25.7 C
ಪುತ್ತೂರು, ಬೆಳ್ತಂಗಡಿ
May 17, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ, ಮಾನಹಾನಿಕಾರಕ ಸುದ್ದಿ ಹರಡಿ ತೇಜೋವಧೆ ಆರೋಪ:ಶೇಖರ್ ಲಾಯಿಲ ವಿರುದ್ಧ ಬ್ಲಾಕ್ ಕಾಂಗ್ರೆಸ್ ಉಭಯ ಘಟಕಗಳ ಅಧ್ಯಕ್ಷರು ಹಾಗೂ ಯೂತ್‌ಕಾಂಗ್ರೆಸ್ ಜಿಲ್ಲಾ ಸಮಿತಿ ಕಾರ್ಯದರ್ಶಿಯಿಂದ ಪೊಲೀಸರಿಗೆ ದೂರು

ಬೆಳ್ತಂಗಡಿ: ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಮತ್ತು ಮಾನಹಾನಿಕಾರಕ ಸುದ್ದಿಗಳನ್ನು ಹರಡಿ ತೇಜೋವಧೆ ಮಾಡುತ್ತಿರುವ ಶೇಖರ್ ಲಾಯಿಲ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಾಂಗ್ರೆಸ್ ಬ್ಲಾಕ್ ಸಮಿತಿ (ನಗರ) ಅಧ್ಯಕ್ಷ ಕೆ. ಶೈಲೇಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಸಮಿತಿ (ಗ್ರಾಮೀಣ) ಅಧ್ಯಕ್ಷ ರಂಜನ್ ಜಿ.ಗೌಡ ಮತ್ತು ಯೂತ್ ಕಾಂಗ್ರೆಸ್ ಜಿಲ್ಲಾ ಸಮಿತಿ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್‌ರವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಶೈಲೇಶ್ ಕುಮಾರ್ ದೂರು:
ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್ ಅವರು ಪೊಲೀಸ್ ಠಾಣೆಗೆ ದೂರು ನೀಡಿ, ಆರೋಪಿಯು ನನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯ ಹರಡಿದ ಬಗ್ಗೆ ನಾನು ಮೇ 28 ರಂದು ಬೆಳಿಗ್ಗೆ 11.30 ಗಂಟೆಗೆ ನನ್ನ ಮನೆಯಲ್ಲಿದ್ದಾಗ ನನ್ನ ಪಕ್ಷದ ಕಾರ್ಯಕರ್ತರು ಕರೆಮಾಡಿ ನನಗೆ ಸದ್ರಿ ಸುದ್ದಿಯ ಬಗ್ಗೆ ತಿಳಿಸಿದಾಗ ಹಾಗೂ ಸದ್ರಿ ಸುದ್ದಿಯನ್ನು “ಡಿ.ಸಿ.ಸಿ. ಕೊಕ್ಕಡ” ನಲ್ಲಿ ನೋಡಿದಾಗ ಆಘಾತವಾಯಿತು. ಮತ್ತು ನಾನು ತುಂಬಾ ಧೈರ್ಯ ಕುಂದಿದೆ ಆ ನಂತರ ನನಗೆ ಸುಮಾರು 25-30 ಜನ ಕಾರ್ಯಕರ್ತರು ಕರೆ ಮಾಡಿದಾಗ ನಾನು ಬಹಳಷ್ಟು ಮಾನ ಹಿಂಸೆಗೊಳಗಾಗಿ, ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿರುತ್ತೇನೆ. ಆರೋಪಿಯ ಮೇಲ್ಕಾಣಿಸಿದ ಕೃತ್ಯದಿಂದಾಗಿ ನನಗೆ ನನ್ನ ವ್ಯವಹಾರದಲ್ಲಿ ಕೂಡ ನಷ್ಟ ಉಂಟಾಗಿದ್ದ ಮತ್ತು ನನ್ನ ಮಾನಸಿಕ ಸ್ಥಿತಿಯು ಹದಗೆಟ್ಟಿದ್ದು, ಆತನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರ ಸುಳ್ಳು ಸುದ್ದಿ ಪ್ರಕಟಿಸಿದ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಶೈಲೇಶ್ ಕುಮಾರ್ ದೂರಿನಲ್ಲಿ ಒತ್ತಾಯಿಸಿದ್ದಾರೆ.


ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ರಂಜನ್ ಗೌಡರಿಂದ ದೂರು:
ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ರಂಜನ್ ಗೌಡ ಅವರು ಪೊಲೀಸರಿಗೆ ದೂರು ನೀಡಿ, ನಾನು ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷನಾಗಿ ಕಳೆದ ಎರಡೂವರೆ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ಆರೋಪಿಯು ನನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಹರಡಿದ ಬಗ್ಗೆ ಮೇ 29 ರಂದು ಬೆಳಿಗ್ಗೆ 10 ಗಂಟೆಗೆ ನನ್ನ ಮನೆಯಲ್ಲಿದ್ದಾಗ ನನ್ನ ಪಕ್ಷದ ಕಾರ್ಯಕರ್ತರು ಕರೆಮಾಡಿ ನನಗೆ ಸದ್ರಿ ಸುದ್ದಿಯ ಬಗ್ಗೆ ತಿಳಿಸಿದಾಗ ಹಾಗೂ ಸದ್ರಿ ಸುದ್ದಿಯನ್ನು“ಡಿ.ಸಿ.ಸಿ. ಕೊಕ್ಕಡ” ನಲ್ಲಿ ನೋಡಿದಾಗ ಆಘಾತವಾಯಿತು. ಮತ್ತು ನಾನು ತುಂಬಾ ಧೈರ್ಯ ಕುಂದಿದೆನು. ಆ ನಂತರ ನನಗೆ ಸುಮಾರು 25-30 ಜನ ಕಾರ್ಯಕರ್ತರು ಕರೆ ಮಾಡಿದಾಗ ನಾನು ಬಹಳಷ್ಟು ಮಾನಸಿಕ ಹಿಂಸೆಗೊಳಗಾಗಿ, ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿರುತ್ತೇನೆ. ಆರೋಪಿಯ ಮೇಲ್ಕಾಣಿಸಿದ ಕೃತ್ಯದಿಂದಾಗಿ ನನಗೆ ನನ್ನ ವ್ಯವಹಾರದಲ್ಲಿ ಕೂಡ ನಷ್ಟ ಉಂಟಾಗಿದ್ದ ಮತ್ತು ನನ್ನ ಮಾನಸಿಕ ಸ್ಥಿತಿಯು ಹದಗೆಟ್ಟಿದ್ದು, ಆತನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರ ಸುಳ್ಳು ಸುದ್ದಿ ಪ್ರಕಟಿಸಿದ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಶೈಲೇಶ್ ಕುಮಾರ್ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಯೂತ್ ಕಾಂಗ್ರೆಸ್ ಜಿಲ್ಲಾ ಸಮಿತಿ ಕಾರ್ಯದರ್ಶಿ
ಅಭಿನಂದನ್ ಹರೀಶ್ ಕುಮಾರ್‌ರಿಂದ ದೂರು:

