ಕೇಂದ್ರದಲ್ಲಿ ಎನ್ ಡಿ ಎ ಬಿಜೆಪಿ ಮೋದಿ ಸರಕಾರ 10ನೇ ವರ್ಷಕ್ಕೆ ಪಾದಾರ್ಪಣೆ :ಪ್ರತಾಪಸಿಂಹ ನಾಯಕ್

Suddi Udaya

ಬೆಳ್ತಂಗಡಿ: ಕೇಂದ್ರದ ಎನ್ ಡಿ ಎ ಬಿಜೆಪಿ ಪಕ್ಷದ ನರೇಂದ್ರ ಮೋದಿ ಸರಕಾರ  9 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ 1೦ ನೇ ವರ್ಷಕ್ಕೆ ಪದಾರ್ಪಣೆಗೈಯುತ್ತಿದೆ. ಅವರ ಆಡಳಿತೆಯಲ್ಲಿ ಬದಲಾದ ಬಲಿಷ್ಠ ಭಾರತವನ್ನು ಕಾಣುತ್ತಿದ್ದೇವೆ. ವಿಶ್ವದಲ್ಲೇ ಹೆಚ್ಚುತ್ತಿರುವ ಭವ್ಯ  ಭಾರತದ ಆಡಳಿತ ವ್ಯವಸ್ಥೆ, ಸಮಾಜದ ಎಲ್ಲ ವರ್ಗದ ಕಲ್ಯಾಣ ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಬೇಕೆಂಬ  ಗುರಿ ,ಮೂಲಭೂತ ಸೌಕರ್ಯಗಳನ್ನು ತಲುಪಿಸುವಲ್ಲಿ ವೇಗ, ದೇಶಾದ್ಯಂತ ಕಾಮಗಾರಿಗಳು ,ಎಲ್ಲ ಕ್ಷೇತ್ರಗಳಲ್ಲಿ ಸೈನ್ಯದ ಸಲಕರಣೆಗಳ ಒದಗಿಸುವಲ್ಲಿ  ಆತ್ಮ ನಿರ್ಭರ ಭಾರತ  ಬೆಳೆಯುತ್ತಿದೆ . ಅದಕ್ಕಾಗಿ ಕೇಂದ್ರದ ಬಿಜೆಪಿ ಸರಕಾರವನ್ನು ಅಭಿನಂದಿಸಿ ಗೌರವಿಸುವುದಾಗಿ  ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದರು.                                                                                     ಅವರು ಮೇ 3೦ರಂದು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ನಡೆದ  ಪತ್ರಿಕಾಗೋಷ್ಠಿಯಲ್ಲಿ  ಕೇಂದ್ರ ಸರಕಾರದ ಸಾಧನೆಗಳನ್ನು   ಮಂಡಿಸಿದರು. ಕೇಂದ್ರದಲ್ಲಿ ಸತತ 9 ವರ್ಷಗಳ  ಆಡಳಿತವನ್ನು ಸಹಿಸದ ಕಾಂಗ್ರೆಸ್ಸೇತರ  ಪಕ್ಷಗಳು ಹತಾಶ ಮನಸ್ಸಿನಿಂದ , ಕುತ್ಸಿತ ರಾಜಕೀಯ ಮಾಡುತ್ತಿರುವುದನ್ನು ಜನತೆ ಗಮನಿಸುತ್ತಿದ್ದಾರೆ.   ನೂತನ ಸಂಸದ್ ಭವನ ಉದ್ಘಾಟನೆ ವೇಳೆ  ಕಾಂಗ್ರೆಸ್ ತನ್ನ ಸಣ್ಣತನ ತೋರಿಸಿರುವುದು ವಿಷಾಧನೀಯ. ಕಾಂಗ್ರೆಸ್ ಸರಕಾರ ಹೊಸ ಸಂಸದ ಭವನ ಯೋಜನೆಗೆ 35,೦೦೦ ಚ.ಅಡಿ ವಿಸ್ತೀರ್ಣಕ್ಕೆ  ರೂ 3೦೦೦ ಕೋಟಿ ವೆಚ್ಚ ಅಂದಾಜಿಸಿದ್ದು,ಅದೀಗ ರೂ 4೦೦೦ ಕೋಟಿ  ತಲುಪುತ್ತದೆ. ಆದರೆ ನರೇಂದ್ರ ಮೋದಿ ಸರಕಾರ 65,೦೦೦ ಚ.ಅಡಿ ವಿಸ್ತೀರ್ಣದ  ಆಧುನಿಕ ತಂತ್ರಜ್ಞಾನ ಅಳವಡಿಸಿ,ಭವಿಷ್ಯದ ದೃಷ್ಟಿಯಲ್ಲಿ ಪರಿಪೂರ್ಣ ಸಂಸದ್ ಭವನವನ್ನು ಕೇವಲ ರೂ 970 ಕೋಟಿ  ವೆಚ್ಚದಲ್ಲಿ  ನಿರ್ಮಿಸಿ ಮಾದರಿಯಾಗಿದೆ. ಆಡಳಿತ ಮಾಡಲು  ನಾವೇ ಸಮರ್ಥರು, ಬೇರೆ ಯಾರಿಂದಲೂ ಸಾಧ್ಯವಿಲ್ಲ  ಎಂಬ ಕಾಂಗ್ರೆಸ್ ಸ್ಥಿತಿಯಲ್ಲಿ ಕೇಂದ್ರ ಸರಕಾರದ ವಿರುದ್ಧ ಅಪಪ್ರಚಾರ ಮಾಡಲು ತಯಾರಾಗಿದ್ದಾರೆ. ಅವರಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆಗೆ  ಗೌರವವಿಲ್ಲ. ಸತ್ಯ, ನ್ಯಾಯ, ಸಮಾನತೆಯ ಪ್ರತೀಕವಾಗಿರುವ ಪವಿತ್ರ ರಾಜದಂಡವನ್ನು ವಾಕಿಂಗ್ ಸ್ಟಿಕ್ ಆಗಿ  ಮೂಲೆಗುಂಪಾಗಿಸಿದ್ದಾರೆ. ಅದು ಕಾಂಗ್ರೆಸ್ ಮನಸ್ಥಿತಿಯನ್ನು ಸೂಚಿಸುತ್ತದೆ. ಸಂಸದ್ ಭವನ ಭಾರತೀಯ ಸಂಸ್ಕೃತಿ,ಪರಂಪರೆಗೆ  ಗೌರವಾರ್ಹವಾಗಿರುವುದು ಅಭಿನಂದನೀಯ  ಎಂದು ನುಡಿದರು.                         

