ಉಜಿರೆ : ಜಮ್ಮು-ಕಾಶ್ಮೀರ ಸೇರಿದಂತೆ ದೇಶದ ವಿವಿಧೆಡೆ ಪತಿ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಯಾವುದೇ ಚಿಂತೆಗೊಳಗಾಗದೆ ಪತಿಯ ಕಾರ್ಯವನ್ನು ಪ್ರೋತ್ಸಾಹಿಸಿ, ಸಮಾಜದಲ್ಲಿ ಆದರ್ಶಯುತವಾಗಿ ಜೀವನ ಸಾಗಿಸಿದ ಉಜಿರೆಯ ನಿವೃತ್ತ ಸೇನಾನಿ ಗೋಪಾಲಕೃಷ್ಣ ಕಾಂಚೋಡು ಇವರ ಪತ್ನಿ ಸುಲೋಚನಾ ಇವರು ಕರ್ನಾಟಕ ಬುಕ್ ಆಫ್ ರೆಕಾರ್ಡ್ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮೇ.8ರಂದು ಬೆಂಗಳೂರಿನ ಎಸ್‌ಎಸ್‌ಬಿ ತರಬೇತಿ ಅಕಾಡೆಮಿಯಲ್ಲಿ ನಡೆಯುವ ವಿಶ್ವ ತಾಯಂದಿರ ದಿನದಂದು ನಾರಿ ಶಕ್ತಿ ಕಾರ್ಯಕ್ರಮಲ್ಲಿ ದಕ್ಷಿಣ ಭಾರತದ ಸೇನಾಪಡೆಯ ಪ್ರಧಾನ ಕಮಾಂಡರ್ಗಳ ಸಮಕ್ಷಮ ಸುಲೋಚನಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ತನ್ನ ಪತಿ ಜಮ್ಮು ಕಾಶ್ಮೀರ ಸೇರಿದಂತೆ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಯಾವುದೇ ಚಿಂತೆಗೆ ಒಳಗಾಗದೆ ಪತಿಯನ್ನು ಪ್ರೋತ್ಸಾಹಿಸುತ್ತಾ ಒಬ್ಬ ಮಹಿಳೆಯಾಗಿ ವೀರ ನಾರಿಯಾಗಿ,ಮಕ್ಕಳಿಗೆ ವೀರ ಮಾತೆಯಾಗಿ, ಉತ್ತಮ ಸಂಸ್ಕಾರಗಳನ್ನು ನೀಡಿ ಒಳ್ಳೆಯ ವಿದ್ಯಾವಂತ ಸಂಸ್ಕಾರಯುತ ಪ್ರಜೆಗಳನ್ನಾಗಿಸುವಲ್ಲಿ, ಒಬ್ಬ ಮಹಿಳೆಯಾಗಿ ಸಮಾಜಕ್ಕೆ ಆದರ್ಶಪ್ರಾಯರಾಗಿ ಬಾಳಿರುವುದನ್ನು ಗುರುತಿಸಿ ಪ್ರತಿಷ್ಟಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮೇ 8ರಂದು ಬೆಂಗಳೂರು SSB ತರಬೇತಿ ಅಕಾಡೆಮಿಯಲ್ಲಿದ, ಭಾರತದ ಸೇನಾಪಡೆಯ ಪ್ರಧಾನ ಕಮಾಂಡರ್ ಗಳ ಸಮಕ್ಷಮ ಗೌರವಿಸಲ್ಪಡುವವರಿದ್ದಾರೆ