26.5 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಿ.ವಿ.ಎಫ್. ಬೆಳ್ತಂಗಡಿ ತಾ. ಘಟಕದಿಂದ ’ಭಾರತೀಯ ಸಂವಿಧಾನ ದಿನಾಚರಣೆ’

ಬೆಳ್ತಂಗಡಿ : ಬಾಬಾ ಸಾಹೇಬ್ ಅಂಬೇಡ್ಕರ್ ಭಾರತದ ಸಂವಿಧಾನ ಸಮರ್ಪಣೆಯ ಸಂದರ್ಭ ಈ ಸಂವಿಧಾನವು ಕೆಟ್ಟ ಆಡಳಿತಗಾರರ ಕೈಗೆ ಸಿಕ್ಕಿದಲ್ಲಿ ಕೆಟ್ಟ ಆಡಳಿತವನ್ನು ನಡೆಸಬಹುದು , ಉತ್ತಮ ಆಡಳಿತಗಾರರ ಕೈಗೆ ಸಿಕ್ಕಿದಲ್ಲಿ ಉತ್ತಮ ಆಡಳಿತ ಸಿಗಬಹುದು ಎಂದಿದ್ದಾರೆ. ಈ ದೇಶದ ಶೋಷಿತ ಸಮುದಾಯವು ಸ್ವತಂತ್ರ ರಾಜಕೀಯ ಅಧಿಕಾರದ ಮೂಲಕ ಸಂವಿಧಾನ ಜಾರಿಗೊಳಿಸುವ ಉನ್ನತ ಸ್ಥಾನಕ್ಕೆ ಮುಟ್ಟಬೇಕು ಎಂಬುದೇ ಅಂಬೇಡ್ಕರ್ ಕಂಡ ಮಹೋನ್ನತ ಕನಸಾಗಿತ್ತು ಎಂದು ನಿವೃತ್ತ ತಹಶೀಲ್ದಾರ್, ಸಮಾಜ ಪರಿವರ್ತನಾ ಚಳುವಳಿಯ ರಾಜ್ಯ ನಾಯಕ ಸಿ. ಮಹಾದೇವಯ್ಯ ಹೇಳಿದರು.
ಅವರು ಬಹುಜನ ವಾಲೆಂಟಿಯರ್ ಫೋರ್ಸ್ -ಬಿ.ವಿ.ಎಫ್. ಕರ್ನಾಟಕ ಇದರ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಜ26 ರಂದು ಜರಗಿದ “ಭಾರತೀಯ ಸಂವಿಧಾನ ದಿನಾಚರಣೆ” ಉದ್ಘಾಟಿಸಿ ಮಾತನಾಡಿದರು.


ಭಾರತೀಯ ಸಂವಿಧಾನದ ಆಶಯವು ಶ್ರೇಷ್ಠವಾಗಿದ್ದು ಈ ಸಂವಿಧಾನವು ಸಮರ್ಪಕವಾಗಿ ಜಾರಿಯಾದರೆ ಕೇವಲ ಎರಡೇ ದಶಕದಲ್ಲಿ ದೇಶವು ಸಾಮ್ರಾಟ್ ಅಶೋಕ ಸಾಮ್ರಾಜ್ಯದಂಥ ಸುವರ್ಣ ಭಾರತವಾಗಿ ಕಂಗೊಳಿಸುತ್ತಿತ್ತು ಎಂದು ಅವರು ಪ್ರತಿಪಾದಿಸಿದರು.


ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಮೂಡಬಿದ್ರೆಯ ಶಿಕ್ಷಕ ಧೀಮಾನ್ ಡಾ.ದೊರೆಸ್ವಾಮಿ ಮಾತನಾಡಿ
ಭಾರತದ ಸಂವಿಧಾನವು ದೇಶದ ಸರ್ವ ಸಮುದಾಯಗಳಿಗೆ ಸಮಾನ ಸಾಮಾಜಿಕ,ಧಾರ್ಮಿಕ, ಹಾಗೂ ರಾಜಕೀಯ ಹಕ್ಕುಗಳನ್ನು ಕೊಟ್ಟಿದ್ದು ಸಂವಿಧಾನದ ಆಶಯಗಳನ್ನು ಆಳವಾಗಿ ಅರ್ಥ ಮಾಡಿಕೊಂಡರೆ ಸಂವಿಧಾನದ ಮಾತೃಹೃದಯವು ನಮ್ಮೆಲ್ಲರನ್ನು ಹೇಗೆ ಕಾಪಾಡುವ ಶಕ್ತಿ ಹೊಂದಿದೆ ಎಂಬುದರ ಅರಿವಾಗಬಹುದು.
ಸಂವಿಧಾನದ ಆಶಯಗಳನ್ನು ಅನುಸರಿಸಿದರೆ ಸಂವಿಧಾನದ ರಕ್ಷಿಸಿದಂತೆ ಎಂದರು. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಕನಸಿನ ಭಾರತವೇ ಸಂವಿಧಾನದ ಆಶಯವಾಗಿದೆ ಎಂದು ವಿಶ್ಲೇಷಿಸಿದರು.
ಮುಖ್ಯ ಅತಿಥಿಗಳಾಗಿ ಸ್ಟ್ರಕ್ಚರಲ್ ಇಂಜಿನಿಯರ್ ಡಾ.ಸಹಜ್ ಕೆ.ವಿ. ಮಂಗಳೂರು ಬಿ.ವಿ.ಎಫ್. ಜಿಲ್ಲಾ ಸಂಯೋಜಕ ಧೀಮಾನ್ ನಿತಿನ್ ಮುತ್ತೂರು, ಸರಕಾರಿ ಪ್ರ.ದ. ಕಾಲೇಜು ಜಿಡೇಕಲ್ಲು ಇಲ್ಲಿನ ಅರ್ಥಶಾಸ್ತ್ರ ಉಪನ್ಯಾಸಕ ಧೀಮಾನ್ ಕೇಶವ ಪಿ.ಎನ್. ಮಾತನಾಡಿ ಸಂವಿಧಾನದ ವಿಷಯದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಪತ್ರಕರ್ತ, ಬಿ.ವಿ.ಎಫ್.ತಾಲೂಕು ಸಂಯೋಜಕ ಅಚುಶ್ರೀ ಬಾಂಗೇರು ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.