ರಾಜ್ಯ ರಾಜಕೀಯದ ಬಗೆಗೆ ಮಾತನಾಡಿದ ಅವರು  ಕಳೆದ  ವಿಧಾನಸಭಾ  ಚುನಾವಣೆಯಲ್ಲಿ  ಜನತೆಯ ತೀರ್ಪನ್ನು ಮನ್ನಿಸಿ ಮುಂದಿನ 5 ವರ್ಷ ಬಿಜೆಪಿ ಪ್ರತಿಪಕ್ಷ ಸ್ಥಾನದಲ್ಲಿ ನಿಲ್ಲುವುದು. ಯಾವುದೇ ದ್ವೇಷ ರಾಜಕಾರಣ   ಮಾಡುವುದಿಲ್ಲ . ಜನರ ಮನಸ್ಸಿನಲ್ಲಿ ತಪ್ಪು ಭಾವನೆ  ಬಿಂಬಿಸಿ ಕಾಂಗ್ರೆಸ್ ಸರಕಾರ  ಆಡಳಿತೆಗೆ ಬಂದಿದೆ. ಅಭಿವೃದ್ಧಿಯಲ್ಲಿ ರಾಜಕೀಯ ಮಾಡಬೇಡಿ. ಕಳೆದ ಸಾಲಿನ ಕಾಮಗಾರಿಗಳಲ್ಲಿ ರೂ 2೦,೦೦೦ ಕೋಟಿ ಅನುದಾನವನ್ನು ಸ್ಥಗಿತಗೊಳಿಸಿದ್ದಾರೆ. ಅವರದೇ ಮಾತಿನಲ್ಲಿ 4೦ ಶೇ ಕಡಿತ ಮಾಡಿ  ಸದ್ರಿ ಕೆಲಸಗಳನ್ನು  ಮಾಡಲು ಸಾಧ್ಯವೇ ಎಂಬುದನ್ನು  ತೋರಿಸಿಕೊಡಿ. ಹಿಂದಿನ ಸಿದ್ಧರಾಮಯ್ಯ ಸರಕಾರದ 6೦ ಕೇಸುಗಳನ್ನು ಲೋಕಾಯುಕ್ತದಲ್ಲಿ ತನಿಖೆ ಮಾಡಿಸಲಿ ಎಂದು ಸವಾಲೆಸೆದರು .                                                                 ಬೆಳ್ತಂಗಡಿಯಲ್ಲಿ ಬಿಜೆಪಿ ಶಾಸಕರ ಮೇಲೆ ವಿನಾಕಾರಣ, ದ್ವೇಷ ರಾಜಕಾರಣಕ್ಕೋಸ್ಕರ  ಎಫ್ ಐ ಆರ್ ದಾಖಲಿಸಿದ್ದಾರೆ. ಭಾಷೆಯಲ್ಲಿ ಸಭ್ಯತೆ ಇರಬೇಕಾಗುತ್ತದೆ.  ಅವರ ಅಸಭ್ಯ ಭಾಷೆಯನ್ನು ಬಿಜೆಪಿ ಖಂಡಿಸುತ್ತದೆ. ಕಾಂಗ್ರೆಸ್ ರಾಜ್ಯಾಧ್ಯಕ್ಷರು ಅಸ್ತಿ ವಿವರ ಬಹಿರಂಗಪಡಿಸದೆ ವಿನಾಕಾರಣ ಒಂದೇ ಸುಳ್ಳನ್ನು ಇಲ್ಲಿಯೂ ಮಾಡುತ್ತಿದ್ದಾರೆ. ಯಾವುದೇ ಆರೋಪ ಗಳನ್ನು  ತನಿಖೆ ಮಾಡಿಸಿ ಸತ್ಯ ಸಾಬೀತು ಪಡಿಸಲಿ.  ಅನುಭವದ ಜತೆಗೆ ಮನಸ್ಸು ಪ್ರಬುದ್ಧವಾಗಬೇಕು. ಸೌಹಾರ್ದ ವಾತಾವರಣವಿರಬೇಕು. ಅನಾಗರಿಕ,ಅಸಭ್ಯ ಶಬ್ದಗಳಿಂದ ಏನನ್ನೂ ಸಾಧಿಸಲಾಗದು ಎಂದು ಅಭಿಪ್ರಾಯ ಪಟ್ಟರು.                       

