ಉಜಿರೆ: ವೃಷಭ ಮಾಸದ 10 ನೇ ದಿನ ಪತ್ತನಾಜೆ (ಹತ್ತನಾವಧಿ) ಪ್ರಯುಕ್ತ ಮೇ 25 ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರ ಉಪಸ್ಥಿತಿಯಲ್ಲಿ ಅರ್ಚಕ ವೇದಮೂರ್ತಿ ರಾಮಚಂದ್ರ ಹೊಳ್ಳರ ನೇತೃತ್ವದಲ್ಲಿ ಶ್ರೀ ಜನಾರ್ದನ ಸ್ವಾಮಿ ಹಾಗು ಪರಿವಾರ ದೇವರ ಸನ್ನಿಧಿಯಲ್ಲಿ ರಂಗಪೂಜೆ, ಉತ್ಸವ ಬಲಿ ನಡೆದು ಉತ್ಸವ ಮೂರ್ತಿ ಗರ್ಭಗುಡಿ ಪ್ರವೇಶಿಸಲಾಯಿತು. ಇದರೊಂದಿಗೆ ಪ್ರಸಕ್ತ ಸಾಲಿನ ವಿಶೇಷ ಸೇವೆಗಳು ಹಾಗು ಉತ್ಸವ ಸಮಾಪನಗೊಂಡಿತು.
ಮುಂದಿನ ಕಾರ್ತೀಕ ಮಾಸದ ದೀಪಾವಳಿಯೊಂದಿಗೆ ಮತ್ತೆ ವಿಶೇಷ ಸೇವೆಗಳು, ಉತ್ಸವಗಳು ಪ್ರಾರಂಭಗೊಳ್ಳಲಿವೆ. ಕ್ಷೇತ್ರದ ನಾಳ್ವಿಕೆಯವರಾದ ಅನಂತರಾಮ ಮೂಡಣ್ಣಾಯ , ಜಯರಾಮ ಪಡ್ಡಿಲ್ಲಾಯ, ಶಿವರಾಮ ಬಿ.ಕೆ., ಊರ ಭಕ್ತಾದಿಗಳು,ದೇವಸ್ಥಾನದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.