September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿ

ನಾರಾವಿ: ಮಾಂಡೋವಿ ಮೋಟಾರ್‍ಸ್ ನಾರಾವಿ ಶಾಖೆಯ ಉದ್ಘಾಟನೆ

ನಾರಾವಿ: ಇಲ್ಲಿಯ ಅರಸಿಕಟ್ಟೆಯಲ್ಲಿ ಮಾಂಡೋವಿ ಮೋಟಾರ್‍ಸ್ ಪ್ರೈ.ಲಿ. ಇದರ ನೂತನ ಶಾಖೆಯು ನಾರಾವಿಯ ಅರಸಿಕಟ್ಟೆಯಲ್ಲಿ ಎ. 6ರಂದು ಉದ್ಘಾಟನೆಗೊಂಡಿತು.

ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲರು ನೂತನ ಸಂಸ್ಥೆಯನ್ನು ಉದ್ಘಾಟಿಸಿ ಶುಭಕೋರಿದರು.

ಮುಖ್ಯ ಅತಿಥಿಗಳಾಗಿ ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾಲತಾ,ರೆ. ನಾರಾವಿ ಸೈಂಟ್ ಆಂತೋನಿ ಚರ್ಚ ನ ರೆ. ಫಾ.ಸೈಮೋನ್ ಡಿಸೋಜ,ಹೊಸ್ಮಾರು ಎಸ್.ಎಂ.ಜೆ. ಕೆ.ಎಂ.ಮಹಮ್ಮದ್ ಸ್ವಾಲಿಹ ಲತೀಫ್, ನಾರಾವಿ ಉದ್ಯಮಿ ವಸಂತ ಭಟ್, ಮಾಂಡೋವಿ ಸಂಸ್ಥೆಯ ಚೆಯರ್ ಮೆನ್ ಆರೂರು ಕಿಶೋರ್ ರಾವ್, ಡೈರೆ ಆರೂರು ಸಂಜಯ್ ರಾವ್, ಮಾರುತಿ ಏರಿಯಾ ಮ್ಯಾನೇಜರ್ ಸರ್ವಿಸ್ ಸಾರಂಗ್ ಬನ್ಸಲ್, ಟಿ.ಎಸ್.ಎಂ ಮಾರುತಿ ಗೊವೀಂದ ರಾಜ್,ಎವಿಪಿ ನೆರೆಂಕಿ ಪಾರ್ಶ್ವನಾಥ ಜೈನ್, ಡಿಜಿಎಂ ಸೇಲ್ಸ್ ಶಶಿಧರ ಕಾರಂತ, ಸೀನಿಯರ್ ಜನರಲ್ ಮ್ಯಾನೇಜರ್ ಉಮೇಶ್, ಸ್ಥಳದ ಮಾಲಕರಾದ ರೋಶನ್ ಹೆಗ್ಡೆ, ಹಾಗೂ ಮಾರುತಿ ಸುಜುಕೀ ಹಾಗೂ ಮಾಂಡವೀ ಮೋಟಾರ್ಸ್ನ್ ನ ಎಲ್ಲಾ ಬ್ರಾಂಚ್ ನ ವ್ಯವಸ್ಥಾಪಕ, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಎಎಸ್ಎಂ ಮುರಳೀದರ್ ಸ್ವಾಗತಿಸಿ, ವಂದಿಸಿದರು.

ಗ್ರಾಹಕರಿಗೆ ಉತ್ತಮ ಸೇವೆಯನ್ನು ಒದಗಿಸುತ್ತಾ ಬಂದಿರುವ ಮಾಂಡೋವಿ ಮೋಟಾರ್‍ಸ್‌ನ ಇದು 40ನೇ ಶಾಖೆಯಾಗಿದೆ.

