27.1 C
ಪುತ್ತೂರು, ಬೆಳ್ತಂಗಡಿ
September 27, 2026
ತಾಲೂಕು ಸುದ್ದಿಪ್ರಮುಖ ಸುದ್ದಿ

ಮಹಾತ್ಮ ಗಾಂಧಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ಪುರಸ್ಕೃತ ರಾಜೇಶ್ ಪೈ ಅವರಿಗೆ ಉಜಿರೆ ವರ್ತಕರ ಸಂಘದಿಂದ ಗೌರವ ಸನ್ಮಾನ-ಉಜಿರೆ ನನ್ನನ್ನು ಬೆಳೆಸಿದ, ಪೋಷಿಸಿದ ಊರು: ಉದ್ಯಮಿ ರಾಜೇಶ್ ಪೈ

ಉಜಿರೆ: ಉದ್ಯಮ ಮತ್ತು ಸಮಾಜ ಸೇವೆಗಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ಪುರಸ್ಕೃತ ರಾಜೇಶ್ ಪೈ ಅವರಿಗೆ ಉಜಿರೆ ವರ್ತಕರ ಸಂಘದಿಂದ ಗೌರವ ಸನ್ಮಾನವು ಓಶಿಯನ್ ಪರ್ಲ್ ಹೋಟೇಲ್ ನಲ್ಲಿ ಮೇ 11ರಂದು ನಡೆಯಿತು.

ವರ್ತಕರ ಸಂಘದ ಅಧ್ಯಕ್ಷ ಪ್ರಸಾದ್ ಬಿ‌ಎಸ್ ಮಾತನಾಡಿ ಜಿಲ್ಲೆಯ ಪ್ರಸಿದ್ದ ಉದ್ಯಮಿ ರಾಜೇಶ್ ಪೈ ಅವರು ಕಳೆದ ಮೂರುವರೆ ದಶಕಗಳಿಂದ ಉದ್ಯಮ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಮಾಜಕ್ಕೆ ಶಕ್ತಿಯಾಗಿದ್ದಾರೆ ಎಂದರು.

ವರ್ತಕರ ಸಂಘದ ಗೌರವ ಸ್ವೀಕರಿಸಿ ಮಾತನಾಡಿದ ರಾಜೇಶ್ ಪೈ ಅವರು ಉಜಿರೆಯಲ್ಲಿ ಸುಮಾರು 900ಕ್ಕೂ ಹೆಚ್ಚು ಅಂಗಡಿಗಳಿವೆ. ಉಜಿರೆ ನನ್ನನ್ನು ಬೆಳೆಸಿದ ಊರು. ಸಣ್ಣ ಪ್ರಾಯದಲ್ಲೇ ತಂದೆಯವರೊಂದಿಗೆ ನಾನು ಅಂಗಡಿಗಳಲ್ಲಿ ವ್ಯಾಪರ ಮಾಡಲು ಪ್ರಾರಂಬಿಸಿದೆ.ಈ ಪ್ರಶಸ್ತಿಯನ್ನು ಉಜಿರೆ ಊರಿಗೆ, ಶ್ರೀ ಮಂಜುನಾಥ ಸ್ವಾಮಿ, ಶ್ರೀ ಜನಾರ್ದನ ಸ್ವಾಮಿಗೆ ಹಾಗೂ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಅರ್ಪಿಸುತ್ತೇನೆ. ಬೆಳ್ತಂಗಡಿ ತಾಲೂಕಿನಲ್ಲಿ ಅತೀ ಬೇಗ ಬೆಳೆದ ನಗರ ಉಜಿರೆ. ಶಿಕ್ಷಣ ಕ್ಷೇತ್ರಗಳು ಬೆಳೆದಿದೆ. ಎಲ್ಲರಿಗೂ ವ್ಯಾಪರ ಇದೆ. ಆದರೆ ಉಜಿರೆಯ ಇವತ್ತಿನ ಪರಿಸ್ಥಿತಿ ನೋಡುವಾಗ ಬೇಜಾರಾಗುತ್ತದೆ. ಉಜಿರೆ ಲವಲವಿಕೆಯಿಂದ ಇರಬೇಕು. ಸದಾ ಸಹಕಾ ಸಹಬಾಳ್ವೆಯಿಂದ ಇರುವಂತಾಗಬೇಕು.ವರ್ತಕರ ಸಂಘದ ಜೊತೆ ಸದಾ ಇರುತ್ತೇನೆ ಎಂದರು.

