September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿ

ಪಡಂಗಡಿ: ಕಾರು ಡಿಕ್ಕಿ ಬೈಕ್ ಸವಾರನಿಗೆ ಗಂಭೀರ ಗಾಯ: ಪಡಂಗಡಿ ಗ್ರಾಮದ ಪೊಯ್ಯಗುಡ್ಡೆ ಎಂಬಲ್ಲಿ ಘಟನೆ

ಬೆಳ್ತಂಗಡಿ: ಪಡಂಗಡಿ ಗ್ರಾಮದ ಪೊಯ್ಯಗುಡ್ಡೆ ಎಂಬಲ್ಲಿ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮೇ. 23 ಸಂಜೆ ನಡೆದಿದೆ. ಮೇ 22 ರಂದು ಪಡಂಗಡಿ ಪಲ್ತಿಯಾರು ಮನೆ ನಿವಾಸಿ ಸದಾನಂದ ಶೆಟ್ಟಿ (53ವ) ಅವರು ತಮ್ಮ ದ್ವಿ ಚಕ್ರ ವಾಹನದಲ್ಲಿ ಗುರುವಾಯನಕೆರೆ ಕಡೆಯಿಂದ ವೇಣೂರು ಕಡೆಗೆ ಹೋಗುತ್ತಿರುವ ಸಮಯ ಬೆಳ್ತಂಗಡಿ ತಾಲೂಕು ಪಡಂಗಡಿ ಗ್ರಾಮದ ಪೊಯ್ಯಗುಡ್ಡೆ ಎಂಬಲ್ಲಿಗೆ ತಲುಪುತ್ತಿದ್ದಂತೆ ವೇಣೂರು ಕಡೆಯಿಂದ ಗುರುವಾಯನಕೆರೆ ಕಡೆಗೆ ನಿತೇಶ್ ಎಂಬವರು ದುಡುಕುತನದಿಂದ ಕಾರನ್ನು ಚಲಾಯಿಸಿಕೊಂಡು ಬಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದರೆನ್ನಲಾಗಿದೆ.

ಈ ಸಂದರ್ಭ ದ್ವಿ ಚಕ್ರ ವಾಹನದೊಂದಿಗೆ ರಸ್ತೆಗೆ ಬಿದ್ದು ಬೆನ್ನಿಗೆ, ಎದೆಗೆ, ಎಡ ಕೈಯ ಹೆಬ್ಬೆರಳಿಗೆ ಗುದ್ದಿದ ಗಾಯಗೊಂಡ ಸದಾನಂದ ಚಿಕಿತ್ಸೆಯವರನ್ನು ಮಂಗಳೂರು ಯುನಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ .

Related posts

ಪೆರ್ಲ -ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಪುನರ್ ಪ್ರತಿಷ್ಟಾಬಂಧ ಬ್ರಹ್ಮಕಲಶೋತ್ಸವಕ್ಕೆ ಮಾಜಿ ಶಾಸಕರಾದ ಪ್ರಭಾಕರ ಬಂಗೇರ ಭೇಟಿ

Suddi Udaya

ಅಳದಂಗಡಿ ಬಂಟರ ವಲಯ ಸಮಿತಿಯಿಂದ ‘ಬಂಟೆರ್ನ ಆಟಿದ-ಕೂಟ’

Suddi Udaya

ಮನೆಯ ತೋಟದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ರೂ.1.70 ಲಕ್ಷ ಮೌಲ್ಯದ ಮರಳು ವಶ

Suddi Udaya

ಬುರುಡೆ ಚಿನ್ನಯ್ಯ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು

Suddi Udaya

ಉಜಿರೆ ಲಕ್ಷ್ಮಿ ಗ್ರೂಪ್ ಮಾಲಕ ಮೋಹನ್ ಕುಮಾರ್ ರವರಿಂದ ಯೋಗಾಸನ ಸ್ಪರ್ಧೆಗೆ ವಿದ್ಯಾರ್ಥಿಗಳಿಗೆ ಯೂನಿಪಾರ್ಮ್ ವಿತರಣೆ

Suddi Udaya

ಲಾಯಿಲ: ಹರೀಶ್ ಪೂಂಜ ಅಭಿನಂದನಾ ಸಮಿತಿಯಿಂದ ಶಾಸಕ ಹರೀಶ್ ಪೂಂಜರಿಗೆ ಸನ್ಮಾನ ಕಾರ್ಯಕ್ರಮ ‘ಪ್ರಣಾಮಂ

Suddi Udaya
error: Content is protected !!