September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಪೊಲೀಸ್ವರದಿ

ಕೊಕ್ಕಡ: ಮನೆಯಲ್ಲಿಟ್ಟ ಚಿನ್ನಾಭರಣ ಕಳ್ಳತನ

ಕೊಕ್ಕಡ : ಮನೆಯ ಗೊದ್ರೆಜ್ ನಲ್ಲಿಟ್ಟಿದ ಚಿನ್ನಾಭರಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿದ ಘಟನೆ ಜೂ.14 ರಂದು ರೆಖ್ಯಾದಲ್ಲಿ ನಡೆದಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಘಟನಾ ಸ್ಥಳಕ್ಕೆ ಧರ್ಮಸ್ಥಳ ಸಬ್ ಇನ್ಸೆಕ್ಟರ್ ಸಮರ್ಥ ಆರ್ ಗಾಣಿಗೇರ ಮತ್ತು ತಂಡ, ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಪ್ರಕರಣ: ಶ್ರೀಮತಿ ಕುಸುಮರವರು ತನ್ನ ಗಂಡ ಅಣ್ಣಿ @ ಆನಂದ ಗೌಡ ಬೆಳ್ತಂಗಡಿ ತಾಲೂಕು ರೆಖ್ಯಾ ಗ್ರಾಮದ ಕಟ್ಟೆ ಎಂಬಲ್ಲಿ ವಾಸವಿದ್ದು ಇಬ್ಬರು ದಿನಾ ಬೆಳಿಗ್ಗೆ ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭ ಮನೆಗೆ ಬೀಗ ಹಾಕಿ ಬೀಗದ ಕೀಯನ್ನು ಕೊಟ್ಟಿಗೆಯಲ್ಲಿ ಬಚ್ಚಿಟ್ಟು ಕೆಲಸಕ್ಕೆ ಹೋಗಿ ಸಂಜೆ ವಾಪಾಸು ಮನೆಗೆ ಬರುತ್ತಿದ್ದರು. ಕುಸುಮ ಬಳಿ ಸುಮಾರು 3 ಪವನ್ ತೂಕದ ಕರಿಮಣಿ ಸರ. ಸುಮಾರು 1 ಪವನ್ ತೂಕದ ಬಳೆ, ಸುಮಾರು 2 ಪವನ್ ತೂಕದ ಚಿನ್ನದ ಚೈನ್, ಸುಮಾರು ಅರ್ಧ ಪವನ್ ತೂಕದ ಒಂದು ಜೊತೆ ಕಿವಿಯೋಳೆ ಒಟ್ಟು ರೂ 2,60,000 ರೂಪಾಯಿ ಅಂದಾಜು ಮೌಲ್ಯದ 52 ಗ್ರಾಂ ಚಿನ್ನಾಭರಣವಿತ್ತು.

ಚಿನ್ನಾಭರಣವನ್ನು ಮೇ.23 ರಂದು ಕೊನೆಯದಾಗಿ ನೋಡಿರುತ್ತಾರೆ. ಕುಸುಮ ಹಾಗೂ ಗಂಡ ಆನಂದ ಗೌಡ ಶಿರಾಡಿ ದೇವಸ್ಥಾನಕ್ಕೆ ಹೋಗುವ ಸಲುವಾಗಿ ಜೂ.14 ರಂದು ಸಂಜೆ 6.30 ಗಂಟೆ ಸುಮಾರಿಗೆ ಗೊದ್ರೆಜ್ ನಲ್ಲಿಟ್ಟ ಚಿನ್ನಾಭರಣವನ್ನು ತೆಗೆಯಲು ಹೋದಾಗ ಗೊದ್ರೆಜಿಗೆ ಹಾಕಿದ್ದ ಕೀ ಹಾಕಿದ ಸ್ಥಿತಿಯಲ್ಲಿ ಇತ್ತು. ಗೊದ್ರೆಲ್ನಲ್ಲಿಟ್ಟಿದ್ದ ಚಿನ್ನಾಭರಣ ಯಾರೋ ಕಳ್ಳರು ಕಳವು ಮಾಡಿರುತ್ತಾರೆ ಎಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜೂ.15 ರಂದು ಕುಸುಮ ದೂರು ನೀಡಿದ್ದಾರೆ.

Related posts

ನವೋದಯ ಸ್ವಸಹಾಯ ತಂಡದ ಮಹಿಳ ಸದಸ್ಯರಿಗೆ ಸಮವಸ್ತ್ರ ವಿತರಣೆ

Suddi Udaya

ಜು.21: ವಿದ್ಯಾಶ್ರೀ ಅಡೂರ್ ರವರ ಬಹುನಿರೀಕ್ಷೆಯ ಸಂಕಲನ ಪಯಣ ಬಿಡುಗಡೆ

Suddi Udaya

ಬೆಳಾಲು ಹಾ.ಉ.ಸ. ಸಂಘದ ಚುನಾವಣೆ: ಬಿಜೆಪಿ ಬೆಂಬಲಿತ ನಿರ್ದೇಶಕರಿಗೆ ಗೆಲುವು

Suddi Udaya

ಉಜಿರೆ ಎಸ್.ಡಿ.ಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು : 37ನೇ ಶಿಶ್ಯೋಪನಯನ ಕಾರ್ಯಕ್ರಮ: 150 ನೂತನ ವಿದ್ಯಾರ್ಥಿಗಳಿಂದ ದೀಕ್ಷೆ ಸ್ವೀಕಾರ

Suddi Udaya

ಚಾರ್ಮಾಡಿ ತ್ರಿವರ್ಣ ಸಂಜೀವಿನಿ ಒಕ್ಕೂಟದ ಮಾಸಿಕ ಸಭೆ

Suddi Udaya

ಉಡುಪಿ ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕರಾಗಿ ಧರಣೇಂದ್ರ ಕೆ. ಜೈನ್ ಆಯ್ಕೆ

Suddi Udaya
error: Content is protected !!