ಮಹೇಶ್ ಶೆಟ್ಟಿಯವರು‌ ಕಾಂಗ್ರೆಸ್ ಗೆ ಬೆಂಬಲ‌ ನೀಡಿದ್ರೆ ಅದು ವ್ಯಕ್ತಿಗತ, ಪಕ್ಷವಾಗಿ ಅಲ್ಲ, ಶಶಿರಾಜ್ ಶೆಟ್ಟಿಯವರ ಆರೋಪ ಸತ್ಯಕ್ಕೆ ದೂರವಾದದ್ದು

Suddi Udaya

ಬೆಳ್ತಂಗಡಿ: ಕಳೆದ 31 ವರ್ಷಗಳಿಂದ ಮಹೇಶ್ ಶೆಟ್ಟಿಯವರು ಹಿಂದೂ ಸಂಘಟನೆಯ ಮುಖೇನಾ ಹಿಂದುಗಳಿಗಾದ ಅನ್ಯಾಯದ ವಿರುದ್ದ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಶಶಿರಾಜ್ ಶೆಟ್ಟಿಯವರು ಮಹೇಶ್ ಶೆಟ್ಟಿಯವರ ಬಗ್ಗೆ ಕೇವಲವಾಗಿ ಮಾತನಾಡಿದ್ದನ್ನು ಖಂಡಿಸುತ್ತೇವೆ ಎಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಅನಿಲ್ ಕುಮಾರ್ ಅಂತರ ಹೇಳಿದರು.

ಅವರು ಜೂ 2 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಮಹೇಶ್ ಶೆಟ್ಟಿಯವರು ಕಾಂಗ್ರೇಸ್ ಕಚೇರಿಗೆ ಇಷ್ಟರತನಕ ಕಾಲಿಡಲಿಲ್ಲ, ಸದಸ್ಯತ್ವ ಇಲ್ಲ.ಕಾಂಗ್ರೆಸ್ ಬಾವುಟ ಹಾರಿಸಿಲ್ಲ,ಪ್ರಚಾರ ಸಭೆಯಲ್ಲಿ ಭಾಗವಹಿಸಿಲ್ಲ ಬಹುಶ ಅವರು ಬೆಂಬಲ‌ ನೀಡಿದ್ರೆ ಅದು ವ್ಯಕ್ತಿಗತ, ಪಕ್ಷವಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ಮಹೇಶ್ ಶೆಟ್ಟಿಯವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ. ನೀವು ಹೇಗೆ ಅವರನ್ನು ನಕಲಿ ಹಿಂದೂ ಎಂದು ಕರೆತಿರಿ. ನಿಮ್ಮದು ಯಾವ ಹಿಂದುತ್ವ ಎಂದು ಪ್ರಶ್ನಿಸಿದರು.

ಸೌಜನ್ಯಳ ಹೆಸರನ್ನು ರಾಜಕೀಯಕ್ಕೆ ಎಳೆದು ತರಬೇಡಿ, ನಮಗೆ ಇನ್ನೂ ನ್ಯಾಯ ಸಿಗಲಿಲ್ಲ. ಹತ್ತು ವರ್ಷದಿಂದ ಹೋರಾಟ ಮಾಡಿಕೊಂಡು ಬಂದವರು ಮಹೇಶ್ ಶೆಟ್ಟಿ ತಿಮರೋಡಿಯವರು. ನೀವು ನ್ಯಾಯ ತೆಗೆದುಕೊಡಿಸಿ,
ನಿಮ್ಮ ಹಿಂದೆ ನಾವು ಬರುತ್ತೇವೆ ಎಂದು ಸೌಜನ್ಯರವರ ತಾಯಿ ಕುಸುಮಾವತಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸಂಚಾಲಕ ಮನೋಜ್ ಕುಂಜರ್ಪ, ಪ್ರಮುಖರಾದ ಹರೀಶ್ ಕುಮಾರ್ ಬರಮೇಲು, ಸೌಜನ್ಯರವರ ಮಾವ ವಿಠಲ ಗೌಡ ಪಾಂಗಳ, ಪ್ರಜ್ವಲ್ ಕೆ.ವಿ ಗೌಡ, ಜಗದೀಶ್ ಉಪಸ್ಥಿತರಿದ್ದರು.

Leave a Comment

error: Content is protected !!