ತೋಟತ್ತಾಡಿ:ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವರ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವವು ಮೇ 22ರ ತನಕ ನಡೆಯಲಿದ್ದು ,ಎರಡನೇ ದಿನವಾದ ಇಂದು ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.
ಧಾರ್ಮಿಕ ಸಭಾ ಕಾರ್ಯಕ್ರಮದ ಉಧ್ಘಾಟನೆಯನ್ನು ಶ್ರೀ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲರು ಅಳದಂಗಡಿ ಅರಮನೆ ವಹಿಸಿದ್ದರು, ಕೇಶವ ಬಂಗೆರ ಉಪನ್ಯಾಸಕರು ಶ್ರೀ ಗೋಕರ್ಣನಾಥ ಕಾಲೇಜು ಕುದ್ರೋಳಿ ಮಂಗಳೂರು ಧಾರ್ಮಿಕ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ರಾಮಕೃಷ್ಣ ಇರ್ವತ್ರಾಯ ಅನುವಂಶಿಕ ಆಡಳಿತ ಮೋಕ್ತೆಸರರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಬೆಂದ್ರಾಳ,ಕಾರ್ಯಕ್ರಮಕ್ಕೆ ಶಭಹಾರೈಸಿದರು,.
ಶ್ರೀ ಹರೀಶ್ ರಾವ್ ಮುಂಡ್ರುಪ್ಪಾಡಿ ಅಧ್ಯಕ್ಷರು ಶ್ರೀ ಮಹಾಗಣಪತಿ ದೇವಸ್ಥಾನ ಸೌತಡ್ಕ,ಶ್ರೀ ವೆಂಕಟೇಶ್ವರ ಭಟ್ ಅಧ್ಯಕ್ಷರು ಸನ್ಯಾಸಿಕಟ್ಟೆ ಶ್ರೀ ಪರಶುರಾಮ ದೇವಸ್ಥಾನ ಮುಂಡಾಜೆ, ಕೆ ವಿ ಪ್ರಸಾದ್ ಅಧ್ಯಕ್ಷರು ಗ್ರಾಮ ಪಂಚಾಯತ್ ಚಾರ್ಮಾಡಿ, ರಮೇಶ್ ಪ್ರಭು ಉಜಿರೆ ಪ್ರಗತಿಪರ ಕೃಷಿಕರು, ಶ್ರೀಮತಿ ಸುರೇಖಾ ಪ್ರಸಾದ್ ಮಡಿಯೂರು.ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಚಾರ್ಮಾಡಿ, ಅವಿನಾಶ್ ಮೂರ್ಜೆ ಸದಸ್ಯರು ಗ್ರಾಮ ಪಂಚಾಯತ್ ಚಾರ್ಮಾಡಿ, ಶ್ರೀಮತಿ ಶಶಿಕಲಾ ಸದಸ್ಯರು ಗ್ರಾಮ ಪಂಚಾಯತ್ ಚಾರ್ಮಾಡಿ, ಶ್ರೀಮತಿ ಶಾರದಾ ಸದಸ್ಯರು ಗ್ರಾಮ ಪಂಚಾಯತ್ ಚಾರ್ಮಾಡಿ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ಜೈನ್ , ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಮಲಾಕ್ಷ ಪೂಜಾರಿ ಪಾದೆ.,ವ್ವವಸ್ಥಾಪಣಾ ಸಮಿತಿ ಸದಸ್ಯರಾದ ಮೋನಪ್ಪ ಎಂ ಮುಂಡೈಲ್, ಶ್ರೀಮತಿ ಮೋಹಿನಿ ಓಬಯ್ಯ ಗೌಡ, ಸೀತಾರಾಮ ಸಾಲಿಯಾನ್ ಕಜೆ, ಮೋಹನ್ ಗೌಡ ಬಾರೆ,ಅರ್ಚಕರಾದ ದಿವಾಕರ ಭಟ್ ಮೊದಲಾದವರಿದ್ಧರು.
ಸಂಪತ್ ಕುಮಾರ್ ಜೈನ್ ಉಪನ್ಯಾಸಕರು ಶ್ರೀ ಧ ಮಂ ಪಾಲಿಟೆಕ್ನಿಕ್, ಉಜಿರೆ ನಿರೂಪಿಸಿ, ಪಿ ಎಚ್ ಈಶ್ವರ್ ಗೌಡ ರಕ್ಷಾ ಹೊಸೊಕ್ಲು.ವಂದಿಸಿದರು..