ವರ್ತಕರಾದ ರವಿ ಕುಮಾರ್ ಬರಮೇಲು ಮಾತನಾಡಿ ರಾಜೇಶ್ ಪೈ ಅವರಿಗೆ ಇಂತಹ ಪ್ರಶಸ್ತಿ ಬಂದಿರುವುದು ನಮಗೆ ತುಂಬಾ ಸಂತೋಷವಾಗಿದೆ. ಸರಳ, ಸಜ್ಜನಿಕೆಯ ವ್ಯಕ್ತಿತ್ವ ರಾಜೇಶ್ ಅವರದು. ‌ಯಾವುದೇ ಕಾರ್ಯಕ್ರಮಕ್ಕೂ ಪೂರ್ಣ ಪ್ರಮಾಣದ ಸಹಕಾರ ನೀಡುತ್ತಿದ್ದರು ಎಂದರು.

ಹಳ್ಳಿಮನೆ ಪ್ರವೀಣ್ ಫೆರ್ನಾಂಡೀಸ್ ಅವರು ಮಾತನಾಡಿ 2013ರಲ್ಲಿ ಉಜಿರೆಯಲ್ಲಿ ಉದ್ಯಮ ಮಾಡುವಾಗ,ಕಷ್ಟದ ಸಮಯದಲ್ಲಿ ನನಗೆ ತುಂಬಾ ಸಹಕಾರ ನೀಡಿದವರು ರಾಜೇಶ್ ಪೈ ಅವರು ಎಂದರು.

ವೇದಿಕೆಯಲ್ಲಿ ವರ್ತಕರ ಸಂಘದ ನಿಕಟಪೂರ್ವಾಧ್ಯಕ್ಷ ಅರವಿಂದ್ ಕಾರಂತ್, ಪ್ರ‌.ಕಾರ್ಯದರ್ಶಿ ವಿಶ್ವನಾಥ ಭಂಡಾರಿ, ಕೋಶಾಧಿಕಾರಿ ಅಬೂಬಕ್ಕರ್ ಉಪಸ್ಥಿತರಿದ್ದರು.

ರಾಜೇಶ್ ಪೈ ಅವರನ್ನು ವರ್ತಕರು ಫಲ ಪುಷ್ಪ ನೀಡಿ, ಹಾರ, ಶಾಲು ಹಾಕಿ, ಮೈಸೂರು ಪೇಟ ಧರಿಸಿ, ಹೂ ಗುಚ್ಚ ನೀಡಿ ಸನ್ಮಾನಿಸಿ, ಗೌರವಿಸಿದರು.

Related posts

ಶಿಬರಾಜೆ-ಪರಪ್ಪು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯಿಂದ ಅರ್ಧ ಏಕಾಹ ಭಜನಾ ಕಾರ್ಯಕ್ರಮ: ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕಳಸ ನದಿಯಲ್ಲಿ ಮುಳುಗಿದ ಯುವಕನ ದೇಹ ಪತ್ತೆ; ತುರ್ತು ಕರೆಗೆ ಸ್ಪಂದಿಸಿದ ಉಜಿರೆ-ಬೆಳಾಲು ಶೌರ್ಯ ಘಟಕದ ಸ್ವಯಂಸೇವಕರು

Suddi Udaya

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತಪ್ಪಿತಸ್ಥರಿಗೆ ಶಿಕ್ಷೆಯಾಗುಂತೆ ಧರ್ಮಸ್ಥಳದ ಗ್ರಾಮಸ್ಥರು, ವರ್ತಕರು, ನೌಕರ ವೃಂದದವರಿಂದ ವಿಶೇಷ ಪ್ರಾರ್ಥನೆ

Suddi Udaya

ಮೇಲಂತಬೆಟ್ಟು ಗ್ರಾ.ಪಂ. ನಲ್ಲಿ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆ

Suddi Udaya

ಧರ್ಮಸ್ಥಳ: ಹೂತ ಮೃತದೇಹಗಳ ಅವಶೇಷ ಹೊರತೆಗೆಯುವ ಕಾರ್ಯ ; ಮೊದಲ ಸ್ಥಳದಲ್ಲಿ ಸಿಗದ ಅವಶೇಷಗಳು; ಮುಂದೆ ಜೆಸಿಬಿಯಿಂದ ಕಾರ್ಯಾಚರಣೆ -ಅನುಚೇತ್ ಹೇಳಿಕೆ

Suddi Udaya

ತೆಕ್ಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ “ಸೌಭಾಗ್ಯ” ಲೋಕಾರ್ಪಣೆ

Suddi Udaya
error: Content is protected !!