ಉಜಿರೆ: ಎಸ್ ಡಿಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಉಜಿರೆ : “ಮಕ್ಕಳ ಸಮಸ್ಯೆಗಳ ಅರಿವಿರುವುದು ಪೋಷಕರಿಗೆ ಮುಖ್ಯ ಹಾಗೆಯೇ ವಯಸ್ಸಿಗೆ ತಕ್ಕಂತೆ ಪೋಷಕರಾದವರು ಮಕ್ಕಳನ್ನು ಅರ್ಥೈಸಿಕೊಂಡು ಸಿದ್ಧಾಂತಗಳೊಂದಿಗೆ ಮಗುವನ್ನು ಬೆಳೆಸುವುದು ಅಗತ್ಯ” ಎಂದು ಎಸ್. ಡಿ. ಎಮ್ ಸ್ನಾತಕೋತ್ತರ ಪದವಿ ಎಮ್.ಎಸ್.ಡಬ್ಲ್ಯೂ ವಿಭಾಗದ ಉಪನ್ಯಾಸಕಿ ಡಾ. ಧನೇಶ್ವರಿ ಇವರು ಹೇಳಿದರು.

ಇವರು ಎಸ್. ಡಿ. ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ. ಬಿ. ಎಸ್. ಇ), ಉಜಿರೆಯಲ್ಲಿ ಜೂ.14 ರಂದು ನಡೆದ 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ “ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ” ಎಂಬ ವಿಷಯದ ಕುರಿತು ಮಾತನಾಡಿದರು.

ಶಾಲಾ ಶಿಕ್ಷಕಿ ಶಾಂಟಿ ಜಾರ್ಜ್ ಇವರು ಶಾಲಾ ವಾರ್ಷಿಕ ವರದಿ ವಾಚನ ಮಾಡಿದರು. ವಿಷಯವಾರು ಶಿಕ್ಷಕರು ತಮ್ಮ ಪರಿಚಯದೊಂದಿಗೆ ತಾವು ಬೋಧಿಸುವ ವಿಷಯದ ಕುರಿತು ಪೋಷಕರಿಗೆ ತಿಳಿಸಿದರು.

ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಮನ್ಮೋಹನ್ ನಾಯಕ್ ಇವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕರು ಸ್ವಾಗತಿಸಿ, ಶಿಕ್ಷಕಿ ಸವಿತ ವೇದಪ್ರಕಾಶ್ ನಿರೂಪಣೆ ಮತ್ತು ವಂದಿಸಿದರು.

Leave a Comment

error: Content is protected !!