September 6, 2026
ಶಾಲಾ ಕಾಲೇಜು

ಕೊಕ್ಕಡ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶೇ.78.94 ಫಲಿತಾಂಶ

ಕೊಕ್ಕಡ: 2022-23ನೇ ಸಾಲಿನ ಪದವಿ ಪೂರ್ವ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಕೊಕ್ಕಡ ಪದವಿ ಪೂರ್ವ ಕಾಲೇಜಿನ ಕಲಾ ಮತ್ತು ವಿಜ್ಞಾನ, ವಿಭಾಗದಲ್ಲಿ ಒಟ್ಟು 24 ವಿದ್ಯಾರ್ಥಿಗಳಲ್ಲಿ 20 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು ಶೇ. 78.94 ಫಲಿತಾಂಶ ಲಭಿಸಿದೆ.

ವಿಜ್ಞಾನ ವಿಭಾಗದಲ್ಲಿ ಒಟ್ಟು 24 ವಿದ್ಯಾರ್ಥಿಗಳಲ್ಲಿ 20 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 2 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 15 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ವಿಜ್ಞಾನ ವಿಭಾಗದಲ್ಲಿ ಒಟ್ಟು ಶೇ.83.33 ಫಲಿತಾಂಶ ಪಡೆದಿದೆ.

ಕಲಾ ವಿಭಾಗದಲ್ಲಿ ಒಟ್ಟು 33 ವಿದ್ಯಾರ್ಥಿಗಳಲ್ಲಿ 25 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 1 ವಿದ್ಯಾರ್ಥಿ ಉನ್ನತ ಶ್ರೇಣಿಯಲ್ಲಿ, 12 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 5 ವಿದ್ಯಾರ್ಥಿಗಳು ದ್ವೀತಿಯ ಶ್ರೇಣಿಯಲ್ಲಿ, 7 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ಕಲಾ ವಿಭಾಗದಲ್ಲಿ ಒಟ್ಟು ಶೇ.76 ಫಲಿತಾಂಶ ಪಡೆದಿದೆ.

ವಿಜ್ಞಾನ ವಿಭಾಗದಲ್ಲಿ ತೃಷಾ ಡಿ.ಎನ್. (523), ರೋಹನ್ (515), ಅಕ್ಷತಾ (504), ಕಲಾ ವಿಭಾಗದಲ್ಲಿ ಆಯಿಷಾ (537), ವರ್ಷಿಣಿ (507), ರಾಜೇಶ್ (499) ಅತೀ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.

Related posts

ಮೈರೋಳ್ತಡ್ಕ ಸ.ಉ.ಪ್ರಾ. ಶಾಲೆಯಲ್ಲಿ ಪೋಷಕರಿಂದ ಶ್ರಮದಾನ 

Suddi Udaya

ಬೆಳಾಲು ಪೆರಿಯಡ್ಕ ಶಾಲಾ ಅಭಿವೃದ್ದಿಗೆ ಸಕಲ ಸೌಲಭ್ಯಗಳನ್ನು ಒದಗಿಸಿದ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನ ಸಂಚಾಲಕ ಮೋಹನ್ ಕುಮಾರ್ ಅವರಿಗೆ ಸನ್ಮಾನ

Suddi Udaya

ತ್ರೋಬಾಲ್ ಪಂದ್ಯಾಟ : ಉಜಿರೆ ಅನುಗ್ರಹ ಶಾಲಾ ಬಾಲಕರ ತಂಡ ಪ್ರಥಮ

Suddi Udaya

ಏಪ್ರಿಲ್ 7ಕ್ಕೆ ಪಿಯು, 24ಕ್ಕೆ ಎಸ್ಸೆಸ್ಸೆಲ್ಸಿ ಫಲಿತಾಂಶ ನಿರೀಕ್ಷೆ

Suddi Udaya

ಜೂ.15: ಬಳಂಜ ಶಾಲೆಗೆ ಅಶ್ವಥ್ ಹೆಗ್ಡೆ ಫೌಂಡೇಶನ್ ವತಿಯಿಂದ ಶಾಲಾ ವಾಹನ ಸಮರ್ಪಣೆ

Suddi Udaya

ಇಂದಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya
error: Content is protected !!