April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆಜಿಲ್ಲಾ ಸುದ್ದಿತಾಲೂಕು ಸುದ್ದಿ

ಆರಂಬೋಡಿ: ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರ ಪರ ಬಿರ್ವೆರ್ ಕುಡ್ಲದ ಸ್ಥಾಪಕ ,ಯುವ ನಾಯಕ ಉದಯ್ ಪೂಜಾರಿ ಬಳ್ಳಾಲ್ ಬಾಗ್ ಮತಪ್ರಚಾರ

ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರ ಪರವಾಗಿ ಬಿರ್ವೆರ್ ಕುಡ್ಲ ಸಂಘಟನೆಯ ಸ್ಥಾಪಕರು, ಅಶಕ್ತರಿಗೆ ಹಲವಾರು ಸೇವೆಯನ್ನು ನೀಡಿ ಸಮಾಜಮುಖಿ ಚಿಂತನೆಯೊಂದಿಗೆ ಗುರುತಿಸಿಕೊಂಡಿರುವ ಯುವ ನಾಯಕ, ನಟ ಉದಯ್ ಪೂಜಾರಿ ಬಳ್ಳಾಲ್ ಬಾಗ್ ಆರಂಬೋಡಿ ಪರಿಸರದಲ್ಲಿ ಮತ ಪ್ರಚಾರ ಮಾಡಿದರು.

ನೂರಾರು ಬಿಜೆಪಿ ಕಾರ್ಯಕರ್ತರೊಂದಿಗೆ ತಾಲೂಕಿನ ಹಲವು ಕಡೆಗಳಲ್ಲಿ ಹರೀಶ್ ಪೂಂಜರವರ ಪರ ಮತ ಪ್ರಚಾರ ಮಾಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಪ್ರಖರ ವಾಗ್ಮಿ ಸಹನಾ ಕುಂದರ್, ಹರೀಶ್ ಪೂಂಜರವರ ಪತ್ನಿ ಡಾ.ಸ್ವೀಕೃತಾ ಪೂಂಜ, ಆರಂಬೋಡಿ ಗ್ರಾ.ಪಂ ಅಧ್ಯಕ್ಷೆ ವಿಜಯಾ, ಬಿಜೆಪಿಯ ಪ್ರಮುಖರಾದ ಸೋಮನಾಥ ಬಂಗೇರ, ಕಿರಣ್ ಕುಮಾರ್ ಮಂಜಿಲ,ರಾಜೇಶ್ ಮೂಡುಕೋಡಿ, ಅಶೋಕ್ ಒಟ್ಲ, ಪ್ರಭಾಕರ ಹುಳಿಮೇರು, ಸತೀಶ್ ಆರಂಬೋಡಿ, ಸುರೇಂದ್ರ ಹಜ್ಜಾಡಿ, ನಿತೀಶ್ ಗುಂಡೂರಿ, ರಾಜೇಶ್ ಆರಂಬೋಡಿ, ಆಶಾ ಎಸ್ ಶೆಟ್ಟಿ, ದಯಾನಂದ ದೇವಾಡಿಗ, ವಿನಿತ್ ಕೋಟ್ಯಾನ್ ಸಾವ್ಯ, ಪೃಥ್ವಿ ಬಂಗೇರ, ಉದಯ್ ನಾವೂರು ಹಾಗೂ ಬಿಜೆಪಿಯ ಕಾರ್ಯಕರ್ತರು, ಜನಪ್ರತಿನಿಧಿಗಳು, ಶಕ್ತಿಕೇಂದ್ರದ ಪ್ರಮುಖರು, ಅಭಿಮಾನಿಗಳು ಉಪಸ್ಥಿತರಿದ್ದರು.

Related posts

ಎಸ್.ಡಿ.ಎಂ ಕಾಲೇಜಿನಲ್ಲಿ ಕಲಾನುಸಂಧಾನ ಶಿಬಿರ

Suddi Udaya

ಮೂಡಾದ ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ತನಿಖೆ ಎದುರಿಸಬೇಕಾಗಿ ಬಂದಿರುವುದರಿಂದ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಸಿದ್ಧರಾಮಯ್ಯ ರಿಗೆ ಯಾವುದೇ ನೈತಿಕತೆ ಇಲ್ಲ: ವಿ.ಪ. ಸದಸ್ಯ ಪ್ರತಾಪಸಿಂಹ ನಾಯಕ್

Suddi Udaya

ಲಾಯಿಲ ವಲಯದ ಭಜನಾ ಪರಿಷತ್ ಅಧ್ಯಕ್ಷರಾಗಿ ಜನಾರ್ಧನ ಆಯ್ಕೆ

Suddi Udaya

ರಾಜ್ಯೋತ್ಸವ ಪ್ರಶಸ್ತಿಗೆ ಸಹಕರಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರಿಗೆ ದಯಾ ವಿಶೇಷ ಶಾಲೆಯ ವತಿಯಿಂದ ಗೌರವಾರ್ಪಣೆ

Suddi Udaya

ಎಸ್‌.ಡಿ.ಎಂ ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ಮತ್ತು ಸಂಶೋಧನಾ ವಿಭಾಗದಿಂದ ಅಗ್ನಿ ಸುರಕ್ಷತೆ, ಆರೋಗ್ಯ ಸುರಕ್ಷತೆ, ಹಾಗೂ ವಿಪತ್ತು ನಿರ್ವಹಣೆ ಕುರಿತು ಜಾಗೃತಿ ತರಬೇತಿ

Suddi Udaya

ಹೊಸಂಗಡಿ: ಪೆರಿಂಜೆ ನಿವಾಸಿ ಸುಂದರ ನೇಣು ಬಿಗಿದು ಆತ್ಮಹತ್ಯೆ

Suddi Udaya
error: Content is protected !!