September 6, 2026
ಅಪರಾಧ ಸುದ್ದಿ

ಕಕ್ಕಿಂಜೆಯ ಜೆ.ಕೆ ಎಲೆಕ್ಟ್ರಿಕಲ್ಸ್‌ ಮತ್ತು ವೈಂಡಸಸ್‌೯ ಅಂಗಡಿಯಿಂದ
ರೂ.94 ಸಾವಿರ ಮೌಲ್ಯದ 20 ಕೆ.ಜಿ ಸ್ಕ್ರಾಪ್‌ ಮತ್ತು ದುರಸ್ತಿಗೆ ಬಂದ ಪಂಪುಗಳ ಕಳವು


ಕಕ್ಕಿಂಜೆ: ಚಿಬಿದ್ರೆಯ ಜೆ.ಕೆ ಎಲೆಕ್ಟ್ರಿಕಲ್ಸ್‌ ಮತ್ತು ವೈಂಡಸ್‌೯ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ಅಂಗಡಿಯೊಳಗಿದ್ದ ಕಾಫರ್‌ ವೇರ್‌(ಸ್ಕ್ರಾಪ್‌) ಹಾಗೂ ಬೋರ್‌ವೆಲ್‌ ಸಬ್‌ ಮಸಿ೯ಬಲ್‌ ಮತ್ತು ಮಸಿ೯ಬಲ್‌ ಮೋಟಾರ್‌ ಸೇರಿದಂತೆ ಸುಮಾಋು 94 ಸಾವಿರ ಮೌಲ್ಯದ ಸೊತ್ತುಗಳನ್ನು ಕಳವು ಗೈದ ಘಟನೆ ಮಾ.12ರಂದು ವರದಿಯಾಗಿದೆ.
ತೋಟತ್ತಾಡಿ ಗ್ರಾಮದ ಡೊಂಬರಮಜಲು ಮನೆ ನಿವಾಸಿ ಜಯಾನಂದ ಡಿ. ಪೂಜಾರಿ ಅವರ ಮಾಲಕತ್ವದ ಜಿ.ಕೆ ಅಂಗಡಿಯಿಂದ ಈ ಸೊತ್ತುಗಳನ್ನು ಕಳವುಗೈಯ್ಯಲಾಗಿದೆ. ಅವರು ಚಿಬಿದ್ರೆಯಲ್ಲಿ ಜೆ.ಕೆ ಎಲೆಕ್ಟ್ರಿಕ್‌ಲ್ಸ್‌ ಮತ್ತು ವೈಂಡರ್ಸ್‌ ಅಂಗಡಿ ಹೊಂದಿದ್ದು, ಮಾ.11 ರಂದು ರಾತ್ರಿ 11 ಗಂಟೆಯವರೆಗೆ ಕೆಲಸ ಮಾಡಿ, ಅಂಗಡಿಗೆ ಬೀಗ ಹಾಕಿ ಮನೆಗೆ ಬಂದಿದ್ದರು. ಮರುದಿನ ಮಾ.12 ರಂದು ಬೆಳಿಗ್ಗೆ ಅಂಗಡಿಗೆ ಬಂದು ನೋಡಿದಾಗ ಯಾರೋ ಕಳ್ಳರು ಅವರ ಅಂಗಡಿಗೆ ಹಾಕಿದ್ದ ಬೀಗವನ್ನು ಮುರಿದು ಒಳಪ್ರವೇಶಿಸಿ ಅಂಗಡಿಯಲ್ಲಿದ್ದ Coper wire(ಸ್ಕ್ರಾಪ್‌ ) 20 ಕೆ. ಜಿ ಮತ್ತು ರಿಪೇರಿಗೆ ತಂದಿದ್ದ ಬೋರ್‌ವೆಲ್‌ನ ಸಬ್‌ಮರ್ಸಿಬಲ್‌ ಮೋಟಾರ್‌ಗಳು (6/5 HP) 11 ಹಾಗೂ ಸಿಂಗಲ್‌ ಪೇಸ್‌ 2HP ಮರ್ಸಿಬಲ್‌ 2 ಮೋಟಾರ್‌ಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿತ್ತು. ಕಳವಾದ ಸೊತ್ತುಗಳ ಮೌಲ್ಯ ರೂ 94 ಸಾವಿರ ಎಂದು ಅಂದಾಜಿಸಲಾಗಿದೆ. ಜಯಾನಂದ ಅವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್‌ ಠಾಣೆ 15/2023 ಕಲಂ: 457,380 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Related posts

ಸವಣಾಲಿನಲ್ಲಿ ಬೈಕ್- ಬೈಕ್ ನಡುವೆ ಅಪಘಾತ : ಆಳದಂಗಡಿ ಹಾ.ಉ.ಸ.ಸಂಘದ ಮಾಜಿ ಕಾರ್ಯದರ್ಶಿ ಹೆನ್ರಿ ಡಿ’ ಸೋಜ ಮೃತ್ಯು

Suddi Udaya

ಮುಗೇರಡ್ಕ ನೇತ್ರಾವತಿ ನದಿಯ ಪಂಪ್ ಹೌಸ್ ಬಳಿ ಬಲೆ ಬಿಟ್ಟು ಮೀನು ಹಿಡಿಯಲು ಹೋದ ಯುವಕ ನೀರು ಪಾಲು: ಶವ ಪತ್ತೆ

Suddi Udaya

ಶಿಬಾಜೆಯಲ್ಲಿ ಎರಡು ವರ್ಷಗಳಿಂದ ಹಸಿ ಮೀನಿನ ವ್ಯಾಪಾರ ಮಾಡುತ್ತಿದ್ದ ನೋಣಯ್ಯ ಗೌಡ ನೇಣು ಬಿಗಿದು ಆತ್ಮಹತ್ಯೆ

Suddi Udaya

ಜಿಪ್ಸಿ ಮತ್ತು ಬೈಕ್ ನಡುವೆ ಅಪಘಾತ: ಬೈಕ್ ಸವಾರ ಬಳಂಜ ಶಾಲಾ ಮುಖ್ಯೋಪಾಧ್ಯಾಯರಿಗೆ ಗಂಭೀರ ಗಾಯ

Suddi Udaya

ಬೆಳ್ತಂಗಡಿ: ಮಾದಕ ವಸ್ತು ಸೇವನೆ ಮತ್ತು ಮಾರಾಟ ನಾಲ್ವರ ವಿರುದ್ಧ ಪ್ರಕರಣ ದಾಖಲು; ಓರ್ವ ಅಂದರ್

Suddi Udaya

ಶವ ಹೂತು ಹಾಕಿದ ದೂರು ಪ್ರಕರಣ: ಎಸ್ ಐಟಿ ರಚನೆಗೆ ಮುಖ್ಯ ಮಂತ್ರಿಗಳಿಗೆ ಮನವಿ

Suddi Udaya
error: Content is protected !!