September 6, 2026
ಚಿತ್ರ ವರದಿಜಿಲ್ಲಾ ಸುದ್ದಿ

ನಮ್ಮ ಟಿವಿಯ ‘ಬಲೆ ಚಾತುರ್ಪು ತೋಜಾಲೆ’ ರೀಯಾಲಿಟಿ ಶೋ ಸ್ಪರ್ಧೆ: ಯುವವಾಹಿನಿ ಬೆಳ್ತಂಗಡಿ ಘಟಕಕ್ಕೆ ಪ್ರಥಮ ಸ್ಥಾನ

ಬೆಳ್ತಂಗಡಿ : ಹಲವಾರು ಜನಪ್ರೀಯ ಕಾರ್ಯಕ್ರಮಗಳ ಮೂಲಕ‌ ಜನಮನ ಗೆದ್ದ ಕರಾವಳಿಯ ಹೆಸರಾಂತ ಚಾನೆಲ್ ನಮ್ಮ‌ ಟಿವಿ ಪ್ರಸ್ತುತ ಪಡೆಸಿದ ಬಲೆ ಚಾತುರ್ಪು ತೋಜಾಲೆ ರೀಯಾಲಿಟಿ ಶೋ ಸ್ಪರ್ಧೆಯಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕವು ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡು ನಗದು ರೂ 2 ಲಕ್ಷ ಮತ್ತು ಪ್ರಶಸ್ತಿಯನ್ನು ಪಡೆದುಕೊಂಡಿದೆ.


20 ನಿಮಿಷದಲ್ಲಿ ಸಾಂಸ್ಕ್ರತಿಕ ವೈವಿಧ್ಯಮಯ ಕಾರ್ಯಕ್ರಮವನ್ನು ನೀಡ ಬೇಕಿದ್ದ ಈ ಸ್ಪರ್ಧೆಯಲ್ಲಿ ಉಡುಪಿ, ದಕ್ಷಿಣ ಕನ್ನಡದ 20 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದು ಅಂತಿಮವಾಗಿ ನೇತ್ರಾವತಿ ನದಿ ತಿರುವು ಯೋಜನೆಯ ಬಗ್ಗೆ ಪ್ರಸ್ತುತ ಪಡಿಸಿದ ಯುವವಾಹಿನಿ ಬೆಳ್ತಂಗಡಿ ಘಟಕಕ್ಕೆ ಪ್ರಥಮ‌ ಸ್ಥಾನ ಒದಗಿ ಬಂದಿದೆ.
ದಿಗ್ಗಜ ಸಂಗೀತ ನಿರ್ದೆಶಕರಾದ ಗುರುಕಿರಣ್, ರಂಗ ಕಮಿ ಜಗನ್ ಪವರ್, ನಟ ಸೂರಜ್ ಸನಿಲ್ ತೀರ್ಪುಗಾರರಾಗಿ ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಬೆಳ್ತಂಗಡಿ ತಂಡವು ಅತ್ಯುತ್ತಮ‌ ಪ್ರದರ್ಶನವನ್ನು ನೀಡಿ ಜಯಶಾಲಿಯಾಗಿದೆ.
ಕಲಾ‌ ಸಾಧಕರಾದ ಅನೀಶ್ ಅಮಿನ್ ವೇಣೂರು, ಸ್ಪಿತೇಶ್ ಎಸ್ ಬಾರ್ಯ ನಿರ್ದೇಶನದೊಂದಿಗೆ ಚಂದ್ರಹಾಸ ಬಳಂಜರವರ ಸಹಕಾರದೊಂದಿಗೆ ಯಶಸ್ವಿಯಾಗಿ ಮೂಡಿಬಂದಿರುತ್ತದೆ.

ತಾಲೂಕಿನ ಸುಮಾರು 60 ಜನ ಕಲಾವಿದರಾಗಿ ಭಾಗವಹಿಸಿದ್ದು ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಅಶ್ವಥ್ ಕುಮಾರ್, ಕಾರ್ಯದರ್ಶಿ ಸುನಿಲ್ ಕನ್ಯಾಡಿ , ಕೋಶಾಧಿಕಾರಿ ವಿಜಯ್ ಶಿರ್ಲಾಲು ಹಾಗೂ ಸರ್ವ ಸದಸ್ಯರು ಮತ್ತು ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರಿನ‌ ಅಧ್ಯಕ್ಷರಾದ ರಾಜೇಶ್ ಜೊತೆಗಿದ್ದು ಸಂಪೂರ್ಣ ಸಹಕಾರ ನೀಡಿದರು.

Related posts

ಚಾರ್ಮಾಡಿ ತಿರುವಿನಲ್ಲಿ ಟರ್ನ್ ಆಗದೇ ನಿಂತ 12 ಚಕ್ರದ ಲಾರಿ: ಬೆಳಗ್ಗೆಯಿಂದ ಚಾರ್ಮಾಡಿ ಘಾಟ್ ನಲ್ಲಿ ವಾಹನ ಸವಾರರ ಪರದಾಟ

Suddi Udaya

ಕೊಕ್ಕಡ: ಇತ್ತೀಚೆಗೆ ನಿಧನರಾದ ತಿಮ್ಮಪ್ಪ ಗೌಡ ರವರ ಸವಿ ನೆನಪಿಗಾಗಿ ಪುತ್ರ ಗಣೇಶ್ ಗೌಡ ಕಲಾಯಿಯವರಿಂದ 800 ಹಣ್ಣಿನ ಗಿಡ ವಿತರಣೆ

Suddi Udaya

ಬೆಳ್ತಂಗಡಿ :ಪಂಚ ಗ್ಯಾರಂಟಿ ಯೋಜನೆಯ ತಾಲೂಕು ಮಟ್ಟದ ಅನುಷ್ಟಾನ ಸಮಿತಿ ಸಭೆ

Suddi Udaya

ಮುಂಡ್ರುಪ್ಪಾಡಿ: ಶಾಲೆತಡ್ಕ ರಾಮಣ್ಣ ಗೌಡರ ಮನೆ ಹಾಗೂ ಕೊಟ್ಟಿಗೆಗೆ ಬಿದ್ದ ಮರ: ಅಪಾರ ಹಾನಿ

Suddi Udaya

ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಸೇವಾ ನಿವೃತ್ತಿ

Suddi Udaya

ವಾಣಿ ಪಿಯು ಕಾಲೇಜಿಗೆ ರಾಷ್ಟ್ರೀಯ ಸೇವಾ ಯೋಜನೆಯ ವಿಭಾಗೀಯ ಅಧಿಕಾರಿ ಶ್ರೀಮತಿ ಸವಿತಾ ಎರ್ಮಾಳ್ ಭೇಟಿ

Suddi Udaya
error: Content is protected !!