April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

47 ವಿದ್ಯಾರ್ಥಿಗಳಿಗೆ ರಾಜ್ಯದ ಟಾಪ್ 10 ಸ್ಥಾನ; ಪಿಯುಸಿ ಇತಿಹಾಸದಲ್ಲಿ ಆಳ್ವಾಸ್ ಸಾರ್ವತ್ರಿಕ ದಾಖಲೆ: ಡಾ. ಮೋಹನ್ ಆಳ್ವ

ಮೂಡಬಿದ್ರೆ: ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣದ ಇತಿಹಾಸದಲ್ಲೇ ಆಳ್ವಾಸ್ ಪದವಿ ಪೂರ್ವ ಕಾಲೇಜು ದಾಖಲೆ ಸೃಷ್ಟಿಸಿದ್ದು, ಕಾಲೇಜಿನ ದ್ವಿತೀಯ ಪಿಯುಸಿಯ ವಾಣಿಜ್ಯ ವಿಭಾಗದ ಅನನ್ಯಾ ಕೆ.ಎ. 600ಕ್ಕೆ 600 ಅಂಕ ಪಡೆದಿದ್ದಾರೆ.
ಪಿಯುಸಿ ಇತಿಹಾಸದಲ್ಲಿ (ಕೋವಿಡೇತರ) ವಿದ್ಯಾರ್ಥಿಯೊಬ್ಬರು ಪೂಣಾಂಕ (ಶೇ.100) ಪಡೆದಿರುವುದು ಸಾರ್ವಕಾಲಿಕ ಹಾಗೂ ಶಾಶ್ವತ ದಾಖಲೆಯಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ತಿಳಿಸಿದರು.
ವಾಣಿಜ್ಯ ವಿಭಾಗದಲ್ಲಿ ಅನನ್ಯಾ ಕೆ.ಎ. 600 ಅಂಕಗಳೊಂದಿಗೆ ಪ್ರಥಮ ರ್‍ಯಾಂಕ್, ದಿಶಾ ರಾವ್ 596 ಅಂಕಗಳೊಂದಿಗೆ 2ನೇ ರ್‍ಯಾಂಕ್, ವಿಜ್ಞಾನ ವಿಭಾಗದಲ್ಲಿ ಪ್ರಚಿತಾ ಎಂ. 594 ಅಂಕಗಳೊಂದಿಗೆ ರಾಜ್ಯದಲ್ಲಿ ತೃತೀಯ ಹಾಗೂ ಕಲಾ ವಿಭಾಗದಲ್ಲಿ ಚೈತನ್ಯಾ ಗಣಪತಿ ಹೆಗಡೆ 589 ಅಂಕಗಳೊಂದಿಗೆ ರಾಜ್ಯದಲ್ಲಿ ಐದನೇ ಸ್ಥಾನ ಅಲಂಕರಿಸಿದ್ದಾರೆ.
ಓರ್ವ ವಿದ್ಯಾರ್ಥಿನಿ 100%, 23 ವಿದ್ಯಾರ್ಥಿಗಳು 98.33%ಕ್ಕೂ ಅಧಿಕ, 39 ವಿದ್ಯಾರ್ಥಿಗಳು 98%ಕ್ಕೂ ಅಧಿಕ ಫಲಿತಾಂಶ ಪಡೆದಿದ್ದು, 338 ವಿದ್ಯಾರ್ಥಿಗಳು 95% ಕ್ಕಿಂತಲೂ ಅಧಿಕ, 1181 ವಿದ್ಯಾರ್ಥಿಗಳು 90%ಕ್ಕಿಂತಲೂ ಅಧಿಕ, 1910ವಿದ್ಯಾರ್ಥಿಗಳು 85%ಕ್ಕೂ ಅಧಿಕ ಅಂಕಗಳನ್ನು ಗಳಿಸಿದ್ದಾರೆ. ಇಂಗ್ಲೀಷ್ ವಿಷಯದಲ್ಲಿ ಓರ್ವ ವಿದ್ಯಾರ್ಥಿನಿ, ಕನ್ನಡ ವಿಷಯದಲ್ಲಿ 3, ಹಿಂದಿಯಲ್ಲಿ 1, ಸಂಸ್ಕೃತದಲ್ಲಿ 32, ಭೌತಶಾಸ್ತ್ರದಲ್ಲಿ 36, ರಸಾಯನಶಾಸ್ತ್ರದಲ್ಲಿ3, ಗಣಿತದಲ್ಲಿ 98, ಜೀವಶಾಸ್ತ್ರದಲ್ಲಿ 76, ಗಣಕವಿಜ್ಞಾನದಲ್ಲಿ 75, ಸಂಖ್ಯಾಶಾಸ್ತ್ರದಲ್ಲಿ 28, ಇಲೆಕ್ಟ್ರಾನಿಕ್ಸ್‌ನಲ್ಲಿ 4, ಅರ್ಥಶಾಸ್ತ್ರದಲ್ಲಿ 72, ಬ್ಯುಸಿನೆಸ್ ಸ್ಟಡೀಸ್‌ನಲ್ಲಿ 54, ಅಕೌಂಟೆನ್ಸಿಯಲ್ಲಿ 88, ಇತಿಹಾಸದಲ್ಲಿ 1, ಬೇಸಿಕ್ ಮ್ಯಾತ್ಸ್‌ನಲ್ಲಿ 42, ಸಮಾಜಶಾಸ್ತ್ರದಲ್ಲಿ 3 ವಿದ್ಯಾರ್ಥಿಗಳು 100ಕ್ಕೆ ನೂರು ಅಂಕಗಳನ್ನು ಗಳಿಸಿದ್ದಾರೆ.

ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಪೂರಕ ವಾತಾವರಣವಿದ್ದು, ಕಲಿಕೆಯೊಂದಿಗೆ ಸರ್ವತೋಮುಖ ಬೆಳವಣಿಗೆ ಹೊಂದಲು ಸಾಧ್ಯ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಳ್ವಾಸ್ ಪದವಿ ಪೂರ್ವ ಕಾಲೇಜು 99.74% ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 2658 ವಿದ್ಯಾರ್ಥಿಗಳಲ್ಲಿ 2651 ವಿದ್ಯಾರ್ಥಿಗಳು ಉತ್ತೀರ್ಣರಾಗಿ, ವಿಜ್ಞಾನ ವಿಭಾಗದಲ್ಲಿ 11 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 35 ವಿದ್ಯಾರ್ಥಿಗಳು, ಕಲಾ ವಿಭಾಗದಲ್ಲಿ ಓರ್ವ ವಿದ್ಯಾರ್ಥಿನಿ ಸೇರಿದಂತೆ ಕಾಲೇಜಿನ ಒಟ್ಟು 47 ವಿದ್ಯಾರ್ಥಿಗಳು ರಾಜ್ಯದ ಟಾಪ್ 10ರ ಒಳಗೆ ಸ್ಥಾನಗಳನ್ನು ಪಡೆಯುವ ಮೂಲಕ ಆಳ್ವಾಸ್ ಸಂಸ್ಥೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ಸಾಧನೆ ಮೆರೆಯುವಂತೆ ಮಾಡಿದ್ದಾರೆ ಎಂದರು.

Related posts

ಕರಿಮಣೇಲು ಸಂತ ಜೂಡರ ಅ.ಹಿ.ಪ್ರಾ. ಶಾಲಾ ವಾರ್ಷಿಕೋತ್ಸವ

Suddi Udaya

ಬಂದಾರು: ಆದಿಪೂಜಿತ ಸಿದ್ದಿವಿನಾಯಕ ಕನ್ನಡ ಭಕ್ತಿಗೀತೆ ಆಡಿಯೋ ಬಿಡುಗಡೆ

Suddi Udaya

ಬೆಳ್ತಂಗಡಿಯ ಇಬ್ಬರು ವಕೀಲರು ಕಾಂಗ್ರೆಸ್ ಪಕ್ಷ ಸೇರ್ಪಡೆ

Suddi Udaya

ಮಡಂತ್ಯಾರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಗ್ರಾಹಕರ ಸಭೆ

Suddi Udaya

ಉರುವಾಲು ಶ್ರೀ ವೀಘ್ನೇಶ್ವರ ಭಜನಾ ಮಂದಿರದಲ್ಲಿ 17 ನೇ‌ ವರ್ಷದ ನಗರ ಭಜನೆಯ ಮಂಗಳೋತ್ಸವ

Suddi Udaya

ಎಸ್.ಡಿ.ಎಮ್ ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!