September 6, 2026
ತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿಯಲ್ಲಿ ವಿಜಯ ಸಂಕಲ್ಪ ಯಾತ್ರೆ

ಬೆಳ್ತಂಗಡಿ: ಭರವಸೆಯ ನಾಯಕತ್ವ, ಸುಸ್ಥಿರ ಅಭಿವೃದ್ಧಿ, ರಾಷ್ಟ್ರೀಯವಾದದ ಸಿದ್ಧಾಂತಗಳನ್ನು ಆಧಾರವಾಗಿಟ್ಟುಕೊಂಡು ಕಾರ್ಯ ಮಾಡುತ್ತಿರುವ ರಾಜ್ಯ ಬಿಜೆಪಿ ಸರಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ಜಿಲ್ಲೆಯಾಧ್ಯಂತ ಸಂಚರಿಸಲಿರುವ “ವಿಜಯ ಸಂಕಲ್ಪ ಯಾತ್ರೆ”ಯ ಅಂಗವಾಗಿ ನಡೆಯಲಿರುವ “ವಿಜಯ ಸಂಕಲ್ಪ ರಥಯಾತ್ರೆ” ಮಾ. 12 ಆದಿತ್ಯವಾರ ಪೂರ್ವಾಹ್ನ 10 ಗಂಟೆಗೆ ಸರಿಯಾಗಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಲಿದೆ.


ಬೆಳ್ತಂಗಡಿ ಶ್ರೀ ಕುತ್ಯಾರು ಸೋಮನಾಥೇಶ್ವರ ದೇವಸ್ಥಾನದಿಂದ ಲಾಯಿಲಾದ ವರೆಗೆ ಬೃಹತ್ ರೋಡ್ ಶೋ ಹಾಗೂ ಬೈಕ್ ಜಾಥಾದ ಮೂಲಕ “ವಿಜಯ ಸಂಕಲ್ಪ ಯಾತ್ರೆ”ಯ ಯಾತ್ರೆ ಸಾಗಲಿದೆ. ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್‌ ಪೂಂಜ ಅವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಎಲ್ಲಾ ಪೂರ್ವ ತಯಾರಿಯನ್ನು ನಡೆಸಲಾಗಿದ್ದು, ನಗರವನ್ನು ಬಿಜೆಪಿ ಪತಾಕೆ ಹಾಗೂ ತೋರಣಗಳಿಂದ ಶೃಂಗರಿಸಲಾಗಿದೆ. ಯಾತ್ರೆಯಲ್ಲಿ ಮಾಜಿ ಸಚಿವರಾದಈಶ್ವರಪ್ಪ, ಕಂದಾಯ ಸಚಿವರಾದ ಅಶೋಕ್, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಸಂಸದ ನಳಿನ್‌ಕುಮಾರ್‌ ಕಟೀಲ್‌, ರಾಜ್ಯ, ಜಿಲ್ಲೆ ಹಾಗೂ ತಾಲೂಕಿನ ಪಕ್ಷದ ನಾಯಕರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Related posts

ಬೆಳ್ತಂಗಡಿ ಸರಕಾರಿ ನೌಕರರ ಸಂಘದ ಕ್ಯಾಲೆಂಡರ್ ಬಿಡುಗಡೆ

Suddi Udaya

ಸೇವಾ ನಿವೃತ್ತಿ ಅಂಗವಾಗಿ ಉಷಾ ವಿ. ರವರಿಗೆ ಬೀಳ್ಕೊಡುಗೆ

Suddi Udaya

ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿ ಅ.ಹಿ.ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಉಜಿರೆ: ಚಲಿಸುತ್ತಿದ್ದಾಗಲೇ ಕಳಚಿ ಬಿದ್ದ ಕೆ.ಎಸ್ ಆರ್ ಟಿಸಿ ಬಸ್ ಟಯರ್

Suddi Udaya

ಚಾರ್ಮಾಡಿ ಅರಣ್ಯದಲ್ಲಿ ಭಾರೀ ಬೆಂಕಿ

Suddi Udaya

ಮಡಂತ್ಯಾರು ಗ್ರಾ.ಪಂ ಮಾಜಿ ಸದಸ್ಯ ಸತೀಶ್ ಶೆಟ್ಟಿ ಕುರ್ಡುಮೆ ನಿಧನ

Suddi Udaya
error: Content is protected !!