23.5 C
ಪುತ್ತೂರು, ಬೆಳ್ತಂಗಡಿ
March 7, 2026
ತಾಲೂಕು ಸುದ್ದಿಪ್ರಮುಖ ಸುದ್ದಿರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿ

ಉಜಿರೆಯ ನಿವೃತ್ತ ಯೋಧ ಗೋಪಾಲಕೃಷ್ಣ ಕಾಂಚೋಡು ಅವರಿಗೆ ಪ್ರತಿಷ್ಠಿತ ಜೈ ಜವಾನ್ ಜೈ ಕಿಸಾನ್ “ರೈತ ರತ್ನ” ಗೌರವ ಪ್ರಶಸ್ತಿ ಪ್ರದಾನ

ಬೆಳ್ತಂಗಡಿ: ಭಾರತೀಯ ಭೂ ಸೇನೆಯಲ್ಲಿ 18 ವಷ೯ ಯೋಧರಾಗಿ ದೇಶ ರಕ್ಷಣೆ ಯ ಕಾಯ೯ಮಾಡಿ ನಿವೃತ್ತರಾಗಿರುವ ಗೋಪಾಲಕೃಷ್ಣ ಕಾಂಚೋಡು ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೊಡಮಾಡುವ ಪ್ರತಿಷ್ಠಿತ
ಜೈ ಜವಾನ್ ಜೈ ಕಿಸಾನ್ “ರೈತ ರತ್ನ” ಪ್ರಶಸ್ತಿ ಗೆ ಆಯ್ಕೆ ಯಾಗಿದ್ದು, ಮಾ.15ರಂದು ಬೆಂಗಳೂರಿನ
ಟೌನ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ‌ ಪರಿಷತ್ ಸ್ಪೀಕರ್ ಬಸವರಾಜ ಹೊರಟ್ಟಿ ಪ್ರದಾನ ಮಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರುಗಳಾದ ಮುರುಗೇಶ್ ನಿರಾಣಿ, ಡಾ. ಸುಧಾಕರ್, ಬಿ.ಸಿ ಪಾಟೀಲ್ ಹಾಗೂ ತೋಮರ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಏಕ್‌ ಭಾರತ್’ ಕಾಯ೯ಕ್ರಮದಲ್ಲಿ ಪ್ರತಿ ವರ್ಷದಂತೆ ಈ ವರ್ಷ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿಗೆ ಕಾಂಚೋಡು ಅವರು ಪುರಸ್ಕೃತ ಗೊಂಡಿದ್ದಾರೆ.

ಅವರು ಭಾರತೀಯ ಭೂ ಸೇನೆಯಲ್ಲಿ ಜಮ್ಮು ಕಾಶ್ಮೀರ ಸೇರಿದಂತೆ ದೇಶದ ವಿವಿಧೆಡೆ ಸೇವೆ ಸಲ್ಲಿಸಿ ನಿವೃತ್ತರಾದವರು.‌

ಸೇನಾ ನಿವೃತ್ತಿಯ ನಂತರ ತನ್ನೂರಿಗೆ ಬಂದು ಬೆಳ್ತಂಗಡಿ ತಾಲೂಕು ಉಜಿರೆ ಯಲ್ಲಿ ನೆಲೆಸಿ, “ರವಿ ಟ್ರೇಡರ್ಸ್” ಎಂದ್ದಿಮೆ ಸ್ಥಾಪಿಸಿ ಹತ್ತಾರು ಯುವಕರಿಗೆ ಜೀವನೋಪಾಯದ ಹಾದಿಯನ್ನು ಸೃಷ್ಟಿಸುತ್ತಾ ಸೇನೆಗೆ ಸೇರಲು ಬಯಸುವ ಯುವಕರಿಗೆ ಉಚಿತ ಮಾಹಿತಿ ನೀಡುತ್ತಾ ಬರುತ್ತಿದ್ದಾರೆ.


ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ, ಕೃಷಿ ಕ್ಷೇತ್ರ ದಲ್ಲಿ ವೈಜ್ಞಾನಿಕವಾಗಿ, ಉತ್ತಮ ಆದಾಯ ಪಡೆಯುವ ಆಧುನಿಕ ತಂತ್ರಜ್ಞಾನ ಗಳೊಂದಿಗೆ ಪ್ರಕೃತಿಗೆ ತೊಂದರೆ

ಯಾಗದಂತೆ (ಜಲ, ನೆಲ ಉಳಿಸಿ ) ಸಾವಯವ ಕೃಷಿಯನ್ನು ಮಾಡುತ್ತಾ, ಕಂಗು, ತೆಂಗು, ಬಾಳೆ ಕೃಷಿಗಳೊಂದಿಗೆ ಎಲ್ಹೋಟಿಕ್ (exotic) ಹಣ್ಣುಗಳನ್ನು ಬೆಳೆಯುತ್ತಾ, ಪ್ರಾಕೃತಿಕವಾಗಿ ಪ್ರಕೃತಿ ಸಹಜಕ್ರಿಯೆ, ಪರಾಗ ಸ್ಪರ್ಶಕ್ಕೆ ಪೂರಕ ಜೇನುಸಾಕಣೆ ಮಾಡುತ್ತಾ ಹತ್ತು ಹಲವು ಆಸಕ್ತ ಕೃಷಿಕರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಸರ್ಕಾರ ಈ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಿದೆ.

Related posts

ಅಕ್ಟೋಬರ್ ನಲ್ಲಿ ಬೆಳ್ತಂಗಡಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ

Suddi Udaya

ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿ ವಿರೋಧಿಸಿ ಕಡಿರುದ್ಯಾವರ ಗ್ರಾ.ಪಂ. ನಲ್ಲಿ ಪ್ರತಿಭಟನೆ

Suddi Udaya

ಸುದ್ದಿಉದಯ ವಾರಪತ್ರಿಕೆಯ ದೀಪಾವಳಿ ವಿಶೇಷಾಂಕ, ಹೇ ಶಾರದೇ, ಕೃಷ್ಣ ವೇಷ ಸ್ಪರ್ಧೆಗಳ ಬಹುಮಾನ ವಿತರಣೆ

Suddi Udaya

ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಹೆಚ್ಚಿಸಿ ಕೊಳ್ಳಬೇಕು: ಡಾ ಪ್ರಸನ್ನ ಕುಮಾರ್ ಐತಾಳ್

Suddi Udaya

ರಾ.ಹೆ. ಲಾಯಿಲ ಬಳಿ ತಿರುವಿನ ಸೂಚನ ಫಲಕ ಕಾಣೆ; ಸುದ್ದಿ ಉದಯ ಜನಧ್ವನಿ

Suddi Udaya

ರೂರಲ್ ಐಟಿ ಕ್ವಿಜ್ ಸ್ಪರ್ಧೆ: ಎಸ್‌ಡಿಎಂ ಆಂ.ಮಾ. ಶಾಲಾ ವಿದ್ಯಾರ್ಥಿಗಳು ವಿಭಾಗೀಯ ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!