ಉಜಿರೆ : ಭಾರತದ ತೆರಿಗೆ ಕಾಯ್ದೆ ಬಹಳಷ್ಟು ಉತ್ತಮವಾಗಿದ್ದು, ನಿಯಮಬದ್ಧ ತೆರಿಗೆ ಪಾವತಿಯಿಂದ ಸದೃಢ ಹಾಗೂ ಸಮತೋಲನ ಆರ್ಥಿಕ ಅಭಿವೃದ್ಧಿ ಸಾಧ್ಯವೆಂದು ಬೆಳ್ತಂಗಡಿಯ ಚಾರ್ಟರ್ಡ್ ಅಕೌಂಟೆಂಟ್ ಶ್ರೀಮತಿ ಗಾಯತ್ರಿ ರಾವ್ ತಿಳಿಸಿದರು. ಅವರು ಇತ್ತೀಚೆಗೆ ಶ್ರೀ.ಧ.ಮ ಕಾಲೇಜಿನ ಅರ್ಥಶಾಸ್ತ್ರ ಹಾಗೂ ಗ್ರಾಮೀಣ ಅಭಿವೃದ್ಧಿ ವಿಭಾಗ ಅಯೋಜಿಸಿದ ‘ತೆರಿಗೆಯ ಮೂಲಭೂತ ಅಂಶಗಳು’ ಎಂಬ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತಿದ್ದರು.
“ಚಾಣಕ್ಯ ನೀತಿಯಲ್ಲಿರುವ ಹಾಗೆ ತೆರಿಗೆ ಎಂದರೆ ಜೇನು ಹೂವಿನಿಂದ ಮಕರಂದವನ್ನು ಹೀರಿ ಹೇಗೆ ಜೇನು ತುಪ್ಪವನ್ನು ಕೊಡುತ್ತದೊ ಅದೇ ರೀತಿ ಸರಕಾರವು ಜನರಿಂದ ತೆರಿಗೆಯನ್ನು ಸಂಗ್ರಹಿಸಿ ಜನರಿಗೆ ಉಪಯೋಗವಾಗುವಂತ ಕೆಲಸಗಳನ್ನು ಮಾಡಬೇಕು” ಎಂದು ಹೇಳಿದರು.
ತೆರಿಗೆ ಪಾವತಿಯ ಬಗ್ಗೆ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ತಿಳಿದುಕೊಂಡು ಸಮಯಕ್ಕೆ ಸರಿಯಾಗಿ ಪಾವತಿಸಿದರೆ ಆರ್ಥಿಕತೆ ಬಲಗೊಳ್ಳುವುದಲ್ಲದೆ ಸಾಮಾಜಿಕ ನ್ಯಾಯವನ್ನು ಕೂಡ ಖಚಿತಪಡಿಸಿಕೊಳ್ಳಲು ಸಾಧ್ಯ ಎಂದು ಅವರು ಹೇಳಿದರು.
ವಿಭಾಗ ವರಿಷ್ಠ ಗಣರಾಜ್ ಕೆ, ಪ್ರಧ್ಯಾಪಕರಾದ ಡಾ.ಮಹೇಶ್ ಕುಮಾರ್ ಶೆಟ್ಟಿ ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅನುಷಾ ಜಿ ಶೆಟ್ಟಿ ಸ್ವಾಗತಿಸಿ, ಪೂರ್ವಿತ ವಂದಿಸಿದರು