September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಧರ್ಮಸ್ಥಳ :ಶ್ರೀ ಧ .ಮಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಸ್ತ್ರೀಯ ಸಂಗೀತ, ನೃತ್ಯ ತರಗತಿ ಆರಂಭ

ಧರ್ಮಸ್ಥಳ: ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ವಿಶೇಷ  ಒತ್ತು ನೀಡುವ ಸಲುವಾಗಿ ಧರ್ಮಸ್ಥಳದ  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಸ್ತ್ರೀಯ ಸಂಗೀತ ಹಾಗೂ ಶಾಸ್ತ್ರೀಯ ನೃತ್ಯದ ತರಗತಿಗಳ ಉದ್ಘಾಟನಾ ಸಮಾರಂಭ ಜೂ 7ರಂದು  ನೆರವೇರಿತು.   ಅದೇ ಶಾಲೆಯ ಹಳೆಯ ವಿದ್ಯಾರ್ಥಿನಿ ಭರತನಾಟ್ಯದಲ್ಲಿ ವಿಶೇಷ ಸಾಧನೆ ಮಾಡಿರುವ  ಕುಮಾರಿ ಧರಿತ್ರಿ ಭಿಡೆ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .                                                                                             

 ಈ ಸಂದರ್ಭದಲ್ಲಿ ಮಾತನಾಡಿದ  ಅವರು  ಮನಸ್ಸನ್ನು ಕೇಂದ್ರೀಕರಿಸಲು ನೃತ್ಯ ಹಾಗೂ ಸಂಗೀತ ಎರಡು ಉತ್ತಮ ಸಾಧನಗಳು. ಎರಡೂ  ಒಂದೇ ನಾಣ್ಯದ ಮುಖಗಳಿದ್ದಂತೆ. ಶ್ರದ್ಧೆ ಹಾಗೂ ಏಕಾಗ್ರತೆ ಇದ್ದರೆ ಬದುಕಿನಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು. ಹಲವು ರೋಗಗಳಿಗೆ ಇದು ರಾಮಬಾಣವೂ ಹೌದು ಎಂದು ತನ್ನ ವೈಯಕ್ತಿಕ ಜೀವನದ ಹಲವು ಯಶಸ್ಸಿನ ಉದಾಹರಣೆಗಳನ್ನು ನೀಡಿ ಶುಭ ಕೋರಿದರು. .   ಶಾಸ್ತ್ರೀಯ ಸಂಗೀತದ ತರಬೇತುದಾರರಾಗಿರುವ ನಿವೃತ್ತ ಶಿಕ್ಷಕಿ  ಶ್ರೀಮತಿ ಮನೋರಮ ತೋಳ್ಪಡಿತ್ತಾಯ ವಿದ್ಯಾರ್ಥಿ ಜೀವನದಲ್ಲಿ ಸಂಗೀತದ ಮಹತ್ವವನ್ನು ವಿವರಿಸಿದರು. ಭರತನಾಟ್ಯದ ತರಭೇತುದಾರರಾದ ಶ್ರೀಮತಿ ವಿದ್ಯಾ ಟೋಸರ್ ನಾಟ್ಯದ ಆರಂಭಿಕ ಹಂತದ ವಿಧಾನ ತಿಳಿಸಿದರು.                                                   

ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ.ವಿ. ಶಾಲೆಯಲ್ಲಿ ಸಂಗೀತ, ನೃತ್ಯ ತರಬೇತಿ ಆರಂಭಿಸಿದ ಉದ್ದೇಶ ,ವಿದ್ಯಾರ್ಥಿಗಳು ಅದನ್ನು ಸದುಪಯೋಗಪಡಿಸಿಕೊಳ್ಳುವ ರೀತಿ ಹಾಗೂ ಅದರ ಪರಿಣಾಮಗಳನ್ನು ಸವಿಸ್ತಾರವಾಗಿ ವಿವರಿಸಿದರು. ಆರಾಧ್ಯ ಪಿ ಜೋಶಿ  ನಿರೂಪಿಸಿದ  ಕಾರ್ಯಕ್ರಮದಲ್ಲಿ ಸನಾ ರಾಜೀವ್ ಸ್ವಾಗತಿಸಿ, ವೈಷ್ಣವಿ  ವಂದಿಸಿದರು . ಅತಿಥಿಗಳನ್ನು  ವಿದ್ಯಾರ್ಥಿಗಳಾದ  ಸಮ್ಯಕ್, ವಿದ್ವತ್ ಜೈನ್ ಮತ್ತು ಪ್ರಣವ್ ಜೋಯಿಷಾ ಪರಿಚಯಿಸಿದರು .ಶಾಲಾ ಶಿಕ್ಷಕರು, ವಿದ್ಯಾರ್ಥಿ ಪೋಷಕರು ಹಾಗೂ ವಿದ್ಯಾರ್ಥಿಗಳು  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು 

Related posts

ಅರಸಿನಮಕ್ಕಿ ಸರಕಾರಿ ಪ್ರೌಢಶಾಲೆ ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷರಾಗಿ ವಾಮನ ತಾಮ್ಹ ನ್ ಕರ್ ಆಯ್ಕೆ

Suddi Udaya

ಕಲ್ಮಂಜ : ಬೆರ್ಕೆಯಲ್ಲಿ ಒಂಟಿ ಸಲಗ ದಾಳಿ: ಅಪಾರ ಕೃಷಿ ಹಾನಿ

Suddi Udaya

ಲಾಯಿಲ : ದಯಾ ವಿಶೇಷ ಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಮೇ 18: ವಿದ್ಯುತ್ ನಿಲುಗಡೆ

Suddi Udaya

ಡಾಮರೀಕರಣ ಭಾಗ್ಯಕ್ಕಾಗಿ ಕಾಯುತ್ತಿರುವ ಬಂಗೇರಕಟ್ಟೆ- ನೆತ್ತರ ರಸ್ತೆ

Suddi Udaya

ಚಾಲಕನ ನಿಯಂತ್ರಣ ತಪ್ಪಿ ಗುಂಡ್ಯ ಹೊಳೆಗೆ ಬಿದ್ದ ಖಾಸಗಿ ಬಸ್‌; ಡ್ರೈವರ್‌ ಸ್ಥಳದಲ್ಲೇ ಸಾವು

Suddi Udaya
error: Content is protected !!