24.8 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಣಿಯೂರು: ಟೀಂ ನವಕೇಸರಿ ಮಲೆಂಗಲ್ಲು ಮತ್ತು ಅರಣ್ಯ ಇಲಾಖೆ ವತಿಯಿಂದ ವನಮಹೋತ್ಸವ

ಕಣಿಯೂರು: ಟೀಂ ನವಕೇಸರಿ ಮಲೆಂಗಲ್ಲು ಮತ್ತು ಅರಣ್ಯ ಇಲಾಖೆ ಉಪ್ಪಿನಂಗಡಿ ವಲಯ ಇದರ ಸಹಕಾರದೊಂದಿಗೆ ಶ್ರೀ ಉಮಾಮಹೇಶ್ವರ ಭಜನಾ ಮಂದಿರ ಮಲೆಂಗಲ್ಲು ಮತ್ತು ಉಮಾಮಹೇಶ್ವರ ದೇವಸ್ಥಾನ ಮಲೆಂಗಲ್ಲು ಇಲ್ಲಿ ವಿವಿಧ ಬಗೆಯ ಗಿಡಗಳನ್ನು ನೆಟ್ಟು ಸಮಾಜದಲ್ಲಿ ಪರಿಸರದ ಬ್ಗಗೆ ಜಾಗೃತಿ ಮೂಡಿಸಿ ವನಮಹೋತ್ಸವ ಆಚರಿಸಲಾಯಿತು.

ಕೊಲ್ಲಾಜೆ ಚಿದಾನಂದ ರಾವ್ ಗಿಡ ನೆಡುವುದರ ಮೂಲಕ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾಗಿ ಕಣಿಯೂರು ಗ್ರಾ.ಪಂ. ಅಧ್ಯಕ್ಷೆ ಗಾಯತ್ರಿ ಗೋಪಾಲ ಗೌಡ, ಉಪಾಧ್ಯಕ್ಷೆ ಜಲಜಾಕ್ಷಿ, ಕಣಿಯೂರು ಉಪವಲಯಾರಣ್ಯಧಿಕಾರಿ ಬಿ. ಜರಾಲ್ಡ್ ಡಿಸೋಜ, ಕೊಯ್ಯೂರು ಗಸ್ತು ಪಾಲಕರು ಜಗದೀಶ್, ಬಂದಾರು ಗಸ್ತು ಪಾಲಕರು ಜಗದೀಶ್ ಕೆ.ಎನ್, ಅರಣ್ಯ ವೀಕ್ಷಕರು ರವಿ, ಸೇಸಪ್ಪ, ರವಿ ಪದ್ಮುಂಜ, ದಿನೇಶ್ ಮಲೆಂಗಲ್ಲು ಉಪಸ್ಥಿತರಿದ್ದರು.

ಮುಖೇಶ್ ಪದ್ಮುಂಜ ವಂದಿಸಿದರು. ಟೀಂ ನವಕೇಸರಿಯ ಅಧ್ಯಕ್ಷರು, ಹಾಗೂ ಸದಸ್ಯರು ಉಪಸ್ಥಿತರಿದ್ದರು.

Related posts

ಕುವೆಟ್ಟು ಗ್ರಾ.ಪಂ ಮಾಜಿ ಸದಸ್ಯ ಭಾಜಪ ದ ನಿಷ್ಠಾವಂತ ಕಾರ್ಯಕರ್ತ ನಾರಾಯಣ ಆಚಾರ್ಯ ಗುರುವಾಯನಕೆರೆ ನಿಧನ

Suddi Udaya

ಜು.16-ಆ.16: ಲಾಯಿಲ ಪ್ರಸನ್ನ ಆಯುರ್ವೇದ ಆಸ್ಪತ್ರೆಯಲ್ಲಿ ಆಟಿ ಚಿಕಿತ್ಸಾ ಪ್ಯಾಕೇಜ್

Suddi Udaya

ದಿಡುಪೆ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯಿಂದ ಗಣೇಶೋತ್ಸವ: ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

Suddi Udaya

ಧರ್ಮಸ್ಥಳ ಲಕ್ಷದೀಪೋತ್ಸವ: ಜ್ಞಾನ, ವಿಜ್ಞಾನ ಮತ್ತು ಸುಜ್ಞಾನದ ತ್ರಿವೇಣಿ ಸಂಗಮ

Suddi Udaya

ಸಾಹಿತ್ಯ ಸಮ್ಮೇಳನದ ಸಂಯೋಜನಾ ಸಮಿತಿಯಿಂದ ಶಾಸಕ ಹರೀಶ್ ಪೂಂಜರ ಭೇಟಿ: ಕನ್ನಡ ಸಾಹಿತ್ಯ ಸಮ್ಮೇಳನವು ಸುವರ್ಣ ಕರ್ನಾಟಕದ ಆಶಯವನ್ನು ಬಿಂಬಿಸುವಂತಿರಲಿ: ಶಾಸಕ ಹರೀಶ್ ಪೂಂಜ

Suddi Udaya

ರಾಜ್ಯಮಟ್ಟದ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ : ಹೇಮಚಂದ್ರರಿಗೆ ಬೆಸ್ಟ್ ಲಿಪ್ಟರ್ ಕರ್ನಾಟಕ ಪ್ರಶಸ್ತಿ

Suddi Udaya
error: Content is protected !!