April 2, 2025
ಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜು

ಕಾಶಿಪಟ್ಣ: ನಾರಾವಿ ಸಂತ ಅಂತೋನಿ ಕಾಲೇಜಿನ ಎನ್ನೆಸ್ಸೆಸ್ ಶಿಬಿರದ ಉದ್ಘಾಟನೆ

ವೇಣೂರು: ಎನೆಸ್ಸೆಸ್ ಶಿಬಿರವು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಸ್ವಚ್ಛತೆ, ಬಾಂಧವ್ಯ, ಸ್ವಯಂಪರಿಪಾಲನೆ ಮುಂತಾದ ಗುಣಗಳನ್ನು ಅಭಿವೃದ್ಧಿಪಡಿಸುತ್ತದೆ ಎಂದು ಯು. ನಾರಾಯಣ ಭಟ್ ಕೇಳಗುತ್ತು ಹೇಳಿದರು.
ಕಾಶಿಪಟ್ಣ ಕೇಳ ದ.ಕ.ಜಿ.ಪಂ. ಹಿರಿಯ ಪಾಥಮಿಕ ಶಾಲೆಯಲ್ಲಿ ನಡೆದ ನಾರಾವಿ ಸಂತ ಅಂತೋನಿ ಪದವಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ 2022-23ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.


ಕಾಲೇಜಿನ ಪ್ರಾಚಾರ್ಯ ವಂ| ಡಾ. ಆಲ್ವಿನ್ ಸೆರಾವೋ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಶಿಬಿರದ ಯಶಸ್ವಿಗೆ ಶುಭ ಹಾರೈಸಿದರು.

ಕೇಳದಪೇಟೆ ಸ.ಹಿ.ಪ್ರಾ. ಶಾಲೆಯ ಮುಖ್ಯಶಿಕ್ಷಕ ಪ್ರಶಾಂತ್ ಎ., ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ್ ಮಜಲಡ್ಡ, ಹರೀಶ್ ಗೊಲಿ ಕುಕ್ಕಾಜೆ, ಸುಭಾಶ್ ಶೆಟ್ಟಿ ಹೊಗೆದಿಡ್ಡು, ನಿಕಟಪೂರ್ವ ಯೋಜನಾಧಿಕಾರಿ ಅವಿಲ್ ಮೋರಾಸ್, ಉಪನ್ಯಾಸಕ ಪ್ರದೀಪ್ ಬಿ., ಕುಮಾರಿ ಅಶ್ವಿತಾ ಸೆರಾವೋ, ಎನ್ನೆಸ್ಸೆಸ್ ಕಾರ್ಯದರ್ಶಿಗಳಾದ ಸುಹಾಸ್ ಹೆಗ್ಸೆ, ನವ್ಯಶ್ರೀ ಉಪಸ್ಥಿತರಿದ್ದರು.
ಶಿಬಿರದ ಯೋಜನಾಧಿಕಾರಿ ದಿನೇಶ್ ಬಿ.ಕೆ. ಸ್ವಾಗತಿಸಿದರು. ಸಹಶಿಬಿರಾಧಿಕಾರಿ ಅವಿನಾಶ್ ಲೋಬೋ ವಂದಿಸಿದರು. ಉಪನ್ಯಾಸಕ ಸಂತೋಷ್ ನಿರೂಪಿಸಿದರು.

Related posts

ಮುಳಿಕ್ಕಾರ್ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಉಮಾನಾಥ್, ಕಾರ್ಯದರ್ಶಿ ಶಾಂಭವಿ ಆಯ್ಕೆ

Suddi Udaya

ಫೆ.1-2: ಚಿಬಿದ್ರೆ ಪರನೀರು ನಾಗಬ್ರಹ್ಮ ಪರಿವಾರ ದೇವರ ಸಾನಿಧ್ಯದಲ್ಲಿ ನಾಗಬ್ರಹ್ಮ ಪರಿವಾರ ದೇವರ ಸಾನಿಧ್ಯದ ಪ್ರತಿಷ್ಠೆ ಹಾಗೂ ರಕೇಶ್ವರಿ ಪ್ರಾರ್ಥನೆ

Suddi Udaya

ಮೂಡುಕೋಡಿ: ಒಕ್ಕೂಟದ ಪದಗ್ರಹಣ ಸಮಾರಂಭ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆ

Suddi Udaya

ಜ.7 : ಧರ್ಮಸ್ಥಳದಲ್ಲಿ ನೂತನ ಸಂಕೀರ್ಣ ಶ್ರೀ ಸಾನ್ನಿಧ್ಯ ಉದ್ಘಾಟನೆ ಹಾಗೂ ಜ್ಞಾನ ದೀಪ ಕಾರ್ಯಕ್ರಮ

Suddi Udaya

ನೆರಿಯದಲ್ಲಿ ಬಿದಿರು ಕೃಷಿ ಮಾಹಿತಿ ಸಭೆ

Suddi Udaya

ಪಹಣಿಗಳಿಗೆ ಆಧಾರ್ ಸೀಡಿಂಗ್ ಕಡ್ಡಾಯ

Suddi Udaya
error: Content is protected !!