ಈ ಸಂದರ್ಭ ಡಾ.ಸಹಜ್ ಕೆ.ವಿ.ಅವರನ್ನು ಸನ್ಮಾನಿಸಲಾಯಿತು. ಬಿ.ವಿ.ಎಫ್. ಕಕ್ಕಿಂಜೆ ಘಟಕದ ಪದಾಧಿಕಾರಿಗಳನ್ನು ವೇದಿಕೆಗೆ ಆಹ್ವಾನಿಸಿ ಗುಲಾಬಿ ನೀಡಿ ಅಭಿನಂದಿಸುವ ಮೂಲಕ ಮಾನವೀಯ ಸ್ಪಂದನಾ ಕಾರ್ಯಗಳನ್ನು ಗುರುತಿಸಲಾಯಿತು. ರವಿ ಕುಮಾರ್ ವಾರಿಜಾಕ್ಷಿ ದಂಪತಿಯ ಪುತ್ರ , ಗಣರಾಜ್ಯೋತ್ಸವದಂದು ಜನ್ಮದಿನವಾಗಿರುವ ಗಣರಾಜ್ ಆರ್.ವಿ. ಇವರ ಹುಟ್ಟುಹಬ್ಬಕ್ಕೆ ಕೇಕ್ ಕತ್ತರಿಸಿ ಶುಭ ಕೋರಲಾಯಿತು.


ಸಮಾಜ ಪರಿವರ್ತನಾ ಚಳುವಳಿಯ ಮುಖಂಡರಾದ ಶಿವಪ್ಪ ಗರ್ಡಾಡಿ, ಪಿ.ಎಸ್.ಶ್ರೀನಿವಾಸ್, ಸಂಜೀವ ನೀರಾಡಿ, ಸಂಜೀವ ಬಿ.ಕೆ., ಅಮ್ಮು ಬಿ.ಕೆ., ದಲಿತ ಮುಖಂಡರಾದ ಪಿ.ಕೆ.ರಾಜು ಪಡಂಗಡಿ, ಕೆ.ನೇಮಿರಾಜ್, ಪಿ.ಕೆ.ಚೀಂಕ್ರ, ಮಾಧವ ಕೊಯ್ಯೂರು, ಬಿ.ವಿ.ಎಫ್ ಕಕ್ಕಿಂಜೆ ಘಟಕ ಅಧ್ಯಕ್ಷರಾದ ಮೋನಪ್ಪ ಉಪಸ್ಥಿತರಿದ್ದರು.


ಕು.ಸುರೇಖಾ, ಕು.ಅಧಿತಿ ಇವರ ಭೀಮಗೀತೆಯೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡಿತು. ಲೋಕೇಶ್ ನೀರಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Related posts

ಪೆರ್ಣಮಂಜದಲ್ಲಿ ರಸ್ತೆಗುರುಳಿದ ಭಾರಿ ಗಾತ್ರದ ಮರಗಳು, ಸಂಚಾರದಲ್ಲಿ ವ್ಯತ್ಯಾಸ

Suddi Udaya

ಕರ್ನಾಟಕ ಸ್ಟೇಟ್ ಟೈಲರ್ ಎಸೋಸಿಯೇಷನ್ ಅಳದಂಗಡಿ ವಲಯದ ವಾರ್ಷಿಕ ಮಹಾಸಭೆ: ನೂತನ ಸಮಿತಿ ರಚನೆ

Suddi Udaya

ಲಾಯಿಲ: ಕುಂಟಿನಿ ಸ.ಕಿ.ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ನಾಳ ಯಕ್ಷಕೂಟದ ವತಿಯಿಂದ ಯಕ್ಷಗಾನ ವೈಭವ

Suddi Udaya

ಗುರುವಾಯನಕೆರೆ ಹೋಟೆಲ್ ರೇಸ್ ಇನ್ ನ ಆಹಾರ ವಿಭಾಗವಾದ “ಪೆಗ್ಸ್ ರೆಸ್ಟೋ ಬಾರ್ & ಫ್ಯಾಮಿಲಿ ರೆಸ್ಟೋರೆಂಟ್” ಹೊಸ ಆಡಳಿತದೊಂದಿಗೆ ಶುಭಾರಂಭ

Suddi Udaya

ಕಲ್ಮಂಜ : ಬೆರ್ಕೆಯಲ್ಲಿ ಒಂಟಿ ಸಲಗ ದಾಳಿ: ಅಪಾರ ಕೃಷಿ ಹಾನಿ

Suddi Udaya
error: Content is protected !!