29.6 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಧರ್ಮಸ್ಥಳ :ಶ್ರೀ ಧ .ಮಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಸ್ತ್ರೀಯ ಸಂಗೀತ, ನೃತ್ಯ ತರಗತಿ ಆರಂಭ

ಧರ್ಮಸ್ಥಳ: ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ವಿಶೇಷ  ಒತ್ತು ನೀಡುವ ಸಲುವಾಗಿ ಧರ್ಮಸ್ಥಳದ  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಸ್ತ್ರೀಯ ಸಂಗೀತ ಹಾಗೂ ಶಾಸ್ತ್ರೀಯ ನೃತ್ಯದ ತರಗತಿಗಳ ಉದ್ಘಾಟನಾ ಸಮಾರಂಭ ಜೂ 7ರಂದು  ನೆರವೇರಿತು.   ಅದೇ ಶಾಲೆಯ ಹಳೆಯ ವಿದ್ಯಾರ್ಥಿನಿ ಭರತನಾಟ್ಯದಲ್ಲಿ ವಿಶೇಷ ಸಾಧನೆ ಮಾಡಿರುವ  ಕುಮಾರಿ ಧರಿತ್ರಿ ಭಿಡೆ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .                                                                                             

 ಈ ಸಂದರ್ಭದಲ್ಲಿ ಮಾತನಾಡಿದ  ಅವರು  ಮನಸ್ಸನ್ನು ಕೇಂದ್ರೀಕರಿಸಲು ನೃತ್ಯ ಹಾಗೂ ಸಂಗೀತ ಎರಡು ಉತ್ತಮ ಸಾಧನಗಳು. ಎರಡೂ  ಒಂದೇ ನಾಣ್ಯದ ಮುಖಗಳಿದ್ದಂತೆ. ಶ್ರದ್ಧೆ ಹಾಗೂ ಏಕಾಗ್ರತೆ ಇದ್ದರೆ ಬದುಕಿನಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು. ಹಲವು ರೋಗಗಳಿಗೆ ಇದು ರಾಮಬಾಣವೂ ಹೌದು ಎಂದು ತನ್ನ ವೈಯಕ್ತಿಕ ಜೀವನದ ಹಲವು ಯಶಸ್ಸಿನ ಉದಾಹರಣೆಗಳನ್ನು ನೀಡಿ ಶುಭ ಕೋರಿದರು. .   ಶಾಸ್ತ್ರೀಯ ಸಂಗೀತದ ತರಬೇತುದಾರರಾಗಿರುವ ನಿವೃತ್ತ ಶಿಕ್ಷಕಿ  ಶ್ರೀಮತಿ ಮನೋರಮ ತೋಳ್ಪಡಿತ್ತಾಯ ವಿದ್ಯಾರ್ಥಿ ಜೀವನದಲ್ಲಿ ಸಂಗೀತದ ಮಹತ್ವವನ್ನು ವಿವರಿಸಿದರು. ಭರತನಾಟ್ಯದ ತರಭೇತುದಾರರಾದ ಶ್ರೀಮತಿ ವಿದ್ಯಾ ಟೋಸರ್ ನಾಟ್ಯದ ಆರಂಭಿಕ ಹಂತದ ವಿಧಾನ ತಿಳಿಸಿದರು.                                                   

ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ.ವಿ. ಶಾಲೆಯಲ್ಲಿ ಸಂಗೀತ, ನೃತ್ಯ ತರಬೇತಿ ಆರಂಭಿಸಿದ ಉದ್ದೇಶ ,ವಿದ್ಯಾರ್ಥಿಗಳು ಅದನ್ನು ಸದುಪಯೋಗಪಡಿಸಿಕೊಳ್ಳುವ ರೀತಿ ಹಾಗೂ ಅದರ ಪರಿಣಾಮಗಳನ್ನು ಸವಿಸ್ತಾರವಾಗಿ ವಿವರಿಸಿದರು. ಆರಾಧ್ಯ ಪಿ ಜೋಶಿ  ನಿರೂಪಿಸಿದ  ಕಾರ್ಯಕ್ರಮದಲ್ಲಿ ಸನಾ ರಾಜೀವ್ ಸ್ವಾಗತಿಸಿ, ವೈಷ್ಣವಿ  ವಂದಿಸಿದರು . ಅತಿಥಿಗಳನ್ನು  ವಿದ್ಯಾರ್ಥಿಗಳಾದ  ಸಮ್ಯಕ್, ವಿದ್ವತ್ ಜೈನ್ ಮತ್ತು ಪ್ರಣವ್ ಜೋಯಿಷಾ ಪರಿಚಯಿಸಿದರು .ಶಾಲಾ ಶಿಕ್ಷಕರು, ವಿದ್ಯಾರ್ಥಿ ಪೋಷಕರು ಹಾಗೂ ವಿದ್ಯಾರ್ಥಿಗಳು  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು 

Related posts

“ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಉತ್ಸವ – ಸಂಭ್ರಮ: ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿಗೆ ಸಮಗ್ರ ಪ್ರಶಸ್ತಿ

Suddi Udaya

ಉಜಿರೆಯ ಎಸ್ ಎಲ್ ವಿ ಕನ್ಸ್ಟ್ರಕ್ಷನ್ ನ ಮಾಲಕ, ಸಿವಿಲ್ ಇಂಜಿನಿಯರ್ ಸಂಪತ್ ರತ್ನ ರಾವ್ ಅವರಿಗೆ ರಾಷ್ಟ್ರಮಟ್ಟದ ಎಮಿನೆಂಟ್ ಇಂಜಿನಿಯರ್ ಪ್ರಶಸ್ತಿ ಪ್ರದಾನ

Suddi Udaya

ರೆಖ್ಯ: ನಾರಾಯಣ ಕುಲಾಲ್ ನಿಧನ

Suddi Udaya

ಗರ್ಡಾಡಿ ಯುವಕ ಮಂಡಲದ ಅಧ್ಯಕ್ಷರಾಗಿ ದಿನೇಶ್ ಬಂಗೇರ ಆಯ್ಕೆ

Suddi Udaya

ಬಿಜೆಪಿ ನಿಟ್ಟಡೆ ಶಕ್ತಿಕೇಂದ್ರದ ಬೂತ್ ಸಮಿತಿಗಳ ರಚನೆ

Suddi Udaya

ಕಡಿರುದ್ಯಾವರ: ಮಲ್ಲಡ್ಕ ನಿವಾಸಿ ವಾಸು ಗೌಡ ನಿಧನ

Suddi Udaya
error: Content is protected !!