ಬೆಳ್ತಂಗಡಿ: ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಮತ್ತೆ ಬಂದಿದೆ. ರಾಜ್ಯದಲ್ಲಿ ಚುನಾವಣೆಯ ಬಿಸಿ ಏರಿರುವ ನಡುವೆ ದೇಶದ ಕ್ರಿಕೆಟ್ ಪ್ರೇಮಿಗಳಲ್ಲಿ ಐಪಿಎಲ್ ಕುತೂಹಲ ಗರಿಗೆದರಿದೆ
. ರಾಜಕಾರಣಿಗಳ ಮತಬೇಟೆ, ಮತದಾರರ ಹಕ್ಕು ಚಲಾವಣೆಯ ನಡುವೆ,ಕ್ರಿಕೆಟಿಗರ ವಿಕೆಟ್ ಬೇಟೆ, ರನ್ ದಾಹ, ಸಿಕ್ಸರ್- ಬೌಂಡರಿಗಳ ಸಿರಿಮಳೆ ಸಾಗಲಿದೆ. ಕರೋನಾ ಭೀತಿಯನ್ನೆಲ್ಲ ನಿವಾರಿಸಿಕೊಂಡು ಐಪಿಎಲ್ ತನ್ನ 16ನೇ ಆವೃತ್ತಿಯಲ್ಲಿ ಮತ್ತೆ ಹಿಂದಿನ ಸ್ವರೂಪ, ಸಂಭ್ರಮ, ಶ್ರೀಮಂತಿಕೆಯಲ್ಲೇ ಮರಳುತ್ತಿದೆ. ಟೂರ್ನಿಯಲ್ಲಿ ಆಡುವ ಎಲ್ಲ 10 ತಂಡಗಳು ಮತ್ತೆ ತಮ್ಮ ತವರು ತಾಣಗಳಲ್ಲೇ ಲೀಗ್ ಪಂದ್ಯಗಳನ್ನು ಆಡುವ ಅವಕಾಶ ಪಡೆದುಕೊಂಡಿವೆ. ಪ್ರೇಕ್ಷಕರೂ ಮತ್ತೆ ಶೇಕಡ 100 ಪ್ರಮಾಣದಲ್ಲಿ ಕ್ರೀಡಾಂಗಣಕ್ಕೆ ಮರಳುವ ಅವಕಾಶ ಪಡೆದುಕೊಂಡಿದ್ದಾರೆ. ಟಿವಿ ಜತೆಗೆ ಓಟಿಟಿ ವೇದಿಕೆಯಲ್ಲೂ ಐಪಿಎಲ್ ಮನರಂಜನೆ ಕ್ರಿಕೆಟ್ ಪ್ರೇಮಿಗಳ ಮನೆ- ಮೊಬೈಲ್ ತಲುಪಲಿದೆ. ಕಳೆದ ಆವೃತ್ತಿಯಲ್ಲಿ ಎರಡು ಹೊಸ ತಂಡಗಳು ಸೇರಿರುವುದರಿಂದ ಐಪಿಎಲ್ ಕುಟುಂಬವೂ ದೊಡ್ಡದಾಗಿದೆ.
ತಂಡಗಳು:
ಮುಂಬೈ ಇಂಡಿಯನ್ಸ್, ಕೋಲ್ಕತ ನೈಟ್’ರೈಡರ್ಸ್, ರಾಜಸ್ಥಾನ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್, ಆರ್ ಸಿಬಿ, ಚೆನ್ನೈ ಸೂಪರ್ ಕಿಂಗ್ಸ್, ಲಖನೌ ಸೂಪರ್ ಜೈಂಟ್ಸ್ , ಪಂಜಾಬ್ ಕಿಂಗ್ಸ್ , ಗುಜರಾತ್ ಟೈಟಾನ್ಸ್ , ಸನ್’ರೈಸರ್ಸ್ ಹೈದರಾಬಾದ್