30.1 C
ಪುತ್ತೂರು, ಬೆಳ್ತಂಗಡಿ
May 16, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿನಿಧನ

ಸುರತ್ಕಲ್ ಮುಕ್ಕದಲ್ಲಿ ಕಾರು ಡಿಕ್ಕಿ: ಧರ್ಮಸ್ಥಳ ಯಕ್ಷಗಾನ ಮೇಳದ ಸಿಬ್ಬಂದಿ ಜೀವನ್ ಕುಮಾರ್ ಸಾವು

ಬೆಳಾಲು: ಸುರತ್ಕಲ್ ಸಮೀಪದ ಮುಕ್ಕದಲ್ಲಿ ರಸ್ತೆ ದಾಟುತಿದ್ದಾಗ ಕಾರು ಡಿಕ್ಕಿಯಾಗಿ ಧರ್ಮಸ್ಥಳ ಯಕ್ಷಗಾನ ಮೇಳದ ಸಿಬ್ಬಂದಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಎ 14 ರಂದು ಸಂಜೆ ನಡೆದಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದ ಯಕ್ಷಗಾನ ಸುರತ್ಕಲ್ ಸಮೀಪದ ಮುಕ್ಕದಲ್ಲಿ ಆಯೋಜನೆ ಮಾಡಲಾಗಿತ್ತು.ಇಲ್ಲಿ ಕರ್ತವ್ಯ ನಿರ್ವಹಿಸುತಿದ್ದ ಬೆಳಾಲಿನ ಜೀವನ್ (ರಾಘು) ಕುಮಾರ್ (35ವ) ರವರು ಸಂಜೆ 4.30 ರ ಸುಮಾರಿಗೆ ರಸ್ತೆ ದಾಟುತ್ತಿರುವ ಸಂದರ್ಭ ವೇಗವಾಗಿ ಬರುತಿದ್ದ ಕಾರೊಂದು ಅವರಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ಜೀವನ್ ಕುಮಾರ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಅವರು ಧರ್ಮಸ್ಥಳ ಮೇಳದಲ್ಲಿ ಸುಮಾರು 15 ವರ್ಷಗಳಿಗಿಂತಲೂ ಹೆಚ್ಚು ಸಮಯಗಳಿಂದ ಕೆಲಸ ನಿರ್ವಹಿಸುತಿದ್ದರು.

ಇವರು ಬೆಳಾಲು ಗ್ರಾಮದ ಅಶ್ವತ್ತಡಿ ನಿವಾಸಿಯಾಗಿದ್ದು ತಾಯಿ ಬೆಳಾಲು ಗ್ರಾ.ಪಂ. ಮಾಜಿ ಅಧ್ಯಕ್ಷೆ ಶ್ರೀಮತಿ ಬೇಬಿ , ತಂದೆ ಸಾಂತಪ್ಪ ಪೂಜಾರಿ, ಪತ್ನಿ ನಳಿನಿ , ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Related posts

ಧರ್ಮಸ್ಥಳದಲ್ಲಿ ಸಮವಸರಣ ಪೂಜಾ ವೈಭವ

Suddi Udaya

ಕಳಿಯ : ಮಕ್ಕಳ ಬೇಸಿಗೆ ಶಿಬಿರ ಉದ್ಘಾಟನೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭೇಟಿ

Suddi Udaya

ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

Suddi Udaya

ವೇಣೂರು: ಜೀರ್ಣೋದ್ಧಾರಗೊಳಿಸಿದ ತ್ಯಾಗಿಭವನ ಉದ್ಘಾಟನೆ

Suddi Udaya

ಮೊಗ್ರು: ಕರಂಬಾರುವಿನಲ್ಲಿ ಕಾಡಾನೆ ಪ್ರತ್ಯಕ್ಷ: ನೇತ್ರಾವತಿ ನದಿಯಲ್ಲಿ ಜಳಕ

Suddi Udaya
error: Content is protected !!