ಉಜಿರೆ: ಎಸ್. ಡಿ. ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯಕ್ಷಗಾನ ತರಬೇತಿ ಉದ್ಘಾಟನೆ

Suddi Udaya

ಉಜಿರೆ : “ಸಂಸ್ಕೃತಿ, ಸಂಸ್ಕಾರ, ಜೀವನ ಮೌಲ್ಯ, ಕೌಶಲದ ಅಭಿವೃದ್ಧಿಗೆ ಯಕ್ಷಗಾನದ ಪಾತ್ರ ಮಹತ್ವವಿದೆ” ಎಂದು ಎಸ್. ಡಿ. ಎಮ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಸೋಮಶೇಖರ್ ಶೆಟ್ಟಿ ಹೇಳಿದರು.ಇ

ವರು ಎಸ್. ಡಿ. ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ. ಬಿ. ಎಸ್. ಇ), ಉಜಿರೆ ಇಲ್ಲಿ ಜೂ.23 ರಂದು ನಡೆದ ‘ಯಕ್ಷಗಾನ ತರಬೇತಿ’ ತರಗತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಮತ್ತು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.”ಬುದ್ಧಿಯನ್ನು ತಿದ್ದುವ ಕಲೆ ಹಾಗೂ ಸಂಸ್ಕಾರವನ್ನು ಬೆಳೆಸುವ ಕಲೆಯಾಗಿದೆ” ಎಂದು ಯಕ್ಷಗಾನ ನಾಟ್ಯಗುರುಗಳಾದ ಲಕ್ಷ್ಮಣ ಗೌಡ ಇವರು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಮುಖ್ಯ ಶಿಕ್ಷಕರಾದ ಮನಮೋಹನ್ ನಾಯಕ್ ಅಧ್ಯಕ್ಷೀಯ ನುಡಿಗಳನ್ನಾಡಿದರು.

ವೇದಿಕೆಯಲ್ಲಿ ಎಸ್.ಡಿ. ಎಮ್ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದ ಮುಖ್ಯ ಶಿಕ್ಷಕಿ ಪರಿಮಳ ಇವರು ಉಪಸ್ಥಿತರಿದ್ದರು. ಯಕ್ಷಗಾನ ತರಬೇತಿ ತರಗತಿಯ ಸಂಯೋಜಕರಾದ ಶಿಕ್ಷಕ ಕಿರಣ್ ರಾಜ್ ಕಾರ್ಯಕ್ರಮ ನಿರೂಪಣೆ ಮಾಡಿದರು.

Leave a Comment

error: Content is protected !!