ರಾಜ್ಯದ ಅತೀದೊಡ್ಡ ಡೀಲರ್‌ಶಿಪ್ ಹೊಂದಿರುವ ಸಂಸ್ಥೆ
ಮಾಂಡೋವಿ ಮೋಟಾರ್ಸ್ ಪ್ರೈ.ಲಿ. 1984ರಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಮಾರುತಿ ಸುಜುಕಿ ಕಾರ್‌ಗಳ ಕರ್ನಾಟಕದ ಮೊದಲ ಮತ್ತು ಅತಿ ದೊಡ್ಡ ಡೀಲರ್‌ಶಿಪ್ ಆಗಿದೆ. ಇದರ ಮೂಲ ಕಂಪನಿಯು ಆಟೋಮೋಟಿವ್ ಉದ್ಯಮದಲ್ಲಿ ಸುಮಾರು 100 ವರ್ಷಗಳ ಅನುಭವವನ್ನು ಹೊಂದಿದೆ. ಕಂಪನಿಯು ತಾನು ಮಾಡುವ ಎಲ್ಲದರಲ್ಲೂ ಉತ್ಕೃಷ್ಟತೆಯನ್ನು ಹೊಂದಿದೆ. ಇದು ಸುಮಾರು 37 ವರ್ಷಗಳ ಡೀಲರ್‌ಶಿಪ್ ವ್ಯವಹಾರದಲ್ಲಿ, ‘ಮಾಂಡೋವಿ’ ಎಂಬ ಹೆಸರನ್ನು ಮಾರುತಿ ಸುಜುಕಿಯೊಂದಿಗೆ ಏಕರೂಪವಾಗಿ ಗುರುತಿಸಲಾಗಿದೆ ಮತ್ತು ಇದು ಕಾರ್ಯಕ್ಷಮತೆಯಲ್ಲಿ ಅತ್ಯುತ್ತಮವಾದವುಗಳಲ್ಲಿ ಒಂದಾಗಿದೆ. ಗ್ರಾಹಕರ ತೃಪ್ತಿಗೆ ಪ್ರಾಧಾನ್ಯತೆ ನೀಡುವ ಸಂಸ್ಥೆಯು ತನ್ನ ಕಾರುಗಳ ಗುಣಮಟ್ಟವನ್ನು ಹೆಚ್ಚಿಸಲು ನಿರಂತರವಾಗಿ ಗುರಿಯನ್ನು ಹೊಂದಿದೆ. ಈ ಮೂಲಕ ಗ್ರಾಹಕರ ವಿಶ್ವಾಸ ಗಳಿಸಿದೆ.

Related posts

ಎ.20: ಸರ್ಕಾರದ ನಡೆ ಕಾರ್ಯಕರ್ತರ ಕಡೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ: 10 ಸಾವಿರ ಕಾರ್ಯಕರ್ತರು ಭಾಗಿ

Suddi Udaya

ಗುಡ್ ಫ್ಯೂಚರ್ ಚೈಲ್ಡ್ ಆಂಗ್ಲ ಮಾಧ್ಯಮ ಶಾಲಾ ಮಂತ್ರಿ ಮಂಡಲ ರಚನೆ

Suddi Udaya

ಕೊಯ್ಯೂರು ಪ್ರಗತಿಪರ ಕೃಷಿಕ ಬೆಳಿಯಪ್ಪ ಗೌಡ ಹೃದಯಾಘಾತದಿಂದ ನಿಧನ

Suddi Udaya

ಬೆಳ್ತಂಗಡಿ ಜೈನ್ ಮೊಬೈಲ್‌ನಲ್ಲಿ ದಸರಾ ಹಾಗೂ 20ನೇ ವರ್ಷದ ಸಂಭ್ರಮದ ಪ್ರಯುಕ್ತ ಬಿಗ್ ಡಿಸ್ಕೌಂಟ್ ಆಫರ್: ಪ್ರತಿ ಖರೀದಿಗೂ ಪಡೆಯಿರಿ ಕೂಪನ್ ಹಾಗೂ ಅಧಿಕ ಬಹುಮಾನಗಳು

Suddi Udaya

ಡಿ.10: ಕರಾಯದಲ್ಲಿ ವಿದ್ಯುತ್ ನಿಲುಗಡೆ

Suddi Udaya

ಬೆಸ್ಟ್ ಎಂಎಲ್‌ಎ ಪ್ರಶಸ್ತಿ ಪಡೆದ ಶಾಸಕ ಹರೀಶ್ ಪೂಂಜರಿಗೆ ದೇವರ ಪ್ರಸಾದ ನೀಡಿ ಗೌರವಾರ್ಪಣೆ

Suddi Udaya
error: Content is protected !!