ಯೂತ್ ಕಾಂಗ್ರೆಸ್ ಜಿಲ್ಲಾ ಸಮಿತಿ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್ ಅವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿ, ನಾನು ಕಳೆದ ಎರಡೂವರೆ ವರ್ಷಗಳಿಂದ ಕಾಂಗ್ರೆಸ್ ಜಿಲ್ಲಾ ಸಮಿತಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಆರೋಪಿಯು ನನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಹರಡಿದ ಬಗ್ಗೆ ನಾನು ಮೇ 28 ರಂದು ಮಧ್ಯಾಹ್ನ 1.30 ಗಂಟೆಗೆ ನನ್ನ ಮನೆಯಲ್ಲಿದ್ದಾಗ ನನ್ನ ಪಕ್ಷದ ಕಾರ್ಯಕರ್ತರು ಕರೆಮಾಡಿ ನನಗೆ ಸದ್ರಿ ಸುದ್ದಿಯ ಬಗ್ಗೆ ತಿಳಿಸಿದಾಗ ಹಾಗೂ ಸದ್ರಿ ಸುದ್ದಿಯನ್ನು “ಡಿ.ಸಿ.ಸಿ. ಕೊಕ್ಕಡ” ನಲ್ಲಿ ನೋಡಿದಾಗ ಆಘಾತವಾಯಿತು. ಮತ್ತು ನಾನು ತುಂಬಾ ಧೈರ್ಯ ಕುಂದಿದೆನು. ಆ ನಂತರ ನನಗೆ ಸುಮಾರು 25-30 ಜನ ಕಾರ್ಯಕರ್ತರು ಕರೆ ಮಾಡಿದಾಗ ನಾನು ಬಹಳಷ್ಟು ಮಾನಸಿಕಗೊಳಗಾಗಿ, ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿರುತ್ತೇನೆ. ಆರೋಪಿಯ ಮೇಲ್ಕಾಣಿಸಿದ ಕೃತ್ಯದಿಂದಾಗಿ ನನಗೆ ನನ್ನ ವ್ಯವಹಾರದಲ್ಲಿ ಕೂಡ ನಷ್ಟ ಉಂಟಾಗಿದ್ದ ಮತ್ತು ನನ್ನ ಮಾನಸಿಕ ಸ್ಥಿತಿಯು ಹದಗೆಟ್ಟಿದ್ದು, ಆತನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರ ಸುಳ್ಳು ಸುದ್ದಿ ಪ್ರಕಟಿಸಿದ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಶೈಲೇಶ್ ಕುಮಾರ್ ದೂರಿನಲ್ಲಿ ಒತ್ತಾಯಿಸಿದ್ದಾರೆ.

Related posts

ಧರ್ಮಸಂರಕ್ಷಣಾ ಯಾತ್ರೆಗೆ ಬೆಂಬಲ ಸೂಚಿಸಿ ಅಳವಡಿಸಲಾಗಿದ್ದ ಬ್ಯಾನರ್ ಪಕ್ಕದಲ್ಲೇ ಸೌಹಾರ್ದಕ್ಕೆ ಬಾಧಕವಾಗುವಂತಹ ಬರವಣೆಗೆಗಳನ್ನು ಹೊಂದಿರುವ ಬ್ಯಾನರ್ ಅಳವಡಿಕೆ: ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಆರು ಮಂದಿಯ ಮೇಲೆ ಪ್ರಕರಣ ದಾಖಲು

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ಬಕ್ರೀದ್ ಹಬ್ಬ ಆಚರಣೆ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕಮೋಡ್ ವೀಲ್‌ಚೇರ್ ವಿತರಣೆ

Suddi Udaya

5, 8, 9 ಮತ್ತು 11ನೇ ತರಗತಿಗೆ ರಾಜ್ಯಮಟ್ಟದ ಬೋರ್ಡ್ ಪರೀಕ್ಷೆ ನಡೆಸುವುದಕ್ಕೆ ಹೈಕೋರ್ಟ್ ಆದೇಶ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ನೂತನ ಸಭಾಂಗಣಕ್ಕೆ ಶಿಲಾನ್ಯಾಸ

Suddi Udaya

ಪದ್ಮುಂಜ ಸಹಕಾರ ಸಂಘದ ಮಹಾಸಭೆ : ಸಾಧಕರಿಗೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ, ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಣೆ

Suddi Udaya
error: Content is protected !!