ನಿಡಿಗಲ್-ಪಜಿರಡ್ಕ ಕಾಂಕ್ರೀಟ್ ರಸ್ತೆಯಲ್ಲಿ ಕುಸಿತ ಭೀತಿ

Suddi Udaya

ಬೆಳ್ತಂಗಡಿ : ನಿಡಿಗಲ್ ನಿಂದ ಪಜಿರಡ್ಕಮೂಲಕ ಕನ್ಯಾಡಿಯನ್ನು ಸಂಪರ್ಕಿಸುವ ಕಲ್ಮಂಜ ಗ್ರಾಮದ ಗುಮಟಬೈಲು ಎಂಬಲ್ಲಿ ಕಾಂಕ್ರೀಟ್ ರಸ್ತೆ ಕುಸಿಯುವ ಭೀತಿ ಎದುರಾಗಿದೆ.

ಇಲ್ಲಿನ ಪರಿಸರದ ರಸ್ತೆಯು ಎತ್ತರದಲ್ಲಿದ್ದು ಅದರ ಬುಡ ಭಾಗದ ಮಣ್ಣು ಇತ್ತೀಚಿನ ದಿನಗಳಲ್ಲಿ ಸುರಿಯುತ್ತಿರುವ ಮಳೆಯಿಂದ ಸವಕಳಿಗೊಂಡಿದ್ದು ರಸ್ತೆಯಲ್ಲಿ 10 ಅಡಿಗಳಿಗಿಂತ ಅಧಿಕ ಉದ್ದಕ್ಕೆ ಹಾಗೂ ಎರಡು ಅಡಿಯಷ್ಟು ಅಗಲ ಪ್ರದೇಶದಲ್ಲಿ ಕುಸಿದಿದೆ ಇದರಿಂದ ಅಷ್ಟು ಸ್ಥಳದ ಕಾಂಕ್ರೀಟ್ ಗೆ ಬುಡ ಭಾಗದಲ್ಲಿ ಆಧಾರ ಇಲ್ಲದಂತಾಗಿದೆ.

ಮುಂದಿನ ದಿನಗಳಲ್ಲಿ ಮಳೆ ಸುರಿವಾಗ ಈ ರಸ್ತೆಯ ಭಾಗ ಸಂಪೂರ್ಣ ಕುಸಿದು ಬೀಳುವ ಸಾಧ್ಯತೆ ಇದೆ ಪ್ರಸ್ತುತ ಘನವಾಹನಗಳು ಸಂಚರಿಸಿದರು ರಸ್ತೆ ಕುಸಿಯಬಹುದು. ರಸ್ತೆಯ ಇಕ್ಕೆಲಗಳಲ್ಲೂ ಚರಂಡಿ ನಿರ್ಮಿಸಲು ಜಾಗವಿಲ್ಲದ ಕಾರಣ ಇಲ್ಲಿ ಮಳೆ ನೀರು ರಸ್ತೆ ಮೂಲಕವೇ ಹರಿದು ಕುಸಿತ ಉಂಟಾದ ಜಾಗದ ಮೂಲಕವೇ ನೀರು ಮುಂದುವರಿಯುತ್ತದೆ. ಇದು ಹೆಚ್ಚಿನ ಮಣ್ಣಿನ ಸವಕಳಿಗೆ ಕಾರಣವಾಗುತ್ತಿದೆ.

Leave a Comment

error: Content is protected !!