾಂತರಿಸಲಾಯಿತು. ಮಹಿಳಾ ಉದ್ದಿಮೆದಾರರಿಗೆ ಸಾಲ ಮಂಜೂರಾತಿ ಪತ್ರ ವಿತರಿಸಲಾಯಿತು.
ಸುಮಂಗಲಾ ಮತ್ತು ‌ಕವಿತಾ ಪ್ರಾಥ೯ನೆ ಹಾಡಿದರು. ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಹೆಚ್ ಮಂಜುನಾಥ್ ಸ್ವಾಗತಿಸಿದರು.

Related posts

ಅರಸಿನಮಕ್ಕಿ: ಶ್ರೀ ಕ್ಷೇತ್ರ ಅರಿಕೆಗುಡ್ಡೆ ವನದುರ್ಗ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಪೂರ್ವಭಾವಿ ಸಭೆ

Suddi Udaya

ಗುರುವಾಯನಕೆರೆ ಎಕ್ಸೆಲ್ ಕಾಲೇಜು : ಜೆ ಇ ಇ ಮೈನ್ಸ್ ನಲ್ಲಿ ಅತ್ಯುತ್ತಮ ಫಲಿತಾಂಶ

Suddi Udaya

ಮಹಾಕುಂಭ ಮೇಳದಲ್ಲಿ ಗರ್ಡಾಡಿ, ನಿಟ್ಟಡೆ ಪಡಂಗಡಿ ಶಕ್ತಿ ಕೇಂದ್ರದ ಪ್ರಮುಖ್ ರಿಂದ ಪುಣ್ಯಸ್ನಾನ

Suddi Udaya

ಜ.10- 12: ಜಮಲಾಬಾದ್ ಹಯಾತುಲ್ ಅವುಲಿಯಾ ದರ್ಗಾ ಶರೀಫ್ ನಲ್ಲಿ ಉರೂಸ್ ಮುಬಾರಕ್

Suddi Udaya

ಉಜಿರೆಯಲ್ಲಿ ಟ್ರಾಫಿಕ್ ಪೊಲೀಸರಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸುವ ಮತ್ತು ಕಾನೂನು ಪಾಲನ ಕುರಿತು ಮಾಹಿತಿ ಕಾರ್ಯ

Suddi Udaya

ಸೋಣಂದೂರು: ಕಿರು ಸೇತುವೆ ಕುಸಿತ : ಸಬರಬೈಲು-ಪಡಂಗಡಿ ಸಂಪರ್ಕ ರಸ್ತೆ ಸ್ಥಗಿತ

Suddi Udaya
error: Content is protected !!