ಪಡಂಗಡಿ ಪುತ್ಯೆಯಲ್ಲಿವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿ,ಕಾಲುಗ ಳನ್ನು ಕಟ್ಟಿ , ಮೊಬೈಲ್ ನ್ನು ಕಿತ್ತು ಕೊಂಡು, ಪಿನ್ ನಂಬರ್ ಪಡೆದು ರೂ. 82 ಸಾವಿರ ಖಾತೆಯಿಂದ ವಗಾ೯ಯಿಸಿ ವಂಚನೆ

Suddi Udaya

ಪಡಂಗಡಿ : ಇಲ್ಲಿನ ಜಾನೆಬೈಲು ಪುತ್ಯೆಎಂಬಲ್ಲಿ ವ್ಯಕ್ತಿಯೊಬ್ಬರಿಗೆ ಇಬ್ಬರುಹಲ್ಲೆ ನಡೆಸಿ,ಕಾಲುಗಳನ್ನು ಲುಂಗಿಯಿಂದ ಕಟ್ಟಿ , ಮೊಬೈಲ್ ನ್ನು ಕಿತ್ತು ಕೊಂಡು, ಪಿನ್ ನಂಬರ್ ಪಡೆದು ರೂ. 82 ಸಾವಿರ ಖಾತೆಯಿಂದ ವಗಾ೯ಯಿಸಿ, ಅಂಗಳದಲ್ಲಿ ನಿಲ್ಲಿಸಿದ ರೂ 2. 82 ಲಕ್ಷ ಬೆಲೆಬಾಳುವ ಇಲೆಕ್ಟ್ರಿಕ್ ತ್ರಿಚಕ್ರ ವಾಹನ ಸಹಿತ ಪರಾರಿಯಾಗಿರುವ‌ ಬಗ್ಗೆ ಮಾ. 30ರಂದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡಂಗಡಿ ಗ್ರಾಮದ ಮುಕ್ತಿದಾಮ ಜಾನೆಬೈಲು ಪುತ್ಯೆಮನೆ ನಿವಾಸಿ ಗೋವಿಯಸ್ (64 ವರ್ಷ) ರವರು ನೀಡಿದ ದೂರಿನಂತೆ ರಿಯಾಜ್ ಮತ್ತು ಪೈಝಲ್ ಎಂಬವರ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ಠಾಣೆ ಅಕ್ರ ನಂ 20/2023 ಕಲಂ; 324, 506, 394 ಐಪಿಸಿ. ಯಂತೆ ಪ್ರಕರಣ ದಾಖಲಾಗಿದೆ.

ಮಾ.30 ರಂದು ರಾತ್ರಿ ಸಮಯ 8 ಗಂಟೆಗೆ ಪಡಂಗಡಿ ಗ್ರಾಮದ ಜಾನೆಬೈಲು ಪುತ್ಯೆ ಮನೆಯ ಬಳಿ ಇರುವ ರಬ್ಬರ್ ಪ್ರೊಸಸಿಂಗ್ ಶೆಡ್ ಬಳಿ ಮಗನಾದ ಐಸಾಕ್ ಅಲೈಸ್ ಗೋವಿಯಸ್ ಜೊತೆ ಮೊಬೈಲ್ ಪೋನಿನಲ್ಲಿ ಮಾತನಾಡುತ್ತಿರುವ ಸಮಯ ತನ್ನ ಬಳಿ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಪರಿಚಯದ ರಿಯಾಜ್ ಮತ್ತು ಪೈಝಲ್ ಎಂಬವರು ಬಂದು ಕಟ್ಟಿಗೆ ಕೋಲಿನಿಂದ ಹಲ್ಲೆ ನಡೆಸಿ
ಕೆಳಗಡೆ ಬಿದ್ದ ನನ್ನ ಕಾಲುಗಳನ್ನು ಲುಂಗಿಯಿಂದ ಕಟ್ಟಿ ರಿಯಾಜ್ ಕೈಯಲ್ಲಿದ್ದ ಮೊಬೈಲ್ ನ್ನು ಎಳೆದಾಗ ಪೈಝಲ್ ಆತನಲ್ಲಿದ್ದ ಶಾಲಿನಿಂದ ಕುತ್ತಿಗೆಗೆ ಬಿಗಿದು ಗೂಗಲ್ ಪಿನ್ ಹೇಳಿ ಎಂದು ಬೆದರಿಸಿ ಪಿನ್ ನಂಬ್ರ ಪಡೆದು ರೂ 82,000/- ರೂ ವನ್ನು ಅವರ ಹೆಂಡ್ತಿಯರ ಹೆಸರಿನ ಖಾತೆಗೆ ವರ್ಗಾಯಿಸಿ ಮೊಬೈಲ್ ನ್ನು ಮತ್ತು ಅಂಗಳದಲ್ಲಿ ನಿಲ್ಲಿಸಿದ ರೂ 2.82ಲಕ್ಷ ಬೆಲೆಬಾಳುವ ಮಹೀಂದ್ರಾ ಇಲೆಕ್ಟ್ರಿಕ್ ಮೊಬಾಲಿಟಿ ತ್ರಿಚಕ್ರ ವಾಹನ ಕಳವು ಮಾಡಿಕೊಂಡು ಹೋಗಿರುವುದಾಗಿ, ದೂರಿನಲ್ಲಿ ಆರೋಪಿಸಿದ್ದಾರೆ.
ಈ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

error: Content is protected !!