ರಾಜ್ಯ ಸರಕಾರದ ಗ್ಯಾರಂಟೀ ಯೋಜನೆಯ ಜವಾಬ್ದಾರಿ ಸರಕಾರಕ್ಕಿದೆ .ಯಾವುದೇ ಪೂರ್ವ ತಯಾರಿ ಇಲ್ಲದೆ ಗ್ಯಾರಂಟೀ ಯೋಜನೆ ಎಷ್ಟರ ಮಟ್ಟಿಗೆ  ಅನುಷ್ಠಾನಕ್ಕೆ ತರಲು  ಸಾಧ್ಯ? ಜನರಿಗೆ ಆಮಿಷ ಒಡ್ಡಿ  ಅವರನ್ನು ತಪ್ಪು ದಾರಿಗೆಳೆದು ಅಧಿಕಾರಕ್ಕೆ ಬಂದಿದ್ದೀರಿ. ಸಿದ್ಧರಾಮಯ್ಯ ಅವರು ಆತ್ಮಸಾಕ್ಷಿಗೆ ಸರಿಯಾಗಿ  ಎಷ್ಟರ ಮಟ್ಟಿಗೆ ಆರ್ಥಿಕ ಶಿಸ್ತು ಜಾರಿಗೆ ತರಲು ಸಾಧ್ಯ ? ಗ್ಯಾರಂಟೀ ಯೋಜನೆಯಿಂದ ಆರ್ಥಿಕ ಹೊರೆ ಎಷ್ಟರ ಮಟ್ಟಿಗೆ ಪೂರಕ  ಎಂದು ಅವರು ಪ್ರಶ್ನಿಸಿದರು.                                                                                             

ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ಬಿಜೆಪಿ ಮಂಡಲಾಧ್ಯಕ್ಷ  ಜಯಂತ ಕೋಟ್ಯಾನ್ ,ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ ರಾವ್ ,ಗಣೇಶ್ ಗೌಡ ಮತ್ತು ನಂದಕುಮಾರ್ ಉಪಸ್ಥಿತರಿದ್ದರು.

Leave a Comment

error: Content is protected !!