24.4 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಶಿಶಿಲ ಶಿವಕೀರ್ತಿ ನಿಲಯದಲ್ಲಿ ಹನುಮ ಜಯಂತಿ

ಶಿಶಿಲ : ಕರ್ಮ ಭೂಮಿ, ಜ್ಞಾನ ಭೂಮಿಯಲ್ಲಿ ಭಗವಂತನ ಅವತಾರವಾಯಿತು. ಭಗವಂತ ಭಕ್ತರ ನಂಬಿಕೆಯಲ್ಲಿ ವಾಸಿಸುತ್ತಾನೆ. ಅಂತಹ ಭಗವಂತ ಶ್ರೀರಾಮ ಸೇವಕ ಹನುಮಂತ. ಎಲ್ಲಿ‌ ರಾಮನೊ ಅಲ್ಲಿ ಹನುಮ .ಎಲ್ಲಿ ಹನುಮನೊ ಅಲ್ಲಿ ರಾಮ. ಕಪಿಗಳು ರಾಮ ನಾಮದಿಂದ ಉದ್ದಾರವಾದವು. ಸ್ವಾಮಿ ಭಕ್ತಿಗೆ ಹನುಮಂತ ಉತ್ತಮ ಉದಾಹರಣೆ. ಜೀವನ ಸಾಗರವನ್ನು ದಾಟಲು ಹನೂಮ ಸ್ಮರಣೆ ಪೂರಕ . ಅಂತಹ ಶಕ್ತಿಯನ್ನು ನಾವೆಲ್ಲಾ ಈದಿನ ಭಕ್ತಿಯಿಂದ ಸ್ಮರಿಸುತ್ತಿದ್ದೆವೆ ಎಂದು ಹಿರಿಯ ವಿದ್ವಾಂಸರೂ, ಜ್ಯೋಷಿಗಳು ದಾವಣಗೆರೆಯ ವೆ. ಬ್ರಹ್ಮ ಶ್ರೀ ರಾಘವೇಂದ್ರ ಆಚಾರ್ಯ ಶುಭಾಶಯ ನುಡಿದರು.

ಶಿಶಿಲ ಶಿವಕೀರ್ತಿನಿಲಯದಲ್ಲಿ ನಡೆದ ಹನೂಮ ಜಯಂತಿ ಆಚರಣೆಯಲ್ಲಿ ಅವರು ಅಶೀರ್ವಚನ ನೀಡಿದ್ದರು.

ಕಾರ್ಯಕ್ರಮ ಉದ್ಘಾಟನೆಯನ್ನು ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಆಡಳಿತ‌ ಮಂಡಳಿ ಸದಸ್ಯ ಶೇಖರ ನಾರಾವಿ ಉದ್ಘಾಟಿಸಿ ಮಕ್ಕಳಲ್ಲಿ ಧಾರ್ಮಿಕ ಭಾವನೆ ಮಾಡುವಲ್ಲಿ ಭಜನೆ ಪೂರಕ ಎಂದು ನುಡಿದರು.
ಮಖ್ಯ ಅಥಿತಿಗಳಾಗಿ ವಿಪ್ರ ಸಮೂಹ ಸಂಸ್ಥೆ ಬೆಂಗಳೂರಿನ ನಿರ್ದೆಶಕ ರಾಘವೇಂದ್ರ ಇವರು ಆಶಯ ನುಡಿಗಳನ್ನು ನುಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ರಾಘವೇಂದ್ರ ಕಿಗ್ಗ, ಶ್ರೀನಿವಾಸ ಮೂಡೆತ್ತಾಯ. ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಹಿರಿಯ ಭಜನಾ ತರಬೇತಿದಾರರಾದ ಶ್ರೀ ರಾಮಕೃಷ್ಣ ಕಾಟುಕುಕ್ಕೆ ದಂಪತಿಗಳನ್ನು ಶ್ರೀ ಜಯರಾಮ ನೆಲ್ಲಿತ್ತಾಯರ ಮನೆ ವತಿಯಿಂದ ಸನ್ಮಾನಿಸಲಾಯಿತು.
ಶ್ರೀ ಬಿಳಿನೆಲೆ ಗೋಪಾಲ ಕೃಷ್ಣ ಮಹಿಳಾ ಮತ್ತು ಪುರುಷ ಭಜನಾ ಮಂಡಳಿ ಮತ್ತು ಅರಸಿನಮಕ್ಕಿ ಮಕ್ಕಳ ಭಜನಾ ಮಂಡಳಿಯ ಸದಸ್ಯರು ಆಕರ್ಷಕ ಕುಣಿತ ಭಜನೆ ನೆರವೇರಿಸಿದ್ದರು.

ಬಿ.ಜಯರಾಮ ನೆಲ್ಲಿತ್ತಾಯ ಸ್ವಾಗತಿಸಿದರು. ಶ್ರೀಮತಿ ಅಮಿತಾ ಧನಂಜಯ ಪ್ರಾರ್ಥನೆ ಮಾಡಿದ್ದರು. ಸೊಮಪ್ಪ ಪೂಜಾರಿ ಕಾರ್ಯಕ್ರಮ ನಿರ್ವಹಣೆ ಮಾಡಿದ್ದು , ಶ್ರೀಮತಿ ಪ್ರೀತಿಕಾ ಯಶಸ್ ಧನ್ಯವಾದವಿತ್ತರು. ಭಜನೆ, ಹನುಮ ಪೂಜೆ, ರಾಮಾಯಣ ಗ್ರಂಥ ಪೂಜೆ, ಕುಣಿತ ಭಜನೆಯಲ್ಲಿ ಕಾರ್ಯಕ್ರಮ ಅತ್ಯಂತ ಭಕ್ತಿ ಪೂರಕವಾಗಿ ನೆರವೇರಿತ್ತು.

Related posts

ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್: ಅರಸಿನಮಕ್ಕಿಯ ಶುಭಲತಾ ಜಿ. ಪ್ರಥಮ ಸ್ಥಾನ

Suddi Udaya

ಮಾಜಿ ಶಾಸಕ ವಸಂತ ಬಂಗೇರ ಅಗಲುವಿಕೆಗೆ ಕಾಜೂರು ಸಮಿತಿಯಿಂದ ಸಂತಾಪ

Suddi Udaya

ಉಜಿರೆ: ಶ್ರೀ ಧರ್ಮಸ್ಥಳದ ಮಂಜುನಾಥೇಶ್ವರ ಆಸ್ಪತ್ರೆಗೆ ದಶಮಾನೋತ್ಸವ ಸಂಭ್ರಮ

Suddi Udaya

ವಿಜಯ ಕ್ರೇಡಿಟ್ ಕೋ- ಆಪರೇಟಿವ್ ಸೊಸೈಟಿಗೆ ‘ದ.ಕ ಜಿಲ್ಲಾ ಉತ್ತಮ ಪತ್ತಿನ ಸಹಕಾರಿ ಸಂಘ’ ಪ್ರಶಸ್ತಿ

Suddi Udaya

ಬೆಳ್ತಂಗಡಿ ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲರಾಗಿರುವ ಮನೋಹರ ಕುಮಾರ್ ರಿಗೆ ಹೆಚ್ಚುವರಿ ಹೊಣೆ ಹೊರಿಸಿ ಸರಕಾರ ಆದೇಶ

Suddi Udaya

ನಾರಾವಿ ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆಯಲ್ಲಿ ವಿವಿಧ ರೋಗಗಳ ಕುರಿತು ಮಾಹಿತಿ ಕಾರ್ಯಾಗಾರ

Suddi Udaya
error: Content is protected !!